ಮೂಡಿಗೆರೆ: ತಾಲ್ಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಮೊಬೈಲ್ ನೆಟ್ವರ್ಕ್ ಇಲ್ಲದೆ ವಾಹನ ಸವಾರರು, ಪ್ರಯಾಣಿಕರು ನಿತ್ಯವೂ ಸಂಕಷ್ಟ ಎದುರಿಸುವಂತಾಗಿದೆ.

ತಾಲ್ಲೂಕಿನಿಂದ ಕರಾವಳಿ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿಯಲ್ಲಿ ಕೊಟ್ಟಿಗೆಹಾರದಿಂದ ಸ್ವಲ್ಪದೂರ ತೆರಳುತ್ತಿದ್ದಂತೆ ಮೊಬೈಲ್ ನೆಟ್ವರ್ಕ್ ನಿಷ್ಕ್ರಿಯಗೊಳ್ಳುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಚಾರ್ಮಾಡಿ ಗ್ರಾಮ ತಲುಪುವವರೆಗೂ ಮೊಬೈಲ್ ಫೋನ್ ಸಂಪರ್ಕ ಸಿಗದೆ ಪ್ರಯಾಣಿಕರು ಸಮಸ್ಯೆ ಎದುರಿಸಬೇಕಾಗುತ್ತದೆ.

ಕೊಟ್ಟಿಗೆಹಾರದಿಂದ ಚಾರ್ಮಾಡಿ ಗ್ರಾಮ 26 ಕಿ.ಮೀ ದೂರವಿದ್ದು, ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಅಪಘಾತ, ಗುಡ್ಡ ಕುಸಿತ, ವಾಹನ ಕೆಟ್ಟು ನಿಲ್ಲುವುದು ಇತರ ಅವಘಡಗಳು ಸಂಭವಿಸಿದಾಗ ಮಾಹಿತಿ ರವಾನಿಸಲು ಸಾಧ್ಯವಾಗದೆ ವಾಹನ ಚಾಲಕರು ಪರದಾಡುವಂತಾಗುತ್ತದೆ. ಅಲ್ಲದೇ ಈ ಪ್ರದೇಶದಲ್ಲಿ ಕೆಟ್ಟು ನಿಲ್ಲುವ ಲಾರಿಗಳ ಚಾಲಕರು ಊಟ, ಕುಡಿಯುವ ನೀರಿಗಾಗಿ ಸಂಕಷ್ಟ ಎದುರಿಸುವಂತಾಗಿದ್ದು, ನೆಟ್ವರ್ಕ್ ವ್ಯವಸ್ಥೆಯಿದ್ದರೆ ಚಾರ್ಮಾಡಿ ಅಥವಾ ಕೊಟ್ಟಿಗೆಹಾರ ಹೋಟೆಲ್ಗಳಿಗೆ ಆನ್ಲೈನ್ ಹಣ ಪಾವತಿ ಮೂಲಕ ಸೌಲಭ್ಯಗಳನ್ನು ಪಡೆಯಬಹುದಾಗಿತ್ತು ಎನ್ನುವುದು ಸಾರ್ವಜನಿಕರ ಅಳಲು.

ಚಾರ್ಮಾಡಿ ಘಾಟಿ ರಸ್ತೆಯು ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಿ 14 ವರ್ಷ ಕಳೆದರೂ ಇದುವರೆಗೂ ಈ ಹೆದ್ದಾರಿಯನ್ನು ವಿಸ್ತರಿಸಿಲ್ಲ. ಅಧಿಕ ತಿರುವುಗಳನ್ನು ಹೊಂದಿರುವ ಕಾರಣ ಅಪಘಾತ, ಸಾವು–ನೋವು ನಿರಂತರವಾಗಿ ಸಂಭವಿಸುತ್ತಿರುತ್ತದೆ. ಇಲ್ಲಿ ಪೊಲೀಸ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ಆರಂಭಿಸಬೇಕೆಂದು ಸಾರ್ವಜನಿಕರು 20 ವರ್ಷಗಳಿಂದ ಮಂಗಳೂರು ಹಾಗೂ ಚಿಕ್ಕಮಗಳೂರು ಜಿಲ್ಲಾಡಳಿತವನ್ನು ಒತ್ತಾಯಿಸುತ್ತಿದ್ದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರು.

ಘಾಟಿ ಪ್ರದೇಶದ ಹೆದ್ದಾರಿಯ ನಾಲ್ಕೈದು ಕಡೆ, ವನ್ಯಜೀವಿಗಳು ಮತ್ತು ಅರಣ್ಯ ಸಂಪತ್ತಿಗೆ ಹಾನಿಯಾಗದಂತೆ ಮೊಬೈಲ್ ಟವರ್ ನಿರ್ಮಿಸಬೇಕು. ಮೊಬೈಲ್ ಸಂಪರ್ಕ ಸಾಧ್ಯವಾದರೆ ಪ್ರಯಾಣಿಕರ ಅರ್ಧ ತಲೆನೋವು ತಪ್ಪಿದಂತಾಗುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಹೆದ್ದಾರಿಯ ಚಾರ್ಮಾಡಿ ಘಾಟಿಯಯಲ್ಲಿ ಸಂಚರಿಸುವಾಗ ಜೀವಭಯ ಉಂಟಾಗುತ್ತದೆ. ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಇತ್ತೀಚೆಗೆ ಕಾಡಾನೆಗಳು ಹೆದ್ದಾರಿಗೆ ಬಂದು ನಿಲ್ಲುವ ಘಟನೆ ನಡೆದಿದೆ. ಅಲ್ಲಲ್ಲಿ ಗುಡ್ಡ ಕುಸಿತ, ಟ್ರಾಫಿಕ್ ಜಾಮ್, ಅಪಘಾತದಿಂದ ಸಾವು-ನೋವು ನಿರಂತರವಾಗಿ ಸಂಭವಿಸುತ್ತಿವೆ. ಪ್ರಯಾಣಿಕರಿಗೆ ತೊಂದರೆಯಾದಾಗ ಇತರರಿಗೆ ತಿಳಿಸಲು ಘಾಟಿಯ ಹೆದ್ದಾರಿಯ ಅಲ್ಲಲ್ಲಿ ಮೊಬೈಲ್ ಟವರ್ ನಿರ್ಮಿಸಬೇಕು. ಇದರಿಂದ ಜೀವ ಭಯದಲ್ಲಿ ಸಾಗುವವರಿಗೆ ವರದಾನವಾಗಲಿದೆ ಎನ್ನುತ್ತಾರೆ ಹೊರಟ್ಟಿ ಗ್ರಾಮದ ನಿವಾಸಿ ಶ್ರೀಕಾಂತ್.

ನೆಟ್ವರ್ಕ್ ವ್ಯವಸ್ಥೆಗೆ ಕ್ರಮ

ಚಾರ್ಮಾಡಿ ಘಾಟಿ ಪ್ರದೇಶದ ಆಲೆಕಾನು ಹೊರಟ್ಟಿ ಗ್ರಾಮಕ್ಕೆ ಪ್ರಾಯೋಗಿಕವಾಗಿ ಸ್ಯಾಟಲೈಟ್ ಮೂಲಕ ನೇರವಾಗಿ ನೆಟ್ವರ್ಕ್ ವ್ಯವಸ್ಥೆ ಮಾಡಲಾಗಿದ್ದು ಅದು ಯಶಸ್ವಿಯಾಗುವ ಹಂತದಲ್ಲಿದೆ. ಅದನ್ನು ಮತ್ತೊಮ್ಮೆ ಪರಿಶೀಲಿಸಿ ನೆಟ್ವರ್ಕ್ ಒದಗಿಸಲು ವ್ಯವಸ್ಥೆ ಮಾಡಲಾಗುವುದು. ಘಾಟಿಯ ಹೆದ್ದಾರಿ ವ್ಯಾಪ್ತಿಯಲ್ಲಿ ಮೊಬೈಲ್ ಟವರ್ ನಿರ್ಮಿಸುವಂತೆ ಬೇಡಿಕೆ ಬಂದಿದೆ. ಈ ಬಗ್ಗೆ ಟೆಲಿಕಾಂ ಅಧಿಕಾರಿಗಳ ಸಭೆ ಕೂಡ ನಡೆದಿದೆ. ಸದ್ಯದಲ್ಲೇ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.