ಮಾನವೀಯ ನೆಲೆಗಟ್ಟಿನಲ್ಲಿ ಪರಿಹಾರ
‘ಯಾವುದೇ ಆಸ್ತಿ ಖಾಸಗಿಯವರ ಹೆಸರಿನಲ್ಲಿದ್ದರೂ ಅದರ ಹಕ್ಕು ಸರ್ಕಾರಕ್ಕೆ ಸೇರಿರುತ್ತದೆ. ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಲವು ನಿಯಮಗಳನ್ನು ರೂಪಿಸಿದ್ದು ಅದರಂತೆ ಪರಿಹಾರ ನೀಡಲಾಗುತ್ತದೆ. ಪಟ್ಟಣದ ವ್ಯಾಪ್ತಿಯಲ್ಲಿ ಹಲವು ಕಟ್ಟಡಗಳು ಮನೆಗಳು ಕಾನೂನು ಬಾಹಿರವಾಗಿಯೂ ನಿರ್ಮಾಣ ಮಾಡಲಾಗಿರುತ್ತದೆ. ಆದರೆ ಈ ಭಾಗದ ರಸ್ತೆ ವಿಸ್ತರಣೆಯಲ್ಲಿ ಎಲ್ಲವನ್ನು ಕಾನೂನು ರೀತಿಯೇ ಮಾಡದೆ ಮಾನವೀಯ ನೆಲೆಗಟ್ಟಿನಲ್ಲಿ ಪರಿಹಾರ ನೀಡಿ ರಸ್ತೆ ವಿಸ್ತರಣೆ ಮಾಡಲಾಗುತ್ತದೆ’ ಎಂದು ತರೀಕೆರೆ ಉಪವಿಭಾಗಾಧಿಕಾರಿ ಹಾಗೂ ಭೂಸ್ವಾದೀನ ಅಧಿಕಾರಿ ನಟೇಶ್ ಮಾಹಿತಿ ನೀಡಿದರು.