ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಾಯಿತಿ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ

ಹೊರನಾಡು- ಬಲಿಗೆ ರಸ್ತೆ ಕಾಮಗಾರಿಗೆ ವಿರೋಧ
Last Updated 5 ಡಿಸೆಂಬರ್ 2020, 10:29 IST
ಅಕ್ಷರ ಗಾತ್ರ

ಕಳಸ: ಹೊರನಾಡು- ಬಲಿಗೆ ರಸ್ತೆ ಕಾಮಗಾರಿಗೆ ಕೆಲ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಈ ರಸ್ತೆಯನ್ನು ಬಳಸುವ ಅನೇಕ ಗ್ರಾಮಸ್ಥರು ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕಾರ ಮಾಡುವುದಾಗಿ ತಿಳಿಸಿದ್ದಾರೆ.

‘ಹೊರನಾಡು- ಬಲಿಗೆ ರಸ್ತೆ ಕಾಮಗಾರಿಗೆ ₹ 7 ಕೋಟಿ ಮಂಜೂರಾಗಿದ್ದು, ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ಹೊರನಾಡಿನಿಂದ ಆರಂಭಿಸಿ ಮೊದಲ 1 ಕಿ.ಮೀ. ಕಾಮಗಾರಿ ನಡೆಸಲು ಕೆಲ ಸ್ಥಳೀಯರು ಸಹಕಾರ ನೀಡುತ್ತಿಲ್ಲ. ಇದರಿಂದ ನಮಗೆ ಅತ್ಯಗತ್ಯವಾದ ರಸ್ತೆ ಬಳಕೆಗೆ ಸಿಗುತ್ತಿಲ್ಲ’ ಎಂದು ಗ್ರಾಮಸ್ಥರು ಗುರುವಾರ ಸಂಜೆ ಬಲಿಗೆ ಕಡಿವೆಯಲ್ಲಿ ನಡೆದ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

‌ಕಪ್ಪಿನಕುಂಬ್ರಿ, ಮೇಲುಮಂಚಿಗೆ, ದಂಟಗ, ತುರ, ಬಳಿಗೋಳು, ಹೊನ್ನೆ ಕಾಡು, ಕೆಸುವಿನ ಕೊಂಡ, ಅಕ್ಕಸಾಲು ಮಕ್ಕಿ, ಹುಲಿಬಿಳಲು, ಚಿಕ್ಕನಕುಡಿಗೆ, ಬಲಿಗೆ ಗ್ರಾಮಸ್ಥರು ಚುನಾವಣಾ ಬಹಿಷ್ಕಾರ ಮಾಡುವ ಬಗ್ಗೆ ಸ್ಪಷ್ಟ ತೀರ್ಮಾನ ತೆಗೆದುಕೊಂಡರು.

ಜ್ವಾಲನಯ್ಯ, ಪ್ರಕಾಶ್, ಅರ್ಕಕೀರ್ತಿ, ಪ್ರವೀಣ್, ಪೃಥ್ವಿರಾಜ್, ವಿಶಾಲ್ ನೋಟದ, ಸವಿಂಜಯ, ಗಿಡ್ಡಯ್ಯ, ಚಂದ್ರು, ರಮೇಶ್, ಚನ್ನಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT