ಮಂಗಳವಾರ, ಆಗಸ್ಟ್ 16, 2022
29 °C

ಶೃಂಗೇರಿ: 19ರಂದು ಲೋಕ್‌ ಅದಾಲತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶೃಂಗೇರಿ: ಇಲ್ಲಿನ ಜೆಎಂಎಫ್‍ ನ್ಯಾಯಾಲಯದಲ್ಲಿ 19ರಂದು ಲೋಕ್‌ ಅದಾಲತ್ ನಡೆಸಲಾಗುತ್ತಿದೆ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶೆ ಅನಿತಾ ತಿಳಿಸಿದರು.

ಶೃಂಗೇರಿ ನ್ಯಾಯಾಲಯದ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಈ ವರ್ಷದ ಕೊನೆಯ ಅದಾಲತ್ ಇದಾಗಿದ್ದು, ಬಾಕಿ ಇರುವ ಪ್ರಕರಣವನ್ನು ರಾಜಿ ಮೂಲಕ ಬಗೆಹರಿಸಿಕೊಳ್ಳಲು ಅವಕಾಶವಿದೆ. ಇಲ್ಲಿನ ಸಿವಿಲ್ ನ್ಯಾಯಾಲಯದಲ್ಲಿ 277 ಪ್ರಕರಣವಿದ್ದು, ಇದರಲ್ಲಿ 104 ಪ್ರಕರಣ ಗುರುತಿಸಿದ್ದು, ಇವುಗಳನ್ನು ಲೋಕ್ ಅದಾಲತ್‍ನಲ್ಲಿ ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ’ ಎಂದರು.

‘ರಾಜಿ ಆಗುವಂತಹ ಪ್ರಕರಣವನ್ನು ನೇರವಾಗಿ ಅರ್ಜಿ ನೀಡಬೇಕು. ಅದಾಲತ್‍ನಲ್ಲಿ ಎಲ್ಲಾ ರೀತಿಯ ಸಿವಿಲ್ ವ್ಯಾಜ್ಯ, ಮೋಟಾರ್ ವಾಹನ ಪರಿಹಾರ ಕಾಯ್ದೆಗೆ ಸಂಬಂಧಿಸಿದ ಪ್ರಕರಣ, ರಾಜಿ ಆಗುವಂತಹ ಕ್ರಿಮಿನಲ್ ಪ್ರಕರಣ, ಬ್ಯಾಂಕ್, ಚೆಕ್, ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ, ಜೀವಾನಾಂಶ, ವ್ಯಾಜ್ಯಪೂರ್ವ, ಈಗಾಗಲೇ ನ್ಯಾಯಾಲ ಯಕ್ಕೆ ದಾಖಲಾಗದ ವಿವಾದ ಇರುವ ಪ್ರಕರಣವನ್ನು ಸಹ ರಾಜಿ ಮೂಲಕ ಇತ್ಯರ್ಥ ಪಡಿಸಲಾಗುವುದು’ ಎಂದರು.

ಜೆಎಂಎಫ್‍ ನ್ಯಾಯಾಲಯದ ನ್ಯಾಯಾಧೀಶ ಎಸ್.ಸೂರ್ಯ ನಾರಾಯಣ ಮಾತನಾಡಿ, ‘ಲೋಕ್‌ ಅದಾಲತ್‍ನಲ್ಲಿ ಇತ್ಯರ್ಥವಾದ ಪ್ರಕರಣ ಗಳಿಗೆ ಮೇಲ್ಮನವಿ ಇರುವುದಿಲ್ಲ. ಒಂದು ವೇಳೆ ಇಲ್ಲಿ ಇತ್ಯರ್ಥವಾದ ಪ್ರಕರಣದ ಆದೇಶವನ್ನು ರದ್ದುಗೊಳಿಸಲು ಉಚ್ಚ ನ್ಯಾಯಾಲಯದಲ್ಲಿ ರಿಟ್ ಸಲ್ಲಿಸಬಹುದಾಗಿದೆ. ಇತ್ಯರ್ಥವಾದ ಸಿವಿಲ್ ಪ್ರಕರಣದಲ್ಲಿ ನ್ಯಾಯಾಲಯದ ಶುಲ್ಕವನ್ನು ಸಂಪೂರ್ಣವಾಗಿ ಹಿಂದಿರುಗಿಸಲಾಗುತ್ತದೆ. ರಾಜಿಯಾದ ಪ್ರಕರಣದಿಂದ ಉಭಯ ಕಕ್ಷಿದಾರರ ನಡುವೆ ದ್ವೇಷ ಕಡಿಮೆಯಾಗಿ ಕಕ್ಷಿದಾರರ ಸಮಯವೂ ಉಳಿಯುತ್ತದೆ’ ಎಂದರು.

ಸಹಾಯಕ ಸರ್ಕಾರಿ ಅಭಿಯೋಜಕಿ ಹರಿಣಾಕ್ಷಿ, ವಕೀಲರ ಸಂಘದ ಅಧ್ಯಕ್ಷ ಜಿ.ಎಂ.ಸತೀಶ್ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು