ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರಸಿಂಹರಾಜಪುರ: ಕೃಷಿ ಚಟುವಟಿಕೆಗಳಿಗೆ ಮುನ್ನುಡಿ ಬರೆದ ಮಳೆ

Published 13 ಮೇ 2024, 14:21 IST
Last Updated 13 ಮೇ 2024, 14:21 IST
ಅಕ್ಷರ ಗಾತ್ರ

ನರಸಿಂಹರಾಜಪುರ: ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಕೃಷಿ ಚಟುವಟಿಕೆಗಳಿಗೆ ಚಾಲನೆ ಲಭಿಸಿದ್ದು, ರೈತರ ಮೊಖದಲ್ಲಿ ಮಂದಹಾಸ ಮೂಡಿದೆ.

ತಾಲ್ಲೂಕಿನ ವ್ಯಾಪ್ತಿಯಲ್ಲಿ ಬಹುತೇಕ ಕೆರೆ, ಹಳ್ಳಕೊಳ್ಳಗಳು, ಕೊಳವೆಬಾವಿಗಳಲ್ಲಿ ನೀರಿಲ್ಲದೆ ಶೇ 90ರಷ್ಟು ರೈತರು ತೋಟಗಳಿಗೆ ನೀರು ಹಾಯಿಸಲು ಸಾಧ್ಯವಾಗದೆ ಪರದಾಡುತ್ತಿದ್ದರು. ಮಳೆ ಬಂದಿರುವುದರಿಂದ ತೋಟಗಳಿಗೆ ನೀರು ಹಾಯಿಸುವುದು ತಪ್ಪಿದೆ. ಮಳೆಯಿಲ್ಲದಿದ್ದರಿಂದ ಬಿಸಿಲಿನ ತಾಪಮಾನಕ್ಕೆ ಹೆದರಿ ಖುಷ್ಕಿ ಜಮೀನಿನಲ್ಲಿ ಬೆಳೆಯಲಾಗುತ್ತಿದ್ದ ಹಂಕಲು ಬೆಳೆಗಳನ್ನು ಬೆಳೆಯಲು ರೈತರು ಹಿಂದೇಟು ಹಾಕಿದ್ದರು. ಮಳೆ ಬಂದಿರುವುದರಿಂದ ಶುಂಠಿ, ಸುವರ್ಣಗೆಡ್ಡೆ ಮತ್ತಿತರ ಬೆಳೆಗಳನ್ನು ಬೆಳೆಲು ರೈತರಿಗೆ ಅನುಕೂಲವಾಗಿದೆ.

ಮಳೆಯಿಂದ ಕಾಫಿ ಬೆಳೆಗೂ ಅನುಕೂಲವಾಗಿದೆ. ಮಳೆಗಾಲದಲ್ಲಿ ಅತಿವೃಷ್ಟಿಯಾಗದಿದ್ದರೆ ಉತ್ತಮ ಕಾಫಿ ಫಸಲು ನಿರೀಕ್ಷಿಸಬಹುದು ಎನ್ನುತ್ತಾರೆ ರೈತರು. ಬೇಸಿಗೆ ಸಂದರ್ಭವಾಗಿದ್ದರಿಂದ ಸಾಕಷ್ಟು ಬೆಳೆಗಾರರು ರಬ್ಬರ್ ಟ್ಯಾಪಿಂಗ್ ಮಾಡುವುದನ್ನು ಕೈಬಿಟ್ಟಿದ್ದರು. ಮಳೆ ಬಂದಿರುವುದರಿಂದ ಟ್ಯಾಪಿಂಗ್‌ ಆರಂಭಿಸಲು ಅನುಕೂಲವಾಗಿದೆ. ಮಳೆಗಾಲಕ್ಕೆ ರಬ್ಬರ್ ಗಿಡಗಳಿಗೆ ರೈನ್ ಗಾರ್ಡ್ ಅಳವಡಿಸುವ ಕಾರ್ಯ ಮಾಡಲು ಪೂರಕವಾಗಿದೆ. ಬಾಳೆ ಬೆಳೆಗಾರರೂ ಸಹ ನೀರಿಲ್ಲದೆ ಪರದಾಡುವ ಸ್ಥಿತಿ ಇತ್ತು. ಮಳೆ ಬಂದಿರುವುದರಿಂದ ಬಾಳೆ ಬೆಳೆಗೂ ಅನುಕೂಲವಾಗಿದೆ. ಭತ್ತದ ಬೆಳೆಗಾರರು ಗದ್ದೆಗಳನ್ನು ಹೂಟಿ ಮಾಡಲು, ಸಸಿ ಮಡಿ ತಯಾರಿಕೆ ಕಾರ್ಯ ಆರಂಭಿಸಲು ಅನುಕೂಲವಾಗಿದೆ. ಎಲ್ಲಾ ರೀತಿಯ ಕೃಷಿ ಚಟುವಟಿಕೆ ಆರಂಭಿಸಲು ಮಳೆ ಹುರುಪು ನೀಡಿದೆ. ಟ್ರ್ಯಾಕ್ಟರ್ ಬಾಡಿಗೆದಾರರಿಗೆ ಹೆಚ್ಚಿನ ಕೆಲಸ ಲಭ್ಯವಾಗಿದೆ. ಕೃಷಿ ಆಧಾರಿತ ಚಟುವಟಿಕೆಗಳಿಗೆ ಮಳೆ ಅನುಕೂಲ ಮಾಡಿಕೊಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT