ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಿಮೆ ಇಳುವರಿ: ಕೃಷಿ ವಿಜ್ಞಾನಿಗಳ ಭೇಟಿ

Last Updated 28 ಜನವರಿ 2023, 14:18 IST
ಅಕ್ಷರ ಗಾತ್ರ

ಕೊಟ್ಟಿಗೆಹಾರ: ಮೂಡಿಗೆರೆಯ ಕೃಷಿ ಇಲಾಖೆಯಿಂದ ನೀಡಲಾಗಿದ್ದ ಭತ್ತ ಬಿತ್ತನೆ ಬೀಜದಿಂದ ಬೆಳೆಯಲ್ಲಿ ಕಡಿಮೆ ಇಳುವರಿ ಬಂದಿದ್ದು ನಷ್ಟ ಉಂಟಾಗಿದೆ ಎಂದು ರೈತರೊಬ್ಬರು ಆರೋಪಿಸಿದ ಹಿನ್ನನೆಯಲ್ಲಿ ಕೃಷಿ ವಿಜ್ಞಾನಿಗಳು ತರುವೆ ಗ್ರಾಮಕ್ಕೆ ಭೇಟಿ ನೀಡಿ ಬೆಳೆ ಪರಿಶೀಲನೆ ನಡೆಸಿದರು.

ತರುವೆ ಗ್ರಾಮದ ರೈತ ಟಿ.ಸಿ.ರಮೇಶ್ ಅವರು ಮೂಡಿಗೆರೆ ಸಮೀಪದ ಬಿಳುಗುಳದಲ್ಲಿರುವ ಕೃಷಿ ಇಲಾಖೆಯಿಂದ ತುಂಗಾ ತಳಿಯ ಭತ್ತವನ್ನು ಕಳೆದ ವರ್ಷದ ಜುಲೈ ಮೊದಲ ವಾರದಲ್ಲಿ ತಂದಿದ್ದು, ಗದ್ದೆಯಲ್ಲಿ ನಾಟಿ ಮಾಡಿದ್ದರು. ಆದರೆ, ಬೆಳೆ ಜೊಳ್ಳಾಗಿ ಫಸಲು ಬಂದಿದ್ದು ನಷ್ಟ ಉಂಟಾಗಿದೆ ಎಂದು ಆರೋಪಿಸಿದ್ದರು. ಈ ಹಿನ್ನಲೆಯಲ್ಲಿ ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಗಿರೀಶ್, ಕೃಷಿ ಮತ್ತು ತೋಟಗಾರಿಕಾ ಕೇಂದ್ರದ ವಿಜ್ಞಾನಿ ಗಣಪತಿ, ಕೃಷಿ ಅಧಿಕಾರಿ ಎಂ.ಆರ್.ವೆಂಕಟೇಶ್ ಭೇಟಿ ನೀಡಿ ಪರಿಶೀಲಿಸಿದರು.

ಕೃಷಿ ಅಧಿಕಾರಿ ಎಂ.ಆರ್.ವೆಂಕಟೇಶ್ ಮಾತನಾಡಿ, ‘ಬೆಳೆಯ ಮಾದರಿಯನ್ನು ಸಂಗ್ರಹಿಸಿದ್ದು, ಶಿವಮೊಗ್ಗಕ್ಕೆ ಕಳುಹಿಸಲಾಗುವುದು. ಬೆಳೆ ಬೆಳೆದ ರೈತರು ಬೆಳೆಗೆ ವಿಮೆ ಮಾಡಿಸಿಕೊಂಡಿದ್ದು, ವಿಮಾ ಕಂಪನಿಯಿಂದ ಸಿಗುತ್ತದೆ. ಸರ್ಕಾರದಿಂದ ಪರಿಹಾರ ನೀಡುವ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು’ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT