ನರಸಿಂಹರಾಜಪುರ: ‘ಹಿಂದಿನವರು ಪಡೆದ ಜ್ಞಾನವನ್ನು ಪಡೆದಾಗ ಮಾತ್ರ ವರ್ತಮಾನದಲ್ಲಿ ಉತ್ತಮವಾಗಿ ಬದುಕಲು ಸಾಧ್ಯವಾಗುತ್ತದೆ’ ಎಂದು ಕೋಣಂದೂರಿನ ರವೀಂದ್ರ ಭಟ್ ಹೇಳಿದರು.

ಪಟ್ಟಣದ ಅಗ್ರಹಾರದ ಅನ್ನಪೂರ್ಣ ರಂಗನಾಥ್ ರಾವ್ ಸಭಾಭವನದಲ್ಲಿ ಶುಕ್ರವಾರ ಶಾಂಕರ ತತ್ವ ಪ್ರಸಾರ ಅಭಿಯಾನದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂದಿನ ಜೀವನಕ್ಕೆ ಶಂಕರರ ತತ್ವಗಳು ಹೇಗೆ ಪೂರಕ? ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

‘ಮೊಟ್ಟಮೊದಲ ಆಚಾರ್ಯರು ಶಂಕರರಾಗಿದ್ದು ಆಚಾರ್ಯ ಪರಂಪರೆ ಇವರಿಂದ ಆರಂಭವಾಯಿತು. ಶಂಕರರ ಜೀವನವೇ ಆದರ್ಶವಾಗಿ ಬದುಕಲು ಮಾರ್ಗದರ್ಶನವಾಗಿದೆ. ಶಂಕರರು ಭಗವಂತನಿಂದ ಬಂದ ವಿದ್ಯಾ ಪದ್ಧತಿಯ ದಕ್ಷಿಣ ಮೂರ್ತಿ ಸ್ತೋತ್ರ ಇಟ್ಟುಕೊಂಡರು. ವಿದ್ಯೆ ಉಳಿಯಬೇಕಾದರೆ ರಾಜದಂಡ ನೀತಿ ಇರಬೇಕು. ನಿಜವಾದ ನೆಮ್ಮದಿಯ ಜೀವನವೇ ರಾಮರಾಜ್ಯ ಎಂದು ಅವರು ತಿಳಿಸಿದ್ದರು’ ಎಂದರು.

ರಾಮಾಯಣದ ಪರಂಪರೆ ಶಾಲಾ–ಕಾಲೇಜು ಪಠ್ಯಗಳಲ್ಲಿ ಬರಬೇಕಾಗಿತ್ತು. ನಿಜವಾದ ಭಾರತಕ್ಕೆ ಯಾವುದು ಬೇಕು, ಯಾವುದು ಬೇಡ ಎಂಬುದಕ್ಕೆ 5ಸಾವಿರ ವರ್ಷಗಳ ಹಿಂದೆ ಕೃಷ್ಣ ಪರಮಾತ್ಮ ಭಗವದ್ಗೀತೆಯ 18 ಅಧ್ಯಯದಲ್ಲಿ ವಿವರಿಸಿದ್ದಾರೆ. ಶಂಕರಾಚಾರ್ಯರು ಭಗವದ್ಗೀತೆಗೆ ಭಾಷ್ಯಗಳನ್ನು ಬರೆದರು. ಪ್ರಪಂಚದಲ್ಲಿರುವ ಅಸಂಖ್ಯಾ ಭಾಷೆಗಳಲ್ಲಿ ಭಗವದ್ಗೀತೆಗೆ ಮೊದಲ ಸ್ಥಾನ. ಎಲ್ಲಾ ಭಾಷೆಗಳಲ್ಲೂ ತರ್ಜುಮೆಯಾಗಿದೆ. ಇಂತಹ ಭಗವದ್ಗೀತೆ ಶಾಲಾ ಮಕ್ಕಳ ಪಠ್ಯ ಪುಸ್ತಕದ ಭಾಗವಾಗಬೇಕಿತ್ತು. ಆದರೆ, ಇದು ಇಲ್ಲವಾಗಿದೆ. ಬುದ್ಧಿ ಸಾಮರ್ಥ್ಯ, ವಿವೇಕ ಕಳಚಿ ಅವಿದ್ಯೆ, ದುರ್ಬುದ್ಧಿ, ಅನಾಚಾರ ತುಂಬಿದೆ. ಅಗ್ನಿಹೋತ್ರ ಮಾಡುವವರು ಹೆಚ್ಚಾಗಿದ್ದ ಕಾಲದಲ್ಲಿ, ವೈದಿಕ ಸಂಸ್ಕೃತಿ ಉತ್ತಮವಾಗಿದ್ದ ಕಾಲದಲ್ಲಿ ಶಂಕರರು ತಮ್ಮ ಸಿದ್ಧಾಂತ ಪ್ರತಿಪಾದಿಸಿದರು. ಭಗವಂತನ ಸ್ಮರಣೆಗೆ ಸರಿಯಾದ ಆಚರಣೆಗಳನ್ನು ಪ್ರತಿಪಾದಿಸಿದರು ಎಂದು ತಿಳಿಸಿದರು.

ಶಾಂಕರ ತತ್ವ ಅಭಿಯಾನದ ನರಸಿಂಹರಾಜಪುರ ಸಂಚಾಲಕ ಎನ್.ಶ್ರೀನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲ್ಲೂಕಿನ ವ್ಯಾಪ್ತಿಯಲ್ಲಿ 18ಕ್ಕೂ ಹೆಚ್ಚು ಭಜನಾ ಮಂಡಳಿಗಳನ್ನು ರಚಿಸಲಾಗಿದ್ದು, ಪ್ರತಿವಾರ ಭಜನೆ ಸ್ತೋತ್ರಗಳನ್ನು ಪ್ರಚುರ ಪಡಿಸುತ್ತಿದ್ದಾರೆ. ಗುರುಗಳು ಪ್ರವಚನ, ಉಪನ್ಯಾಸ ಆಯೋಜಿಸಬೇಕೆಂದು ಆದೇಶಿಸಿದ್ದರು. ಪ್ರಸ್ತುತ ಸಾಲಿನಲ್ಲಿ ಬಾಳೆಹೊನ್ನೂರು ಮತ್ತು ನರಸಿಂಹರಾಜಪುರ ಗ್ರಾಮಾಂತರ ವಿಭಾಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಮುಂದಿನ ವರ್ಷದಿಂದ ಗಣೇಶೋತ್ಸವವನ್ನು 3 ದಿನ ಧಾರ್ಮಿಕ ಕಾರ್ಯಕ್ರಮ, ಧಾರ್ಮಿಕ ನೃತ್ಯದಂತ ಕಾರ್ಯಕ್ರಮಗಳ ಮೂಲಕ ಮಾದರಿಯಾಗಿ ಆಚರಿಸಲಾಗುವುದು ಎಂದರು.

ಶಾಂಕರ ತತ್ವ ಪ್ರಸಾರ ಅಭಿಯಾನದ ರಾಜ್ಯ ಸಂಚಾಲಕ ತೇಜಶಂಕರ ಸೋಮಯಾಜಿ ಅಧ್ಯಕ್ಷತೆ ವಹಿಸಿದ್ದರು. ಶಾಂಕರ ತತ್ವ ಪ್ರಸಾರ ಅಭಿಯಾನದ ಜಿಲ್ಲಾಧ್ಯಕ್ಷ ರಾಮ್ ಪ್ರಸಾದ್, ಜಿಲ್ಲಾ ಸಂಚಾಲಕ ಸದಾಶಿವಭಟ್, ಜಿಲ್ಲಾ ಸಹ ಸಂಚಾಲಕ ರವೀಂದ್ರ ಪಟವರ್ಧನ್, ಶೃಂಗೇರಿಯ ಶ್ರೀಧರ್, ತಾಲ್ಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೊನೊಡಿ ಗಣೇಶ್, ಅನಿತಾ ಶ್ರೀನಾಥ್, ಲಲಿತಾ ಶಂಕರ ಭಕ್ತ ವೃಂದದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.