ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮುಂಗಾರು ಪೂರ್ವ ಮಳೆ ಆರಂಭವಾಗಿದ್ದು, ಬೆಳೆಗಾರರಲ್ಲಿ ಸಂತಸ ತರಿಸಿದೆ. ಮಾರ್ಚ್ನಲ್ಲಿ ಮಳೆ ಸುರಿದಿರುವುದು ಮುಂದಿನ ವರ್ಷ ಉತ್ತಮ ಕಾಫಿ ಫಸಲಿನ ನಿರೀಕ್ಷೆ ಜನರಲ್ಲಿ ಮೂಡಿದೆ. ಆದರೆ, ಬಯಲು ಸೀಮೆಯಲ್ಲಿ ಮಳೆಯ ಸುಳಿವಿಲ್ಲವಾಗಿವೆ.

ರೇವತಿ ಮಳೆ ಮಾರ್ಚ್ 31ರಿಂದ ಆರಂಭವಾಗಲಿದೆ. ಈ ಮಳೆ ಬಂದರೆ ಕಾಫಿ ಹೂವಿಗೆ ಅನುಕೂಲ. ಆದರೆ, ಅದಕ್ಕೂ ಮುನ್ನ ಮಾರ್ಚ್ 15ರಿಂದಲೇ ಆರಂಭವಾಗಿರುವುದು ಕಾಫಿಗೆ ಹೆಚ್ಚು ಅನುಕೂಲವಾಗಿದೆ. ಎಲ್ಲೆಡೆ ಕಾಫಿ ತೋಟಗಳಲ್ಲಿ ಹೂಗಳು ಕಂಗೊಳಿಸುತ್ತಿದ್ದು, ಮಲೆನಾಡಿನ ಚಿತ್ರಣವೇ ಬದಲಾಗಿದೆ.

ಮಲೆನಾಡಿನಲ್ಲಿ ಸಕಾಲಕ್ಕೆ ಸುರಿದ ಮಳೆಯಿಂದ ಬೆಳೆಗಾರರ ಕೋಟಿಗಟ್ಟಲೆ ಮೊತ್ತದ ಡೀಸೆಲ್ ಮತ್ತು ವಿದ್ಯುತ್ ಉಳಿಸಿದೆ. ಈ ಸಂದರ್ಭದಲ್ಲಿ ಮಳೆಯಾಗಿರುವುದು ಮುಂದಿನ ಫಸಲಿನ ಮೇಲೆ ಪರಿಣಾಮ ಬೀರಲಿದೆ ಎಂಬ ಸಂತಸ ರೈತರಲ್ಲಿದೆ.

ಕಳಸ, ಮೂಡಿಗೆರೆ, ಬಾಳೆಹೊನ್ನೂರು, ಆಲ್ದೂರು ಭಾಗದಲ್ಲಿ ಉತ್ತಮವಾಗಿ ಮಳೆಯಾಗಿದೆ. ಕೊಪ್ಪ ತಾಲ್ಲೂಕಿನ ಕೆಲವೆಡೆ ಮಳೆಯಾಗಿದೆ. ಆದರೆ, ಬಯಲು ಸೀಮೆಯಲ್ಲಿ ಈ ಸಂತಸವಿಲ್ಲ. ಕಡೂರು, ಅಜ್ಜಂಪುರ ಮತ್ತು ತರೀಕೆರೆಯಲ್ಲಿ ಮಳೆಯಾಗಿಲ್ಲ. ಕಡೂರಿನಲ್ಲಿ ಭಾನುವಾರ ಮಳೆ ಹನಿಗಳು ಉದುರಿ ಸುಮ್ಮನಾಗಿದ್ದು, ಮಳೆ ಸುರಿಯುವ ನಿರೀಕ್ಷೆ ಹುಸಿಯಾಯಿತು.

ಮಲೆನಾಡಿನಲ್ಲಿ ಮಳೆ ಸಂಭ್ರಮ ತಂದಿದ್ದರೆ, ಬಯಲು ಸೀಮೆಯಲ್ಲಿ ಈ ಸಂತಸ ಕಾಣಿಸುತ್ತಿಲ್ಲ.

ಕಾಳು ಮೆಣಸು ಅಡಿಕೆಗೂ ಅನುಕೂಲ

ಕಳಸ: ಮಾರ್ಚ್ ಎರಡನೇ ವಾರದಲ್ಲೇ ಬಿದ್ದ ಮೊದಲ ಬೇಸಿಗೆ ಮಳೆ ವಾಣಿಜ್ಯ ಬೆಳೆಗಳಾದ ಕಾಫಿ ಅಡಿಕೆ ಮತ್ತು ಕಾಳು ಮೆಣಸಿಗೆ ಅತ್ಯಂತ ಅನುಕೂಲ ತಂದಿದೆ. ಕಾಲಕ್ಕೆ ಬಿದ್ದ ಹೂ ಮಳೆ ಕಾಫಿ ತೋಟದ ರಂಗು ಬದಲಿಸಿದೆ. ಆರೋಗ್ಯವಾಗಿ ಅರಳಿದ ಕಾಫಿ ಹೂವುಮುಂದಿನ ಸಾಲಿಗೆ ಭರ್ಜರಿ ಫಸಲಿನ ನಿರೀಕ್ಷೆ ಮೂಡಿಸಿದೆ. ಅಡಿಕೆ ಮರಗಳಿಗೂ ಕೂಡ ಈ ಮಳೆ ಅಗತ್ಯವಿದ್ದ ತೇವಾಂಶ ತಂದಿದೆ. ಬಿಸಿಲಿನ ತಾಪದಿಂದ ಬಳಲಿದ್ದ ಅಡಿಕೆ ಮರಗಳು ಕೂಡಾ ಚೈತನ್ಯದಿಂದ ಕೂಡಿವೆ. ಮುಂದಿನ ಸಾಲಿನ ಮೆಣಸು ಫಸಲಿಗೆ ಈ ಮಳೆ ಸಹಕಾರಿಯಾಗಲಿದೆ. ಬಿಸಿಲಿನಿಂದ ನಲುಗಿದ್ದ ಬಳ್ಳಿಗಳಿಗೂ ಮಳೆ ಆಸರೆ ತಂದಿದೆ.

ಕಾದ ನೆಲಕ್ಕೆ ತಂಪು

ಕೊಪ್ಪ: ತಾಲ್ಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ ಅಲ್ಲಲ್ಲಿ ಮಳೆ ಸುರಿದಿದ್ದು ಬಿಸಿಲ ತಾಪದಿಂದ ಕಾದ ನೆಲಕ್ಕೆ ತಂಪು ನೀಡಿದಂತಾಗಿದೆ. ನೀರಿನ ಸಮಸ್ಯೆ ಎದುರಿಸುತ್ತಿರುವ ಕಾಫಿ ತೋಟಕ್ಕೆ ಮಾರ್ಚ್ನಲ್ಲಿ ಸುರಿದ ಮಳೆಯಿಂದಾಗಿ ಕಾಫಿ ಹೂವಿಗೆ ಅನುಕೂಲವಾಗಿದೆ. ಹೂವಗಳು ಗಟ್ಟಿಯಾಗಲು ಇನ್ನೊಂದು ಮಳೆ ತೀರಾ ಅಗತ್ಯವಿತ್ತು ಎನ್ನುತ್ತಾರೆ ಬೆಳೆಗಾರರು. ಅಡಿಕೆ ತೋಟದಲ್ಲಿ ಗೊಬ್ಬರ ಹಾಕಿ ಬೇಸಾಯ ಮಾಡಿರುವ ಜಮೀನಿಗೆ ಮಳೆಯಿಂದಾಗಿ ಅನುಕೂಲವಾಗಿದೆ. ಸಣ್ಣ ಸಣ್ಣ ಹಳ್ಳಗಳಲ್ಲಿ ನೀರು ಹರಿಯುವುದು ಸಂಪೂರ್ಣ ಕಡಿಮೆಯಾಗಿತ್ತು ಮಳೆಯಿಂದ ಸಣ್ಣದಾಗಿ ನೀರು ಹರಿಯುತ್ತಿದೆ. ಮಾರ್ಚ್ನಲ್ಲೇ ಮಳೆ ಬಂದಿರುವುದರಿಂದ ಕುಡಿಯುವ ನೀರಿಗೆ ಸಮಸ್ಯೆ ತೀವ್ರತೆ ಸ್ವಲ್ಪ ಕಡಿಮೆಯಾಗಲಿದೆ. ಕಾಡಂಚಿನ ಕೆರೆ– ಕಟ್ಟೆಗಳಲ್ಲಿ ನೀರು ಸಂಗ್ರಹಣೆಯಾಗಿ ಕಾಡು ಪ್ರಾಣಿಗಳಿಗೆ ಅನುಕೂಲವಾಗಿದೆ.

ಬಾರದ ಹದಮಳೆ

ನರಸಿಂಹರಾಜಪುರ: ಪಟ್ಟಣದ ಸುತ್ತಮುತ್ತಮ ವ್ಯಾಪ್ತಿಯಲ್ಲಿ ಈವರೆಗೆ ಹದವಾದ ಮಳೆ ಬಂದಿಲ್ಲ. ಕೆಲವು ದಿನಗಳ ಹಿಂದೆ ತುಂತುರು ಮಳೆಯಾಗಿತ್ತು. ತಾಲ್ಲೂಕಿನ ವ್ಯಾಪ್ತಿಯಲ್ಲಿ ಅಡಿಕೆ ಭತ್ತ ರಬ್ಬರ್ ಬಾಳೆ ಶುಂಠಿ ಕಾಳುಮೆಣಸು ಸುವರ್ಣ ಗೆಡ್ಡೆ ಬೆಳೆಯಲಾಗುತ್ತಿದೆ. ಮಳೆಯಾಗದೆ ಇರುವುದರಿಂದ ತೋಟಗಳಿಗೆ ಕೊಳವೆಬಾವಿ ಮೂಲಕ ನೀರನ್ನು ಪೂರೈಸುವ ಸ್ಥಿತಿಯಿದೆ ಎಂದು ರೈತರು ಹೇಳುತ್ತಾರೆ.

ಮಳೆಯಿಂದ ರೈತರಿಗೆ ಅನುಕೂಲ

ಬಾಳೆಹೊನ್ನೂರು: ‘ನೀರಿನ ಕೊರತೆ ವಿದ್ಯುತ್ ಸಮಸ್ಯೆ ಕಾರ್ಮಿಕರ ಅಭಾವ ಎದುರಿಸುತ್ತಿದ್ದ ಬೆಳೆಗಾರರಿಗೆ ಇತ್ತೀಚೆಗೆ ಸುರಿದ ಮಳೆಯು ವರವಾಗಿ ಪರಿಣಮಿಸಿದೆ’ ಎಂದು ಸಹ್ಯಾದ್ರಿ ಕಾಫಿ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಎಂ.ಕೆ.ಸುಂದರೇಶ್ ಹೇಳಿದರು. ‘ಬಿಸಿಲಿನ ಬೇಗೆ ಹೆಚ್ಚಿದ ಬೆನ್ನಲ್ಲೇ ಬಹುತೇಕ ರೈತರು ತುಂತುರು ನೀರಾವರಿ (ಸ್ಪಿಂಕ್ಲರ್) ಮೂಲಕ ಕಾಫಿ ಅಡಿಕೆ ಕಾಳುಮೆಣಸಿಗೆ ನೀರಾಯಿಸುತ್ತಿದ್ದರು. ಈಚೆಗೆ ಸುರಿದ ಮಳೆ ಕಾಫಿ ಹೂವು ಅರಳುವಂತೆ ಮಾಡಿದೆ. ಪ್ರಕೃತಿಯಲ್ಲಿ ಸ್ವಾಭಾವಿಕವಾಗಿ ಸಾಕಷ್ಟು ಸಾರಜನಕ ಉತ್ಪಾದನೆಯಾಗಿದೆ. ಪ್ರತಿವರ್ಷ ಏಪ್ರಿಲ್ ಮೊದಲ ವಾರದಲ್ಲಿ ಮಳೆ ಬರುತ್ತಿತ್ತು. ಈ ಬಾರಿ ಮಾರ್ಚ್ನಲ್ಲಿ ಮಳೆ ಬಂದಿರುವುದು ನಮ್ಮ ಅದೃಷ್ಟ’ ಎಂದು ಅವರು ತಿಳಿಸಿದರು.

ಅಡಿಕೆ ಬೆಳೆಗೂ ಈ ಸಮಯದಲ್ಲಿ ನೀರಿನ ಅಗತ್ಯವಿದೆ. ಕಾಳುಮೆಣಸಿನ ಬಳ್ಳಿಗಳು ಚಿಗುರಲು ಮಳೆ ಅವಶ್ಯ. ಬೆಳೆಗಾರರು ನೀರು ಹಾಯಿಸಲು ಗುಣಮಟ್ಟದ ವಿದ್ಯುತ್ ಬೇಕು. ವಿದ್ಯುತ್ ಇಲ್ಲದ ಕಡೆಗಳಲ್ಲಿ ಡೀಸೆಲ್ ಪೆಟ್ರೋಲ್ ಚಾಲಿತ ಮೋಟರ್ ಬಳಸುತ್ತಿದ್ದರು. ಇದೀಗ ಸುರಿದ ಮಳೆಯಿಂದ ರೈತರಿಗೆ ಪೆಟ್ರೋಲ್ ಡೀಸೆಲ್ ವಿದ್ಯುತ್ ಶುಲ್ಕ ಉಳಿತಾಯವಾಗಿದೆ ಎಂದು ಹೇಳಿದರು.

ಕಾಫಿಗೆ ಎದೆಹಾಲು ನೀಡಿದ ಮಳೆ

ಮಾರ್ಚ್ನಲ್ಲೇ ಮಳೆ ಬಂದಿರುವುದು ಕಾಫಿಗೆ ಎದೆಹಾಲು ನೀಡಿದಂತಾಗಿದೆ ಎಂದು ಕಾಫಿ ಬೆಳೆಗಾರರ ಹಿತರಕ್ಷಣಾ ವೇದಿಕೆ ಜಿಲ್ಲಾ ಘಟಕದ ಕಾರ್ಯದರ್ಶಿ ಹೊಲದಗದ್ದೆ ಗಿರೀಶ್ ಹೇಳಿದರು. ರೇವತಿ ಮಳೆಯನ್ನು ಬೆಳೆಗಾರರು ನಿರೀಕ್ಷೆ ಮಾಡುತ್ತಾರೆ. ಮಾರ್ಚ್ 31ರಿಂದ ಈ ಮಳೆ ಆರಂಭವಾಗಲಿದೆ. ಅದಕ್ಕೂ ಮುಂಚೆಯೇ ಮಳೆ ಬಂದಿರುವುದು ಸಂತಸ ಹೆಚ್ಚಿಸಿದೆ. ಇದು ಮುಂದಿನ ವರ್ಷದ ಫಸಲಿನ ಮೇಲೆ ಪರಿಣಾಮ ಬೀರಲಿದೆ ಎಂದರು.

ಪೂರಕ ಮಾಹಿತಿ: ರವಿಕುಮಾರ್ ಶೆಟ್ಟಿಹಡ್ಲು, ರವಿ ಕೆಳಂಗಡಿ, ಕೆ.ವಿ.ನಾಗರಾಜ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.