ಹೇರೂರು (ಬಾಳೆಹೊನ್ನೂರು): ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2024-25ನೇ ಸಾಲಿನಲ್ಲಿ ₹118.81 ಕೋಟಿ ವಹಿವಾಟು ನಡೆಸಿದ್ದು, ₹29.49 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ಪಿ.ರಂಗಪ್ಪಗೌಡ ತಿಳಿಸಿದರು.

ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ 2024-25ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯಲ್ಲಿ ಮಾತನಾಡಿದ ಅವರು, ‘ನಿವ್ವಳ ಲಾಭ ಗಳಿಕೆಯಲ್ಲಿ ಶೇ 14.92ರಷ್ಟು ಏರಿಕೆಯಾಗಿದೆ. ₹5.48 ಕೋಟಿ ವ್ಯಾಪಾರ ವಹಿವಾಟು ನಡೆಸಿದ್ದು, ₹23.62 ಕೋಟಿ ಸಾಲ ವಿತರಿಸಿದೆ. ಇದರಲ್ಲಿ ₹16.27 ಕೋಟಿ ಸಾಲ ಹೊರಬಾಕಿ ಇರುತ್ತದೆ. ಶೇ 95.55ರಷ್ಟು ವಸೂಲಿ ಮಾಡಲಾಗಿದೆ. ₹14.69 ಕೋಟಿ ಠೇವಣಿ ಸಂಗ್ರಹಿಸಿ, ₹24.82 ಕೋಟಿ ದುಡಿಯುವ ಬಂಡವಾಳ ಹೊಂದಿದೆ’ ಎಂದರು.

ಡಿಜಿಟಲ್ ಇಂಡಿಯಾ ಯೋಜನೆಯ ಗ್ರಾಮ ಒನ್ ಸೆಂಟರ್ ಸಂಘದಿಂದ ಪ್ರಾರಂಭಿಸಲು ಮಂಜೂರಾತಿಗಾಗಿ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಲಾಗಿದೆ. ರೈತರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಯೂರಿಯಾ ರಸಗೊಬ್ಬರ ಕೊರತೆ ಸಂದರ್ಭದಲ್ಲಿ ಲಾರಿ ಬಾಡಿಗೆ ವೆಚ್ಚವನ್ನು ಸಂಘವೇ ಭರಿಸಿ, ರೈತರಿಗೆ ನಿಗದಿತ ದರಕ್ಕೆ ರಸಗೊಬ್ಬರ ಮಾರಾಟ ಮಾಡಲಾಗಿದೆ. ಹೊಸದಾಗಿ ಯಾರ ರಸಗೊಬ್ಬರ ಕಂಪನಿ ಡೀಲರ್ ಷಿಪ್ ಪಡೆಯಲಾಗಿದೆ. ಕಡಿಮೆ ಬಡ್ಡಿ ದರದಲ್ಲಿ ಗೊಬ್ಬರ ಸಾಲ ಮತ್ತು ವೈಯಕ್ತಿಕ ಸಾಲಗಳನ್ನು ನೀಡಲಾಗುತ್ತಿದೆ. ಕೇಂದ್ರೀಕೃತ ಗಣಕೀಕರಣ ಕೆಲಸ ನಮ್ಮಲ್ಲಿ ಈಗಾಗಲೇ ಪ್ರಾರಂಭವಾಗಿದ್ದು, ಪ್ರಗತಿಯಲ್ಲಿದೆ ಎಂದರು.

ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸದಸ್ಯ ರೈತರ ಮಕ್ಕಳನ್ನು ಹಾಗೂ ಸಕಾಲದಲ್ಲಿ ಸಾಲ ಮರುಪಾವತಿಸಿ ಉತ್ತಮ ವ್ಯವಹಾರ ನಡೆಸಿದ 9 ರೈತರನ್ನು ಗೌರವಿಸಲಾಯಿತು.

ಸಂಘದ ಉಪಾಧ್ಯಕ್ಷ ಗಣೇಶ, ನಿರ್ದೇಶಕರಾದ ಸಿ.ಯು.ನಟರಾಜ್, ಕೆ.ಆರ್.ಸುಕುಮಾರ್, ಎಚ್.ಪಿ.ಜಗದೀಶ್, ಗೀತಾ, ವಿಜಯಲಕ್ಷ್ಮೀ, ರವಿ ಕುಲಾಲ್, ಅನಿಲ್ ಕುಮಾರ್, ಎಸ್.ಟಿ.ರಮೇಶ್, ಟಿ.ಎಂ.ಅನ್ನಪೂರ್ಣ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಪಿ.ವಿಶ್ವನಾಥ್ ಭಾಗವಹಿಸಿದ್ದರು.

ವೇದಿಕೆ ಬಹಿಷ್ಕರಿಸಿದ ನಿರ್ದೇಶಕರು: ವಾಗ್ವಾದ ಸಭೆಗಳಲ್ಲಿ ನಿರ್ದೇಶಕರ ಅಭಿಪ್ರಾಯಗಳಿಗೆ ಅಧ್ಯಕ್ಷರು ಸರಿಯಾಗಿ ಸ್ಪಂದಿಸುತ್ತಿಲ್ಲ. ಚರ್ಚೆ ನಿರ್ಣಯಗಳನ್ನು ಕಾರ್ಯದರ್ಶಿ ದಾಖಲು ಮಾಡುತ್ತಿಲ್ಲ. ಸಂಘದಲ್ಲಿ 7 ಜನ ನಿರ್ದೇಶಕರು ಸೇರಿಕೊಂಡು ತಮಗೆ ಬೇಕಾದಂತೆ ನಿರ್ಣಯ ಕೈಗೊಳ್ಳುತ್ತಿದ್ದಾರೆ. ಸಾಲಗಾರರ ಸಮಿತಿಯಲ್ಲೂ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ಸದಸ್ಯರಾದ ಸಿ.ಯು.ನಟರಾಜ್ ಅನಿಲ್ ಕುಮಾರ್ ರವಿಕುಲಾಲ್ ಸೇರಿದಂತೆ ಐವರು ಮಹಾಸಭೆಯ ವೇದಿಕೆ ಬಹಿಷ್ಕರಿಸಿದ್ದು ತೀವ್ರ ಚರ್ಚೆಗೆ ಕಾರಣವಾಯಿತು. ಮಾಸಿಕ ಸಭೆಗಳ ವಿಷಯ ಮಹಾಸಭೆಯವರೆಗೂ ಬರಬಾರದು ಸದಸ್ಯರು ಹೊಂದಿಕೊಂಡು ಹೋಗಬೇಕು ಎಂದು ಎನ್.ಎ.ಸಂಜೀವ ಸಲಹೆ ನೀಡಿದರು. ಅಧ್ಯಕ್ಷ ರಂಗಪ್ಪಗೌಡ ಮಾತನಾಡಿ ಮುಂದಿನ ದಿನಗಳಲ್ಲಿ ಯಾವುದೇ ತಾರತಮ್ಯವಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ ಮೇಲೆ ನಿರ್ದೇಶಕರು ವೇದಿಕೆ ಏರಿದರು. ರೈತರ ಮಕ್ಕಳಿಗೆ ಷೇರು ನೀಡುತ್ತಿಲ್ಲ. ಎಲ್ಲರಿಗೂ ಷೇರು ವಿತರಿಸಬೇಕು ಎಂದು ಸದಸ್ಯರು ಬೇಡಿಕೆ ಮುಂದಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.