ಆಲ್ದೂರು: ದಲಿತ ಸಂಘಟನೆಗಳು ಒಕ್ಕೂಟ ಹಾಗೂ ಆಲ್ದೂರಿನ ‘ಮಹಿಷಾಸುರ ಬಂಧುತ್ವ ಕಾರ್ಯಕ್ರಮ ಆಚರಣಾ ಸಮಿತಿ’ಯಿಂದ ಪಟ್ಟಣದ ಶಾದಿ ಮಹಲ್ ಸಭಾಂಗಣದಲ್ಲಿ ಗುರುವಾರ ‘ಮಹಿಷಾಸುರ ಬಂಧುತ್ವ ಕಾರ್ಯಕ್ರಮ’ ನಡೆಯಿತು.

ಅಂಬೇಡ್ಕರ್ ವೃತ್ತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ದಲಿತ ಸಂಘರ್ಷ ಸಮಿತಿ (ಡಿಎಸ್ಎಸ್) ಹಿರಿಯ ಮುಖಂಡ ವೈ.ಎಂ.ಹೊನ್ನಪ್ಪ, ಪ್ರಸ್ತುತ ಪಟ್ಟಣದಲ್ಲಿ ದುರ್ಗಿ ಉತ್ಸವ ಆಯೋಜಿಸಿದ್ದು, ದುರ್ಗಿ ಉತ್ಸವಕ್ಕೆ ನಮ್ಮ ವಿರೋಧವಿರಲಿಲ್ಲ. ಪಂಚಾಯಿತಿಗೆ ಸಮಿತಿಯವರು ಕೋರಿದ್ದ ಅನುಮತಿ ಪತ್ರದಲ್ಲಿ ಮಹಿಷಾಸುರ ದಹನದ ಉಲ್ಲೇಖ ಮಾಡಲಾಗಿತ್ತು. ದಹನ ಕಾರ್ಯಕ್ರಮ ಹಮ್ಮಿಕೊಳ್ಳುವುದಾದರೆ ಇದಕ್ಕೆ ನಮ್ಮ ವಿರೋಧ ಇದೆ ಎಂಬುದನ್ನು ವ್ಯಕ್ತಪಡಿಸಲಾಗಿತ್ತು ಎಂದರು.

ನಮ್ಮೆಲ್ಲರ ದೊರೆಯಾಗಿದ್ದ ಮಹಿಷಾಸುರರ ಕುರಿತು, ಅದಾದ ಬಳಿಕವೇ ಪುರೋಹಿತಶಾಹಿಗಳು ಇತಿಹಾಸ ತಿರುಚಿರುವುದನ್ನು ತಿಳಿಸಲು ‘ಮಹಿಷಾಸುರ ಬಂಧುತ್ವ’ ಕಾರ್ಯಕ್ರಮ ಮತ್ತು ವಿಚಾರ ಮಂಡನೆ ಹಮ್ಮಿಕೊಂಡಿದ್ದೇವೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಬಹುಜನ ಸಮಾಜ ಪಕ್ಷದ ರಾಜ್ಯ ಘಟಕದ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ, ಶೂದ್ರ ದೊರೆಯಾಗಿದ್ದ ಮಹಿಷಾಸುರ ಅಶೋಕ ಸಾಮ್ರಾಟನ ಬೌದ್ಧ ಧರ್ಮ ಪ್ರಚಾರಕ ಮಾದೇವ ಅವರಿಂದ ಬುದ್ಧ ಧಮ್ಮ ಸ್ವೀಕಾರ ಮಾಡಿ ಅದರ ಆಶ್ರಯದಾತರಾಗಿದ್ದರು. ಮಹಿಷಾಸುರರ ಇತಿಹಾಸ ಇಂದು ಪುರಾವೆಗಳ ಮೂಲಕ ಸಾಬೀತಾಗಿದ್ದು, ಮನುವಾದಿಗಳನ್ನು ಇನ್ನಷ್ಟು ಕೆರಳಿಸಿದೆ ಎಂದರು.

ದಲಿತರೆಲ್ಲರೂ ಒಂದಾಗಿ ಅಧಿಕಾರ ಪಡೆಯಲು ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಬೇಕಿದೆ ಎಂದು ಹೇಳಿದರು.

‘ಮಹಿಷಾಸುರ: ಮರೆ ಮಾಚಿದ ಇತಿಹಾಸ’ ಕುರಿತ ವಿಚಾರ ಮಂಡಿಸಿದ ಡಿಎಸ್ಎಸ್ ಜಿಲ್ಲಾ ಘಟಕದ ಮುಖಂಡ, ನಿವೃತ್ತ ಶಿಕ್ಷಕ ಕೆ.ಸಿ.ವಸಂತ ಕುಮಾರ್, ‘ದಕ್ಷಿಣ ಭಾರತದ ಮಹಿಷ ಮಂಡಲವನ್ನು ಆಳಿದ ಅಧಿಪತಿ ಮಹಿಷಾಸುರ, ಆತನ ಇರುವಿಕೆ ಮತ್ತು ಆಳ್ವಿಕೆ ಕುರಿತು ಋಗ್ವೇದ, ಬೌದ್ಧ ಧರ್ಮದ 500 ಜಾತಕಗಳ ಪುಸ್ತಕದ 278ನೇ ಅಧ್ಯಾಯದಲ್ಲಿ ಉಲ್ಲೇಖಗಳಿವೆ’ ಎಂದರು.

‘ಸಂವಿಧಾನದ ಪ್ರಕಾರ ಯಾವ ಧರ್ಮವನ್ನು ಬೇಕಾದರೂ ಆಚರಿಸುವ ಹಕ್ಕು ಎಲ್ಲರಿಗೂ ಇದೆ. ದುರ್ಗಿ ಮತ್ತು ಚಾಮುಂಡಿ ಉತ್ಸವಗಳನ್ನು ಆಚರಿಸಿಕೊಳ್ಳಲು ಆಯಾ ಧರ್ಮಕ್ಕೆ ಅವಕಾಶ ಕಲ್ಪಿಸಿರುವಂತೆ ನಮ್ಮ ದೊರೆ ಮಹಿಷಾಸುರನ ಕುರಿತು ನಮ್ಮ ಜನರಿಗೆ ವಾಸ್ತವ ಚರಿತ್ರೆಯನ್ನು ತಿಳಿಸಲು ನಮಗೂ ಅವಕಾಶ ಕೋರಿದರೆ ಅದಕ್ಕೆ ವಿರೋಧ ವ್ಯಕ್ತವಾಗುತ್ತಿರುವುದು ವಿಷಾದನೀಯ. ಮುಂದಿನ ದಿನಗಳಲ್ಇ ಬಲಿ ಚಕ್ರವರ್ತಿ ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗುವುದು’ ಎಂದರು.

ಬಹುಜನ ಸಮಾಜ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಪರಮೇಶ್ವರ್, ಸಮುದಾಯದ, ಮರೆಯಲ್ಲಿರುವ ವ್ಯಕ್ತಿತ್ವಗಳನ್ನು ಪರಿಚಯಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಅಂಬೇಡ್ಕರ್ ಹೋರಾಟ ವೇದಿಕೆ ಅಧ್ಯಕ್ಷ ನವರಾಜು ಎಚ್. ಮಾತನಾಡಿದರು.

ಮಹಿಷಾಸುರ ಬಂಧುತ್ವ ಆಚರಣೆ ಸಮಿತಿ ಅಧ್ಯಕ್ಷ ಪಿ.ಟಿ.ಚಂದ್ರಶೇಖರ್ ಪುರ ಅಧ್ಯಕ್ಷತೆ ವಹಿಸಿದ್ದರು. ದಲಿತ ಕಲಾ ಮಂಡಳಿಯ ಕೃಪಾಕ್ಷ ಕೋಟ್ಯಾನ್, ಉಪಾಧ್ಯಕ್ಷ ಇಂದ್ರೇಶ್ ಯಲಗುಡಿಗೆ, ಕಾರ್ಯದರ್ಶಿ ಪೂರ್ಣೇಶ್ ದೋಣ ಗುಡಿಗೆ, ಸಹಕಾರ್ಯದರ್ಶಿ ಸುಚಿತ್ ಗುಡ್ಡದೂರು, ಖಜಾಂಚಿ ಹರ್ಷ ಹೆಡದಾಳು, ಜಿಲ್ಲಾ ದೌರ್ಜನ್ಯ ವಿರೋಧಿ ಸಮಿತಿ ಸದಸ್ಯ ಹುಣಸೆಮಕ್ಕಿ ಲಕ್ಷ್ಮಣ್, ಡಿಎಸ್ಎಸ್ ಜಿಲ್ಲಾ ಸಂಚಾಲಕರಾದ ತುಡುಕೂರು, ಯೋಗೇಶ್, ಬಾಲಕೃಷ್ಣ, ಪಂಚಾಯಿತಿ ಸದಸ್ಯೆ ಲಕ್ಷ್ಮಿ, ಮುಖಂಡರಾದ ಹೆಡದಾಳು ಕುಮಾರ್, ಗಣೇಶ್ ಕಠಾರದಹಳ್ಳಿ, ಉಮೇಶ್ ದೇವರಹಳ್ಳಿ, ಪುಟ್ಟರಾಜು, ಮಲ್ಲಿಕಾರ್ಜುನ್, ರಾಜು, ಸುರೇಶ್, ಸಮಿತಿ ಸದಸ್ಯರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.