ಮೂಡಿಗೆರೆ: ಮಳೆಯಿಂದ ಸಂಕಷ್ಟದಲ್ಲಿರುವ ರೈತರಿಗೆ ಬೆಳೆವಿಮೆ ಯೋಜನೆಯಲ್ಲಿ ಹಣ ಪಾವತಿಸದೇ ವಂಚಿಸಲಾಗಿದೆ ಎಂದು ರಾಜ್ಯ ರೈತ ಸಂಘ ಗ್ರೀನ್ ಆರ್ಮಿ ಇಂಡಿಯಾದ ಜಿಲ್ಲಾ ಕಾರ್ಯಾಧ್ಯಕ್ಷ ಬಿ.ಸಿ. ದಯಾಕರ್ ಆರೋಪಿಸಿದರು.

ಪಟ್ಟಣದಲ್ಲಿ ಬೆಳೆವಿಮೆ ವಂಚನೆಯ ಬಗ್ಗೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ, ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.

ವಿಮಾ ಕಂಪನಿಗೆ ಲಾಭ ಮಾಡಿಕೊಡುವ ದೃಷ್ಟಿಯಿಂದ ರಾಜ್ಯ ಸರ್ಕಾರವು ಬೆಳೆವಿಮೆ ಪರಿಹಾರ ನೀಡುವ ಮಾರ್ಗಸೂಚಿ ಮಾನದಂಡ ಬದಲಾವಣೆ ಮಾಡಿದೆ. ಇದರಿಂದ ಸಂಕಷ್ಟದಲ್ಲಿರುವ ರೈತರಿಗೆ ಬೆಳೆವಿಮೆ ಯೋಜನೆಯಲ್ಲಿ ಹಣ ಪಾವತಿಸದೇ ವಂಚಿಸಲಾಗಿದೆ. ಈ ಬಾರಿ ಅತಿಯಾದ ಮಳೆಯಿಂದ ಶೇ 80ರಷ್ಟು ಕಾಫಿ, ಅಡಿಕೆ, ಕಾಳುಮೆಣಸು, ಏಲಕ್ಕಿ, ಶುಂಠಿ ಇತರೆ ಬೆಳೆಗಳು ನಾಶವಾಗಿವೆ. ಇದರಿಂದ ಆರ್ಥಿಕ ಸಂಕಷ್ಟ ನಿವಾರಿಸಿಕೊಳ್ಳಲು ಜಿಲ್ಲೆಯಲ್ಲಿ 39,550 ರೈತರು ಬೆಳೆವಿಮೆ ಪಾವತಿಸಿದ್ದಾರೆ. ಆದರೆ, 9,000 ರೈತರಿಗೆ ವಿಮೆ ಕಟ್ಟಿದ ಹಣಕ್ಕಿಂತ ಕಡಿಮೆ ಹಣ ಪಾವತಿಸಿದ್ದು, ಉಳಿದ ರೈತರನ್ನು ಕೈ ಬಿಡಲಾಗಿದೆ. ಕೂಡಲೇ ರಾಜ್ಯಮಟ್ಟದ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಕೇಂದ್ರಗಳು, ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿ ರೈತರಿಗೆ ಆದ ಅನ್ಯಾಯ ಹಾಗೂ ಬೆಳೆಯ ಆರ್ಥಿಕ ನಷ್ಟವನ್ನು ಭರಿಸಿಕೊಡಲು ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ರೈತ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಪಿ. ರಾಜು ಮಾತನಾಡಿ, ರಾಜ್ಯದಲ್ಲಿ ಸಾವಿರಾರು ಮಳೆ ಮಾಪನ ಯಂತ್ರಗಳು ಹಾಳಾಗಿದ್ದು, ಅವುಗಳ ನಿರ್ವಹಣೆಯಾಗಬೇಕು. ವಿಮೆ ನೀಡಲು 30ರಿಂದ 40 ಕೀ.ಲೋ ದೂರವಿರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಡಿಮೆ ಮಳೆಯಾಗಿರುವ ಪ್ರದೇಶವನ್ನು ಪರಿಗಣಿಸಿದ್ದರಿಂದ ಹಾಗೂ ಮಾರ್ಗಸೂಚಿ ಬದಲಿಸಿದ್ದರಿಂದ ರೈತರಿಗೆ ವಿಮೆ ಹಣ ಸಿಗದಂತಾಗಿದೆ. ರೈತರು ಕೃಷಿಗೆ ಹಾಗೂ ವಿಮೆಗೆ ಹಾಕಿದ ಬಂಡವಾಳವೂ ಕೈಗೆ ಸಿಗದಂತಾಗಿದೆ. ಇದರಲ್ಲಿ ಕಾಣದ ಕೈಗಳು ವಿಮೆ ಕಂಪನಿಯೊಂದಿಗೆ ಶಾಮೀಲಾಗಿ ಅವ್ಯವಹಾರ ನಡೆಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆ ನಡೆಸಿ ಸಮಗ್ರ ತನಿಖೆ ನಡೆಸಬೇಕು. ಅಲ್ಲದೇ ಅತಿವೃಷ್ಟಿ ಘೋಷಣೆಯಾದ ಪ್ರದೇಶಗಳಲ್ಲಿ ಬೆಳೆ ಪರಿಹಾರದ ಮೊತ್ತವನ್ನು ಕೂಡಲೇ ರೈತರ ಖಾತೆಗೆ ಜಮಾ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಮನವಿ ನೀಡುವಾಗ ಸಂಘದ ಜಿಲ್ಲಾ ಸಂಚಾಲಕ ಡಿ.ಎಸ್. ರಮೇಶಗೌಡ, ಮುಖಂಡರಾದ ಪ್ರದೀಪ್ ಯು. ಹೊಸಳ್ಳಿ, ವಾಸುದೇವ ಸತ್ತಿಗನಹಳ್ಳಿ ಇದ್ದರು.