ಕಡೂರು: ಸೋಮವಾರ ನಡೆಯಬೇಕಿದ್ದ ತಾಲ್ಲೂಕಿನ ಮಲ್ಲೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಚುನಾವಣೆ ಯಾರೂ ನಾಮಪತ್ರ ಸಲ್ಲಿಸದೇ ಇರುವುದರಿಂದ ಎರಡೂ ಸ್ಥಾನಗಳು ಖಾಲಿ ಉಳಿದಿವೆ.

ಅಧ್ಯಕ್ಷೆಯಾಗಿದ್ದ ಯಶೋದಾ ಧರ್ಮರಾಜ್ ಅವರ ರಾಜೀನಾಮೆಯಿಂದ ಈ ಸ್ಥಾನ ತೆರವಾಗಿತ್ತು. ಮಲ್ಲೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳಾ ವರ್ಗಕ್ಕೆ ಮೀಸಲಾಗಿದೆ.

ಚುನಾವಣಾಧಿಕಾರಿಯಾಗಿದ್ದ ನರೇಗಾ ನಿರ್ದೇಶಕ ಕಲ್ಲಪ್ಪ ಪಂಚಾಯಿತಿ ಕಚೇರಿಯಲ್ಲಿ ಹಾಜರಿದ್ದರೂ ನಿಗದಿತ ಸಮಯದೊಳಗೆ ಯಾರೂ ನಾಮಪತ್ರ ಸಲ್ಲಿಸದೇ ಇದ್ದ ಕಾರಣ ಅಧ್ಯಕ್ಷ ಸ್ಥಾನ ಖಾಲಿಯಾಗಿ ಉಳಿದಿದೆ ಎಂದು ನಡಾವಳಿಯಲ್ಲಿ ಉಲ್ಲೇಖಿಸಲಾಯಿತು.

ಸದ್ಯ ಉಪಾಧ್ಯಕ್ಷರಾಗಿ ತುರುವನಹಳ್ಳಿ ಪ್ರಕಾಶ್ ಇದ್ದು, ಅವರು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಆದರೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳಾ ವರ್ಗಕ್ಕೆ ಸೇರಿದ್ದು ಪುರುಷರು ಅಧ್ಯಕ್ಷರಾಗುವ ಅವಕಾಶವಿಲ್ಲ. ಹಾಗಾಗಿ ಸ್ಥಾನ ಖಾಲಿಯಾಗಿಯೇ ಉಳಿದರೆ ಉಪಾಧ್ಯಕ್ಷ ಅಧಿಕಾರ ನಡೆಸುವ ಅವಕಾಶವಿದೆ. ಈ ಕಾರಣದಿಂದ ಅಧ್ಯಕ್ಷ ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸಿಲ್ಲವೆಂಬ ಮಾತು ಕೇಳಿಬರುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.