ಆಲ್ದೂರು: ಆವತಿ, ವಸ್ತಾರೆ, ಆಲ್ದೂರು ಹೋಬಳಿಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಸೋಮವಾರ ತಡ ರಾತ್ರಿಯಿಂದ ಮಳೆ ಆರಂಭಗೊಂಡಿದ್ದು, ಮಂಗಳವಾರವೂ ಮುಂದುವರಿದಿತ್ತು.
ಮಳೆಯ ಅಬ್ಬರಕ್ಕೆ ಐದಳ್ಳಿ ಗ್ರಾಮದ ಪ್ರಕಾಶ್ ಎಂಬುವವರ ಮನೆಯ ಗೋಡೆಗೆ ಹಾನಿಯಾಗಿ ಕುಸಿದು ಬಿದ್ದಿದೆ. ಈಗಾಗಲೇ ಕಾಫಿ ಕಾಯಿ ಕಟ್ಟುವಿಕೆ ಮುಗಿಯುತ್ತಾ ಬಂದಿದ್ದು, ಮಳೆ ಮುಂದುವರಿದರೆ ಬೆಳೆಗಾರರು ನಷ್ಟ ಎದುರಿಸಬೇಕಾಗುತ್ತದೆ ಎಂದು ಕಾಫಿ ಬೆಳೆಗಾರ ರವಿಕುಮಾರ್ ಎಚ್.ಎಲ್. ಹೇಳಿದರು,