ಬೆಂಗಳೂರಿನಿಂದ ರಾತ್ರಿ 9ಕ್ಕೆ ಹೊರಡುವ ಬಸ್ ಬೆಳಿಗ್ಗೆ 5ಕ್ಕೆ ಶೃಂಗೇರಿ ತಲುಪಲಿದೆ. ಪುನಃ ರಾತ್ರಿ ಶೃಂಗೇರಿಯಿಂದ 9.11ಕ್ಕೆ ಹೊರಡುವ ಬಸ್ ಬೆಳಿಗ್ಗೆ 5.30ಕ್ಕೆ ಬೆಂಗಳೂರು ತಲುಪಲಿದೆ. ಶೃಂಗೇರಿ ಕ್ಷೇತ್ರಕ್ಕೆ ಪಲ್ಲಕ್ಕಿ ಬಸ್ ಬಿಡುವಂತೆ ಶಾಸಕ ಟಿ.ಡಿ.ರಾಜೇಗೌಡ ಅವರು ಸಾರಿಗೆ ಸಚಿವರನ್ನು ವಿನಂತಿಸಿದ್ದರು ಎಂದು ಶಾಸಕರ ಕಚೇರಿಯ ಪ್ರಕಟಣೆ ತಿಳಿಸಿದೆ.