ವಿಶ್ವ ಹಿಂದೂ ಪರಿಷತ್ ಮುಖಂಡ ಸುರೇಶ್ ಬಿಜೆಪಿ ಮುಖಂಡರು ಮತ್ತು ಅಂಗಡಿ ಮಾಲೀಕರು ಧರಣಿ ನಡೆಸಿದರು
ಬಿಜೆಪಿ ನೇತೃತ್ವದ ಸರ್ಕಾರ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಅಧಿಕಾರದಲ್ಲಿ ಇರುವಾಗಲೇ ಈ ಪ್ರಕರಣ ದಾಖಲಾಗಿತ್ತು. ಈಗ ಹೈಕೋರ್ಟ್ ಆದೇಶ ನೀಡಿದೆ. ನ್ಯಾಯಾಲಯದ ಆದೇಶಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನ್ಯಾಯಾಲಯ ಆದೇಶಕ್ಕೆ ಎಲ್ಲರೂ ತಲೆಬಾಗಬೇಕು.
ಟಿ.ಡಿ.ರಾಜೇಗೌಡ ಶಾಸಕ
ಅಂಗಡಿ ಮಾಲೀಕರ ಕಣ್ಣೀರು
‘ಜೀವನೋಪಯಕ್ಕಾಗಿ ಸಣ್ಣ ಅಂಗಡಿ ನಡೆಸುತ್ತಿದ್ದೆವು. ಪಟ್ಟಣ ಪಂಚಾಯಿತಿಗೆ ದಿನಕ್ಕೆ ₹50 ಪಾವತಿಸುತ್ತಿದ್ದೇನೆ. ಈಗ ತೆರವುಗೊಳಿಸಿದ್ದು ಮುಂದೆ ಏನು ಮಾಡಬೇಕು ಎಂಬ ದಿಕ್ಕು ತೋಚುತ್ತಿಲ್ಲ. ದ್ವೇಷ ರಾಜಕಾರಣದಿಂದ ನಮಗೆ ಈ ಸ್ಥಿತಿ ಬಂದಿದೆ’ ಎಂದು ಕಲ್ಕಟ್ಟೆ ಮಹೇಶ್ ಕಣ್ಣೀರಿಟ್ಟರು. ‘ಯೋಗ್ಯತೆ ಇಲ್ಲದವರಿಗೆ ಅಧಿಕಾರದ ಯೋಗ ಬಂದರೆ ಬಡವರನ್ನು ಈ ರೀತಿ ಕಣ್ಣಿರು ಹಾಕಿಸುತ್ತಾರೆ. ಚಿಕ್ಕ–ಪುಟ್ಟ ವ್ಯಾಪಾರ ಮಾಡಿಕೊಂಡು ಬಂದ ಜನರನ್ನು ಗೋಳಾಡಿಸಿದರೆ ಅವರನ್ನು ದೇವರು ಸುಮ್ಮನೆ ಬೀಡುವುದಿಲ್ಲ. 26 ಅಂಗಡಿಗಳನ್ನು ತೆರವುಗೊಳಿಸಿದ್ದರಿಂದ ಶಾಸಕರು ಸಂತೃಪ್ತರಾಗಿರಬಹುದು’ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ವೇಣುಗೋಪಾಲ್ ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡರ ಬಂಧನ; ಪ್ರಕರಣ ದಾಖಲು
ಬೆಳಿಗ್ಗೆ 10 ಗಂಟೆಯಿಂದ ಅಂಗಡಿಯವರು ಸ್ವಯಂ ಪ್ರೇರಿತವಾಗಿ ತೆರವುಗೊಳಿಸಲು ಮುಂದಾದರು. ವಿಶ್ವ ಹಿಂದೂ ಪರಿಷತ್ ಮುಖಂಡರಾದ ಸುರೇಶ್ ಮತ್ತು ಆರ್.ಡಿ ಮಹೇಂದ್ರ ಅವರು ತೆರವಿಗೆ ವಿರೋಧ ವ್ಯಕ್ತಪಡಿಸಿದಾಗ ಅಂಗಡಿ ಮಾಲೀಕರು ಧರಣಿ ಮಾಡಲು ಮುಂದಾದರು. ಸುರೇಶ್ ಮತ್ತು ಆರ್.ಡಿ ಮಹೇಂದ್ರ ಸೇರಿದಂತೆ 11 ಜನರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದರು.