ನರಸಿಂಹರಾಜಪುರ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಅರಣ್ಯ–ಕಂದಾಯ ಭೂಮಿಯ ಗೊಂದಲ ಬಗೆಹರಿಯದೆ ಹಲವು ದಶಕಗಳಿಂದ ಭೂರಹಿತರಿಗೆ ಭೂಮಿ ಹಕ್ಕು ಕೊಡುವ ಯೋಜನೆ ಫಲ ಕಂಡಿಲ್ಲ.

ತಾಲ್ಲೂಕಿನ ವ್ಯಾಪ್ತಿಯಲ್ಲಿ 94ಸಿ ಅಡಿ ಅಕ್ಷಾಂಶ, ರೇಖಾಂಶದ ಮೂಲಕ ನರಸಿಂಹರಾಜಪುರ ವ್ಯಾಪ್ತಿಯಲ್ಲಿ 254, ಚಿಕ್ಕಗ್ರಹಾರ ವ್ಯಾಪ್ತಿಯಲ್ಲಿ 397, ಬಾಳೆಹೊನ್ನೂರು 137 ಸೇರಿ 788 ಅರ್ಜಿಗಳನ್ನು ಅರಣ್ಯ ಇಲಾಖೆಯ ಅಭಿಪ್ರಾಯಕ್ಕೆ ಕಳುಹಿಸಲಾಗಿದ್ದು, 210 ಅರ್ಜಿಗಳಿಗೆ ಅರಣ್ಯ ಇಲಾಖೆಯ ಒಪ್ಪಿಗೆ ದೊರೆತಿದೆ. ಪೋಡಿ ಮುಕ್ತ ಗ್ರಾಮಗಳಿಗೆ ಸರ್ಕಾರ ಯೋಜನೆ ರೂಪಿಸಿದ್ದು, ಇದರಂತೆ ತಾಲ್ಲೂಕಿನಲ್ಲಿ 250 ಸರ್ವೆ ನಂಬರ್ಗಳನ್ನು ಆನ್ ಲೈನ್ ಮೂಲಕ ಅರಣ್ಯ ಇಲಾಖೆಗೆ ಕಳುಹಿಸಲಾಗಿದೆ. ಫಾರಂ ನಂ 57 ಅಡಿ 87 ಅರ್ಜಿ ಸಲ್ಲಿಕೆಯಾಗಿದ್ದು, ಇದರಲ್ಲಿ37 ಅರ್ಜಿಗಳು ಅರಣ್ಯ ಮತ್ತು ಕಂದಾಯ ಇಲಾಖೆಯ ಜಂಟಿ ಸರ್ವೆಗೆ ಶಿಫಾರಸು ಆಗಿದ್ದು, 36 ಅರ್ಜಿಗಳು ತಿರಸ್ಕೃತವಾಗಿವೆ. 6ಅರ್ಜಿಗಳಿಗೆ ಅರಣ್ಯ ಇಲಾಖೆಯ ಒಪ್ಪಿಗೆ ಲಭಿಸಿಲ್ಲ.

ಮಲೆನಾಡಿನ ಭಾಗದಲ್ಲಿ ಭೂಮಿಗೆ ಸಂಬಂಧಿಸಿದಂತೆ 1930ರ ಅರಣ್ಯ ಹಕ್ಕು ಕಾಯ್ದೆಯಂತೆ ಕಿರು ಅರಣ್ಯ, ದಟ್ಟಾರಣ್ಯ, ರಕ್ಷಿತಾರಣ್ಯ, ನಗರ ಪ್ರದೇಶದಿಂದ 5 ಕಿ.ಮೀ ವ್ಯಾಪ್ತಿಯೊಳಗೆ ಬಗರ್ ಹುಕುಂ ಜಮೀನಿಗೆ ಮಂಜೂರಾತಿ ನೀಡುವಂತಿಲ್ಲ ಎಂಬ ಷರತ್ತುಗಳಿಂದ ಸ್ವಂತ ಭೂಮಿಯ ಹಕ್ಕು ಪಡೆಯಲು ತೊಡಕಾಗಿದೆ. ಜನಸಂಖ್ಯೆ, ವನ್ಯ ಪ್ರಾಣಿಗಳ ಸಂಖ್ಯೆಯೂ ಹೆಚ್ಚಾಗಿದ್ದು ಅವುಗಳ ರಕ್ಷಣೆಗೆ ಆದ್ಯತೆ ನೀಡಿರುವ ಸರ್ಕಾರ ಅರಣ್ಯ ಭೂಮಿಗೆ ನಾನಾ ಹೆಸರುಗಳನ್ನು ನೀಡಿ ಜನವಸತಿ ಪ್ರದೇಶಗಳನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಿರುವುದು ಕೃಷಿ ಭೂಮಿ ಮತ್ತು ವಾಸಸ್ಥಳ ಹಕ್ಕು ಪಡೆಯುವ ಜನರನ್ನು ಆತಂಕಕ್ಕೆ ತಳ್ಳಿದೆ. ಸ್ವಾತಂತ್ರ್ಯಪೂರ್ವದ 1900, 1930ರ ಅರಣ್ಯ ಕಾಯ್ದೆಗಳನ್ನು 2000 ಇಸವಿಯ ನಂತರ ಜಾರಿಗೆ ತಂದಿರುವುದು ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಿದೆ. ಅರಣ್ಯವೂ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ರೈತರಿಂದ ವಶಪಡಿಸಿಕೊಂಡ ಜಮೀನಿಗೆ ಬದಲಿಯಾಗಿ ಸರ್ಕಾರವೇ ನೀಡಿದ ಜಮೀನಿಗೆ 1964 ಮತ್ತು 1984ರ ಅರಣ್ಯ ಕಾಯ್ದೆಯನ್ನು ಪೂರ್ವಾನ್ವಯಗೊಳಿಸಿದ್ದು, ಸಮಸ್ಯೆ ಆಗಿದೆ.

1980ರಲ್ಲಿ ಜಾರಿಗೆ ತಂದ ಅರಣ್ಯ ಸಂರಕ್ಷಣಾ ಕಾಯ್ದೆಯ ಅನ್ವಯ ಅರಣ್ಯ ಭೂಮಿಯ ಹಕ್ಕನ್ನು ಕೇಂದ್ರ ಸರ್ಕಾರಕ್ಕೆ ಒಪ್ಪಿಸಿರುವುದು ಎಲ್ಲಾ ಮಂಜೂರಾತಿಗೂ ಕೇಂದ್ರದ ಅನುಮತಿ ಕಡ್ಡಾಯವಾಗಿದೆ. ಮಲೆನಾಡಿನ ಭಾಗದ ಮೂಲ ಸಮಸ್ಯೆಯನ್ನು ಕೇಂದ್ರದ ಮುಂದೆ ಮಂಡಿಸಲು ಸಂಸದರಾಗಲಿ, ಜನನಾಯಕರಾಗಲಿ ವಿಫಲರಾಗಿದ್ದು, ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎಂಬುದು ಸ್ಥಳೀಯರ ಬೇಸರ.

ಅರಣ್ಯದ ಮೂಲನಿವಾಸಿಗಳಿಗೆ ಜಮೀನಿನ ಹಕ್ಕನ್ನು ನೀಡಲು ಜಾರಿಗೆ ತಂದ 2005ರ ಅರಣ್ಯ ಹಕ್ಕು ಕಾಯ್ದೆಯಡಿ ಮೂಲ ನಿವಾಸಿಗಳಿಗೆ ಜಮೀನಿನ ಹಕ್ಕು ನೀಡಿದ್ದಕ್ಕಿಂತ ತಿರಸ್ಕೃತವಾದ ಅರ್ಜಿಗಳೇ ಹೆಚ್ಚು.

ಕಂದಾಯ ಮತ್ತು ಅರಣ್ಯ ಇಲಾಖೆ ಭೂಮಿಯ ಜಂಟಿ ಸರ್ವೆಯಾಗದಿರುವುದರಿಂದ ಅರಣ್ಯ ಇಲಾಖೆಯಿಂದ ಒಪ್ಪಿಗೆ ಪಡೆಯುವುದು ವಿಳಂಬವಾಗುತ್ತಿರುವುದರಿಂದ ಆಶ್ರಯ, ಸಮುದಾಯಭವನ, ಸ್ಮಶಾನ, ಸರ್ಕಾರಿ ಇಲಾಖೆ ಕಟ್ಟಡಕ್ಕೆ, ಜನರಿಗೆ ಹಕ್ಕು ಪತ್ರ ಕೊಡಲು ವಿಳಂಬವಾಗುತ್ತಿದೆ ಎಂದು ತಹಶೀಲ್ದಾರ್ ತನುಜಾ ಟಿ.ಸವದತ್ತಿ ತಿಳಿಸಿದರು.

ಪೂರ್ವಿಕರ ಕಾಲದಿಂದಲೂ ಕಡಹಿನಬೈಲು ಗ್ರಾಮ ಪಂಚಾಯಿತಿಯ ಸಂ.ನಂ 112ರಲ್ಲಿ ವಾಸವಾಗಿದ್ದು, 94ಸಿ ಅಡಿ ವಾಸದ ಮನೆ ಸಕ್ರಮಗೊಳಿಸಲು ಅರ್ಜಿಸಲ್ಲಿಸಿದ್ದೆ. ಅರಣ್ಯ ಇಲಾಖೆಯವರು ದಿನಾಂಕ 21/09/1915ರ ಸರ್ಕಾರದ ಆದೇಶದ ಮಲ್ಲಂದೂರು ಮೀಸಲು ಅರಣ್ಯದ ಗಡಿಯಿಂದ ಹೊರತು ಪಡಿಸಿದ್ದು ಎಂದು ಅಭಿಪ್ರಾಯ ನೀಡಿದ್ದರೂ ಇದುವರೆಗೂ ಹಕ್ಕುಪತ್ರ ದೊರೆತಿಲ್ಲ ಎಂದು ಟಿ.ಬನರಾಜ್ ತಿಳಿಸಿದರು.

ಸಿಗದ ಸಾಲ ಸವಲತ್ತು ಜಮೀನು

ಪೋಡಿಯಾಗದಿರುವುದರಿಂದ ರೈತರ ಜಮೀನಿಗೆ ಕಾನೂನು ಬದ್ಧ ಹಕ್ಕು ದೊರೆಯದೆ ಬ್ಯಾಂಕ್ ಸಾಲ ಸರ್ಕಾರದ ಸವಲತ್ತುಗಳು ಸಿಗುತ್ತಿಲ್ಲ. ಅರಣ್ಯ ಕಾಯ್ದೆಗಳು ದಿನದಿಂದ ದಿನಕ್ಕೆ ಬಿಗಿಯಾಗುತ್ತಿರುವುದರಿಂದ ಮಂಜೂರಾತಿಯಾದ ಜಮೀನಿಗೆ ಅಭದ್ರತೆ ಕಾಡುತ್ತಿದೆ. ಸರ್ಕಾರವೇ ನೀಡಿದ ಜಮೀನಿಗೆ ಅಕ್ರಮ ಒತ್ತುವರಿ ಮೊಕದ್ದಮೆ ದಾಖಲಿಸುತ್ತಿರುವುದು ರೈತರಿಗೆ ಆತಂಕವನ್ನುಂಟು ಮಾಡಿದೆ. ಕೈಗಾರಿಕೆಗಳು ಮತ್ತು ಇತರ ಉದ್ದೇಶಗಳಿಗೆ ಸುಲಭವಾಗಿ ಆಗುವ ಭೂ ಪರಿವರ್ತನೆ ರೈತರಿಗೆ ಜಮೀನಿನ ಹಕ್ಕು ಕೊಡಲು ಆಗುತ್ತಿಲ್ಲ. 1964 ಮತ್ತು 1984ರ ಅರಣ್ಯ ಕಾಯ್ದೆಗಳಿಗೆ ತಿದ್ದುಪಡಿಯಾಗದ ಹೊರತು ಮಲೆನಾಡಿನ ಭಾಗದ ರೈತರ ಸಮಸ್ಯೆಗಳು ಬಗೆಹರಿಯುವುದಿಲ್ಲ ಎಂಬುದು ಸ್ಥಳಿಯರ ಅಭಿಪ್ರಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.