ಮೂಡಿಗೆರೆ: ತಾಲ್ಲೂಕಿನಾದ್ಯಂತ ಮಂಗಳವಾರ ಇಡೀ ದಿನ ಮಳೆ ಸುರಿದು ಜನಜೀವನವನ್ನು ಅಸ್ತವ್ಯಸ್ತಗೊಳಿಸಿತು.

ಸೋಮವಾರ ತಡರಾತ್ರಿ ಪ್ರಾರಂಭವಾದ ಮಳೆಯು ನಸುಕಿನವರೆಗೂ ಬಿಡುವಿಲ್ಲದೇ ಸುರಿಯಿತು. ಬೆಳಿಗ್ಗೆ ಕೆಲಕಾಲ ಬಿಡುವು ನೀಡಿ, 8 ಗಂಟೆಯ ಬಳಿಕ ಮತ್ತೆ ಧಾರಾಕಾರವಾಗಿ ಸುರಿಯಲು ಪ್ರಾರಂಭಿಸಿತು. ಇಡೀ ದಿನ ಸುರಿದ ಮಳೆಯಿಂದ ತಾಲ್ಲೂಕಿನಲ್ಲಿ ಮಳೆಗಾಲದ ವಾತಾವರಣ ಸೃಷ್ಟಿಯಾಗಿದೆ. ಮಳೆಯಿಂದ ಕಾಫಿ ತೋಟ, ಭತ್ತದ ಗದ್ದೆಗಳಲ್ಲಿ ಕೃಷಿ ಚಟುವಟಿಕೆ ಸ್ಥಬ್ತಗೊಂಡಿದ್ದವು. ವಿದ್ಯುತ್ ಪೂರೈಕೆಯಲ್ಲೂ ವ್ಯತಯವಾಗಿದ್ದು, ಜನರು ತೊಂದರೆ ಅನುಭವಿಸಿದರು.

ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಕೆ.ಎಂ. ರಸ್ತೆ, ಗಂಗನಮಕ್ಕಿ, ಬಿದರಹಳ್ಳಿ, ಅಣಜೂರು, ನೀರುಗಂಡಿ ಮುಂತಾದ ಗ್ರಾಮಗಳಲ್ಲಿ ಮಳೆ ನೀರು ಹೆದ್ದಾರಿಯಲ್ಲಿ ಸಂಗ್ರಹವಾಗಿ ಸವಾರರು ಪರದಾಡಿದರು. ದ್ವಿಚಕ್ರ ವಾಹನ ಸವಾರರು ನೀರಿನ ನಡುವೆ ಸಾಗಲು ಹರಸಾಹಸ ಪಡುತ್ತಿದ್ದರು.

ಹಲವೆಡೆ ಹಾನಿ: ತಾಲ್ಲೂಕಿನ ಸುಂಕಸಾಲೆ ಗ್ರಾಮ ಬಳಿ ಹೆದ್ದಾರಿಯಲ್ಲಿ ಮರ ಬಿದ್ದು ಸಂಚಾರಕ್ಕೆ ಅಡ್ಡಿಯಾಗಿತ್ತು. ಮರವು ಬಸ್ಸಿನ ಮುಂಭಾಗಕ್ಕೆ ಅಪ್ಪಳಿಸಿದ್ದು, ಮುಂಭಾಗಕ್ಕೆ ಹಾನಿಯಾಗಿದೆ. ಮರ ಬಿದ್ದು ಬೈಕ್ಗೆ ಹಾನಿಯಾಗಿದೆ. ಸುಂಕಸಾಲೆ ಗ್ರಾಮದ ಬಳಿ ತಡೆಗೋಡೆ ಕುಸಿದಿದ್ದರಿಂದ ಕೊಟ್ಟಿಗೆಹಾರ – ಕಳಸ ಹೆದ್ದಾರಿ ಸಂಪರ್ಕ ಕಡಿತವಾಗುವ ಭೀತಿ ಎದುರಾಗಿದೆ.

ಶೃಂಗೇರಿಯಲ್ಲಿ ಮಳೆ ಅಬ್ಬರ

ಪಟ್ಟಣದಲ್ಲಿ ಸೋಮವಾರ ರಾತ್ರಿ ರಭಸದ ಮಳೆಯಾಗಿದೆ. ಮಂಗಳವಾರವೂ ಮಳೆ ಮುಂದುವರಿದಿದ್ದರಿಂದ ತುಂಗಾನದಿಯ ನೀರಿನ ಮಟ್ಟದಲ್ಲಿ ತುಸು ಏರಿಕೆಯಾಗಿದೆ. ತಾಲ್ಲೂಕಿನ ಕೆರೆಕಟ್ಟೆ ಕಿಗ್ಗಾ ನೆಮ್ಮಾರ್ ಕಾವಡಿ ಅಡ್ಡಗದ್ದೆ ತೆಕ್ಕೂರು ವೈಕುಂಠಪುರ ಕುಂಚೇಬೈಲ್ ಬೇಗಾರ್ ಬಿದರಗೋಡು ಹೊಳೆಕೊಪ್ಪ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದೆ. ಮಳೆಯಿಂದ ಕೃಷಿ ಕಾರ್ಯಗಳಿಗೆ ಹಿನ್ನೆಡೆ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.