ಶುಕ್ರವಾರ, ಸೆಪ್ಟೆಂಬರ್ 25, 2020
21 °C

ಚಿಕ್ಕಮಗಳೂರು | ಮಲೆನಾಡು ಭಾಗದಲ್ಲಿ ಮುಂದುವರಿದ ಮಳೆ–ಗಾಳಿ ಆರ್ಭಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ–ಗಾಳಿ ಆರ್ಭಟ ಮುಂದುವರಿದಿದೆ. ಮೂಡಿಗೆರೆಯಲ್ಲಿ ಟ್ಯಾಕ್ಸಿ ನಿಲ್ದಾಣದ ಚಾವಣಿ ಕುಸಿದಿದೆ. ಶಿಕ್ಷಕ ಶಾಂತಕುಮಾರ್ ಅವರ ಕಾರಿನ ಮೇಲೆ ತೆಂಗಿನ ಮರ ಬಿದ್ದು ಜಖಂಗೊಂಡಿದೆ. 

ಕೊಪ್ಪ– ಜಯಪುರ ಮಾರ್ಗದಲ್ಲಿ ಕಲ್ಕೆರೆಯ ಬಳಿ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಜಯಪುರ– ಶೃಂಗೇರಿ ಮಾರ್ಗದಲ್ಲಿ ಮರ ಉರುಳಿದೆ. 

ಮಳೆಯಿಂದಾಗಿ ಚಾರ್ಮಾಡಿ ಘಾಟಿ ಮಾರ್ಗದ ಆರನೇ ತಿರುವಿನ ಬಳಿ ಬಂಡೆಗಳು ರಸ್ತೆಗೆ ಉರುಳಿವೆ. ಕೊಟ್ಟಿಗೆಹಾರದಲ್ಲಿ 38.5 ಸೆಂ. ಮೀ ಮಳೆಯಾಗಿದೆ.

ಕಳಸ ಬಳಿ ಸಂಸೆ–ಬಾಳ್ಗಲ್‌ನಲ್ಲಿ ಮನೆ ಮೇಲೆ ಮರ ಬಿದ್ದಿದೆ. ಚಾವಣಿ ಕುಸಿದಿದೆ. ಚನ್ನಹಡ್ಲುವಿನಲ್ಲಿ  ಗುಡ್ಡದ ಮಣ್ಣು ರಸ್ತೆಗೆ ಮಣ್ಣು ಕುಸಿದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು