ಮೂಡಿಗೆರೆ: ಪರಿಶಿಷ್ಟ ಪಂಗಡಗಳ 50 ಸಮುದಾಯಗಳಿಗೆ ಒಳಮಿಸಲಾತಿ ಜಾರಿಗೊಳಿಸಲು ರಾಜ್ಯ ಸರ್ಕಾರವು ಕೂಡಲೇ ಆಯೋಗ ರಚಿಸಬೇಕು ಎಂದು ಕರ್ನಾಟಕ ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾಮಂಡಳಿ ಮಾಜಿ ಅಧ್ಯಕ್ಷ ಮುತ್ತಪ್ಪ ಒತ್ತಾಯಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಪರಿಶಿಷ್ಟ ಪಂಗಡಗಳಿಗೆ ಒಳ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಲು ನಡೆದ ಸಭೆಯಲ್ಲಿ ಅವರು ಮಾತನಾಡಿದರು.

'ಪರಿಶಿಷ್ಟ ಪಂಗಡಗಳ ಅಧ್ಯಯನ ನಡೆಸಿ ವರ್ಗೀಕರಣದ ಸೂತ್ರಗಳನ್ನು ಸರ್ಕಾರಕ್ಕೆ ಶಿಫಾರಸು ಮಾಡಲು ಪ್ರತ್ಯೇಕ ಆಯೋಗ ರಚಿಸಬೇಕು. ರಾಜ್ಯದ ಪರಿಶಿಷ್ಟ ಪಂಗಡಗಳಲ್ಲಿ 50 ಉಪ ಜಾತಿಗಳಿವೆ. 2011ರ ಜನಗಣತಿಯ ಪ್ರಕಾರ ಈ 50 ಉಪಜಾತಿಗಳ ಒಟ್ಟು ಜನಸಂಖ್ಯೆ 42.48 ಲಕ್ಷವಿದೆ. ಇದರಲ್ಲಿ ವಾಲ್ಮೀಕಿ ಸಮುದಾಯದ ಜನಸಂಖ್ಯೆ 32.92 ಲಕ್ಷ, ಆದಿಯನ್, ಬಾವ್ಚಾ, ಡುಂಗ್ರಿಗರೇಸಿಯಾ, ಚಂಚು, ಹಳಪಟ್ಟಿ, ಗೌಡ್ಲು, ಕಣಿಯನ್, ಮಲೆಕುಡಿಯ, ಮಲೇರು, ಪಣಿಯನ್ ಸೇರಿ 49 ಉಪಜಾತಿಗಳ ಜನಸಂಖ್ಯೆ 9.52 ಲಕ್ಷ ಮಾತ್ರ. 49 ಉಪಜಾತಿಗಳಲ್ಲಿ ಸರ್ಕಾರಿ ನೌಕರಿ, ಶೈಕ್ಷಣಿಕ ಸವಲತ್ತು, ರಾಜಕೀಯ ಪ್ರಾತಿನಿಧ್ಯವಿಲ್ಲ. ಒಳ ಮೀಸಲಾತಿಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವ ನಿಟ್ಟಿನಲ್ಲಿ 2024 ಆಗಸ್ಟ್ 1ರಂದು ಸುಪ್ರೀಂಕೋರ್ಟಿನ 7 ಸದಸ್ಯರ ಪೀಠ ನೀಡಿದ ತೀರ್ಪು ಐತಿಹಾಸಿಕವಾಗಿದೆ. ತೀರ್ಪಿನಲ್ಲಿ ಪ.ಜಾತಿ ಹಾಗೂ ಪಂಗಡದ ಮೀಸಲಾತಿಯನ್ನು ವರ್ಗೀಕರಣ ಮಾಡುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗೆ ಇದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ' ಎಂದರು.

ಲ್ಯಾಂಪ್ಸ್ ಸಹಕಾರ ಸಂಘದ ಮಾಜಿ ಅಧ್ಯಕ್ಷ ವಿಜೇಂದ್ರ ಮಾತನಾಡಿ, ‘ಕೊರಗ, ಜೇನುಕುರುಬ ಜಾತಿಗಳನ್ನು ಅದರ ಸೂಕ್ಷ್ಮತೆಯ ಕಾರಣಕ್ಕೆ ನೈಜ ಹಾಗೂ ದುರ್ಬಲ ಬುಡಕಟ್ಟು ಸಮುದಾಯ ಎಂದು ಗುರುತಿಸಲಾಗಿದೆ. ಯರವ, ಸೋಲಿಗ, ಸಿದ್ದಿ, ಹಸಲರು, ಮೇದಾರ, ಮರಾಠಿ, ನಾಯಕ ಹರಣಶಿಕಾರಿ ಈ ಜಾತಿಗಳಿಗೆ ಸಂಖ್ಯಾ ಬಲವಿದ್ದರೂ ಜನಸಂಖ್ಯೆ ಮಾತ್ರ 50 ಸಾವಿರ ದಾಟಿಲ್ಲ. ಪರಿಶಿಷ್ಟ ಪಂಗಡದಲ್ಲಿ ಪ್ರಬಲ ಜಾತಿಯಾಗಿರುವ ವಾಲ್ಮೀಕಿ ಸಮುದಾಯ ತನ್ನದೇಯಾದ ಉಪಜಾತಿಗಳನ್ನು ಮೇಲೆತ್ತಲು ಪ್ರಯತ್ನಿಸಬೇಕಿದೆ. ಪರಿಶಿಷ್ಟ ಪಂಗಡಗಳ ನಡುವೆ ಒಳ ಮೀಸಲಾತಿ ಹಂಚಿಕೆಯಾದರೆ ಸಣ್ಣ ಹಾಗೂ ಅತಿ ಸಣ್ಣ ಜಾತಿಗಳಿಗೂ ಅದರ ಪಾಲು ಸಿಗುತ್ತದೆ. 1994ರಲ್ಲಿ ರಾಜ್ಯ ಸರ್ಕಾರ ಒಬಿಸಿ ಮೀಸಲಾತಿಯಲ್ಲಿ ವರ್ಗೀಕರಣವನ್ನು ಜಾರಿಗೊಳಿಸಿದೆ. ಸಾಮಾಜಿಕ ನ್ಯಾಯದ ವಿಷಯದಲ್ಲಿ ಮುಂಚೂಣಿ ರಾಜ್ಯವೆನಿಸಿರುವ ಕರ್ನಾಟಕದಲ್ಲಿ ಪರಿಶಿಷ್ಟ ಪಂಗಡದ ಮೀಸಲಾತಿ ವರ್ಗೀಕರಣ ವಿಷಯದಲ್ಲೂ ಗಟ್ಟಿ ಹೆಜ್ಜೆ ಇಟ್ಟು ದೇಶಕ್ಕೆ ಮಾದರಿಯಾಗಬೇಕಾಗಿದೆ' ಎಂದರು.

ಸಭೆಯಲ್ಲಿ ಲ್ಯಾಂಪ್ಸ್ ಸಹಕಾರ ಸಂಘದ ಮಾಜಿ ಅಧ್ಯಕ್ಷ ವಿಜೇಂದ್ರ, ಅಕ್ರಮ ಸಕ್ರಮ ಸಮಿತಿ ಸದಸ್ಯ ಹರೀಶ್ ಸಬ್ಬೇನಹಳ್ಳಿ, ತಾಲ್ಲೂಕು ಹಸಲರು ಸಂಘದ ಅಧ್ಯಕ್ಷ ಕೆ.ಟಿ.ಪೂವಪ್ಪ, ಚಿನ್ನಿಗ ಗ್ರಾಪಂ ಸದಸ್ಯೆ ಗಂಗು, ಆದಿವಾಸಿ ಮುಖಂಡರಾದ ರಮೇಶ್ ತಮಟೆಬೈಲು, ನಾರಾಯಣ, ವಾಸು ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.