ಚಿಕ್ಕಮಗಳೂರು: ‘ಅಪಘಾತ ಸ್ಥಳದಲ್ಲಿ ಬದಿಗೆ ಕಾರು ನಿಲ್ಲಿಸಿ ‘ಗನ್ ಮ್ಯಾನ್’, ಚಾಲಕ ಹೋಗಿ ಏನಾಗಿದೆ ಎಂದು ನೋಡಿದ್ದಾರೆ. ನನಗೆ ಕಣ್ಣಿನ ಬೇನೆ ಇತ್ತು. ಲಕ್ಕವಳ್ಳಿಯಲ್ಲಿ ಕಾರ್ಯಕ್ರಮ ಮುಗಿಸಿ ಕಣ್ಣಿಗೆ ‘ಡ್ರಾಪ್ಸ್’ ಹಾಕಿಸಿಕೊಂಡು, ಮಾತ್ರೆ ಸೇವಿಸಿ, ಕೂಲಿಂಗ್ ಗ್ಲಾಸ್ ಧರಿಸಿ, ಕಾರಿನಲ್ಲಿ ನಿದ್ರೆಗೆ ಜಾರಿದ್ದೆ. ಅಲ್ಲಿ ಏನಾಗಿತ್ತು ಎಂಬುದು ನನ್ನ ಗಮನಕ್ಕಿಲ್ಲ’ ಎಂದು ಶಾಸಕ ಸುರೇಶ್ ತಿಳಿಸಿದ್ದಾರೆ.
ಘಟನೆಗೆಸಂಬಂಧಿಸಿದಂತೆ ಸ್ಪಷ್ಟನೆಯ ವಿಡಿಯೊವೊಂದನ್ನು ಮಾಧ್ಯಮಗಳಿಗೆ ಸುರೇಶ್ ಹಾಕಿದ್ದಾರೆ.
‘ಗಾಡಿಯಲ್ಲಿ ಹಾಕಿಕೊಂಡು ಹೋಗೋಣ ಎಂದು ಅಲ್ಲಿದ್ದವರನ್ನು ‘ಗನ್ ಮ್ಯಾನ್’, ಚಾಲಕ ಕೇಳಿದ್ದಾರೆ. ಆಂಬುಲೆನ್ಸ್‌ಗೆ ಫೋನ್ ಮಾಡಿರುವುದಾಗಿ ಕೆಲವರು ಹೇಳಿದ್ದಾರೆ. ತಕ್ಷಣ ಆಂಬುಲೆನ್ಸ್ ಬಂದಿದ್ದು, ಗಾಯಾಳುವನ್ನು ಅದರಲ್ಲಿ ಕಳಿಸಿದ್ದಾರೆ. ಕಿಡಿಗೇಡಿಗಳು ನನ್ನ ವಿರುದ್ಧ ವಿಡಿಯೊ ಮಾಡಿ ಹರಿಯಬಿಟ್ಟಿದ್ದಾರೆ’ ಎಂದು ಅವರು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.