ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು | ಕಂದಾಯ ಇಲಾಖೆ: 211 ಹುದ್ದೆ ಖಾಲಿ

Published 18 ಡಿಸೆಂಬರ್ 2023, 6:50 IST
Last Updated 18 ಡಿಸೆಂಬರ್ 2023, 6:50 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಕಂದಾಯ ಇಲಾಖೆ ಎಂದರೆ ಮಾತೃ ಇಲಾಖೆ ಎಂದೇ ಕರೆಯಲಾಗುತ್ತದೆ. ಈ ಇಲಾಖೆಗೆ ಜಿಲ್ಲೆಯಲ್ಲಿ ಸಿಬ್ಬಂದಿ ಕೊರತೆ ಸಮಸ್ಯೆಯಾಗಿ ಕಾಡುತ್ತಿದೆ. ಐವರು ತಹಶೀಲ್ದಾರ್‌ಗಳು ಸೇರಿ 221 ಹುದ್ದೆಗಳು ಖಾಲಿ ಇವೆ.

ಒಂಬತ್ತು ಗ್ರೂಪ್ ಎ ತಹಶೀಲ್ದಾರ್‌ಗಳ ಹುದ್ದೆಗಳಿದ್ದು, ಎಲ್ಲವೂ ಭರ್ತಿಯಾಗಿವೆ. 10 ಗ್ರೂಪ್ ಬಿ ತಹಶೀಲ್ದಾರ್ ಹುದ್ದೆಗಳಿದ್ದು, ಐದು ಹುದ್ದೆಗಳು ಖಾಲಿ ಇವೆ. ಇದರ ಜತೆಗೆ ಚುನಾವಣಾ ತಹಶೀಲ್ದಾರ್ ಹುದ್ದೆ ಕೂಡ ಖಾಲಿಯೇ ಇದೆ. ಮೂಡಿಗೆರೆ, ಶೃಂಗೇರಿ, ಕೊಪ್ಪ, ತರೀಕೆರೆ ಮತ್ತು ಅಜ್ಜಂಪುರ ತಾಲ್ಲೂಕು ಕಚೇರಿಗಳಲ್ಲಿರುವ ಗ್ರೂಪ್ ಬಿ ತಹಶೀಲ್ದಾರ್‌ ಹುದ್ದೆಗಳು ಖಾಲಿ ಇವೆ. 

ಗ್ರಾಮ ಮತ್ತು ಹೋಬಳಿ ಮಟ್ಟದಲ್ಲಿ ಕೆಲಸ ಮಾಡಬೇಕಾದ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳು ಹೆಚ್ಚಿನ ಸಂಖ್ಯೆಯಲ್ಲಿ ಖಾಲಿ ಇವೆ. ಮಂಜೂರಾಗಿರುವ 291 ಗ್ರಾಮ ಲೆಕ್ಕಿಗರ ಹುದ್ದೆಗಳ ಪೈಕಿ 41 ಹುದ್ದೆಗಳು ಖಾಲಿ ಇವೆ. ಕಚೇರಿಗಳಲ್ಲಿ ಕಡತ ವಿಲೇವಾರಿಗೆ ಪ್ರಮುವಾಗಿ ಬೇಕಿರುವ ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ.

ಮಂಜೂರಾಗಿರುವ 76 ಪ್ರಥಮ ದರ್ಜೆ ಸಹಾಯಕ ಹುದ್ದೆಗಳ ಪೈಕಿ 14 ಹುದ್ದೆ ಖಾಲಿ ಇದ್ದರೆ, 105 ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ಪೈಕಿ 40 ಹುದ್ದೆಗಳು ಖಾಲಿ ಇವೆ. ಡಿ ದರ್ಜೆ ನೌಕರರ ಹುದ್ದೆಗಳು 64 ಇದ್ದರೆ, 40 ಹುದ್ದೆ ಖಾಲಿ ಇವೆ. ಭರ್ತಿಯಾಗಿರುವ ಹುದ್ದೆಗಳಲ್ಲಿ ಬಹುತೇಕರು ಹೊರ ಗುತ್ತಿಗೆ ಸಿಬ್ಬಂದಿ ಇದ್ದಾರೆ.

ಚಿಕ್ಕಮಗಳೂರು ಮತ್ತು ತರೀಕೆರೆ ಉಪವಿಭಾಗಾಧಿಕಾರಿ ಕಚೇರಿಗಳಲ್ಲಿ ತಲಾ 15 ಮಂಜೂರಾತಿ ಹುದ್ದೆಗಳಿದ್ದು, ತಲಾ 8 ಹುದ್ದೆಗಳು ಭರ್ತಿಯಾಗಿದ್ದರೆ 7 ಹುದ್ದೆಗಳು ಖಾಲಿ ಇವೆ.

ಪೂರಕ ಮಾಹಿತಿ: ಬಾಲು ಮಚ್ಚೇರಿ, ಕೆ.ವಿ.ನಾಗರಾಜ್, ರವಿಕುಮಾರ್ ಶೆಟ್ಟಿಹಡ್ಲು, ಎಚ್‌.ಎಂ.ರಾಜಶೇಖರಯ್ಯ

ಅರ್ಜಿ ವಿಲೇವಾರಿಗೆ ವಿಳಂಬ
ಕಡೂರು: ತಾಲ್ಲೂಕಿನಲ್ಲಿ ಕಂದಾಯ ಇಲಾಖೆಯ 135 ಮಂಜೂರಾದ ಹುದ್ದೆಗಳಲ್ಲಿ 108 ಹುದ್ದೆಗಳಲ್ಲಿ ಮಾತ್ರ ಕರ್ತವ್ಯ ನಿರ್ವಹಿಸಲಾಗುತ್ತಿದೆ.27 ಹುದ್ದೆಗಳು ಖಾಲಿಯಿವೆ. ಐದು ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳು ನಿಯೋಜನೆ ಮೇರೆಗೆ ಬೇರೆ ತಾಲ್ಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. 64 ಗ್ರಾಮ ಸಹಾಯಕರ ಹುದ್ದೆಗಳಲ್ಲಿ 56 ಮಾತ್ರ ಭರ್ತಿಯಿದೆ. ಕೆಲ ಹುದ್ದೆಗಳು ಖಾಲಿಯಿರುವುದರಿಂದ ಅರ್ಜಿಗಳ ವಿಲೇವಾರಿ ತಡವಾಗುತ್ತಲಿದೆ. ಬಗರ್ ಹುಕುಂ ಅರ್ಜಿ ಹಾಕಿದವರಿಗೆ ಅರ್ಜಿಯ ಸ್ಥಿತಿ ತಿಳಿಯಲು ತೊಂದರೆಯಾಗಿದೆ. ಅಭಿಲೇಖಾಲಯದಲ್ಲಿ ಇರುವ ಒಬ್ಬರೇ ಸಿಬ್ಬಂದಿ ದಾಖಲೆಗಳನ್ನು ಹುಡುಕಿ ನೀಡುವಲ್ಲಿ ಹೈರಾಣಾಗುತ್ತಿದ್ದಾರೆ. ಇನ್ನು ಪಹಣಿ ಮತ್ತಿತರ ದಾಖಲೆ ಪಡೆಯಲು ಸಿಬ್ಬಂದಿ ಕೊರತೆ ಇರುವುದರಿಂದ ಅಲ್ಲಿಯೂ ಸಮಯ ವ್ಯರ್ಥ್ಯವಾಗುತ್ತಿದೆ.
ವಿಲೇವಾರಿಯಾಗದ ಬಗರ್ ಹುಕುಂ ಅರ್ಜಿ
ಕೊಪ್ಪ: ತಾಲ್ಲೂಕಿನಲ್ಲಿ ಭೂ ಮಂಜೂರಾತಿಗಾಗಿ ರೈತರು ನಮೂನೆ 50ರಲ್ಲಿ ಸಲ್ಲಿಸಿದ ಸಾಕಷ್ಟು ಅರ್ಜಿಗಳು ಭೂ ಮಂಜೂರಾತಿ ಸಮಿತಿ(ಅಕ್ರಮ ಸಕ್ರಮ) ಮುಂದೆ ಬಂದಿಲ್ಲ. ಸಾಗುವಳಿ ಜಮೀನನ್ನು ಸಕ್ರಮಗೊಳಿಸಲು ಅವಕಾಶವಿದ್ದಾಗ ನಿರ್ಲಕ್ಷ್ಯ ವಹಿಸಿದ್ದರಿಂದ ಇದೀಗ ಅನೇಕ ಮಂದಿ ಜಮೀನು ಸೆಕ್ಷನ್ 4 ಸೊಪ್ಪಿನಬೆಟ್ಟ ಪರಿಭಾವಿತ(ಡೀಮ್ಡ್) ಮುಂತಾದ ಸಮಸ್ಯೆಗಳಿಗೆ ಸಿಲುಕಿವೆ. ಮಂಜೂರಾಗಿರುವ 76 ಹುದ್ದೆಗಳ ಪೈಕಿ 34 ಹುದ್ದೆಗಳು ಖಾಲಿ ಇವೆ. ಸಿಬ್ಬಂದಿ ಕೊರತೆ ಇರುವುದು ಹಲವು ಕೆಲಸಗಳಿಗೆ ಹಿನ್ನೆಡೆಯಾಗಿದೆ. ರೈತರು ಭೂ ಮಂಜೂರಾತಿಗಾಗಿ ಸಲ್ಲಿಸಿದ ಅರ್ಜಿ ಕಡತಗಳು ತಾಲ್ಲೂಕು ಕಚೇರಿಯಿಂದಲೇ ನಾಪತ್ತೆಯಾದ ಪ್ರಕರಣವೂ ನಡೆದಿದೆ. ನಮೂನೆ 53 ರಲ್ಲಿ 1971 ನಮೂನೆ 57 ರಲ್ಲಿ 9469 ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಇವೆ. ಪ್ರಥಮ ದರ್ಜೆ ಸಹಾಯಕ ಹುದ್ದೆ 7 ರಲ್ಲಿ 2 ದ್ವಿತೀಯ ದರ್ಜೆ ಸಹಾಯಕ 13 ರಲ್ಲಿ 9 ಗ್ರಾಮ ಆಡಳಿತಾಧಿಕಾರಿ 31 ರಲ್ಲಿ 11 ಖಾಲಿ ಇವೆ. 
ಒಬ್ಬರೇ ಮೊಜಣಿದಾರ
ನರಸಿಂಹರಾಜಪುರ: ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ಆರು ಮೊಜಣಿದಾರರ ಹುದ್ದೆಯಲ್ಲಿ 5 ಹುದ್ದೆಗಳು ಖಾಲಿ ಇದ್ದು ಕೇವಲ ಒಬ್ಬರೇ ಮೊಜಣಿದಾರ ಕಾರ್ಯನಿರ್ವಹಿಸುತ್ತಿದ್ದಾರೆ.  ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳು ಖಾಲಿ ಇದ್ದರೂ ಇರುವ ಸಿಬ್ಬಂದಿಯೇ ಹಲವು ವಿಭಾಗಗಳ ಕಾರ್ಯನಿರ್ವಹಿಸುತ್ತಿದ್ದಾರೆ. ನಮೂನೆ 50ರಲ್ಲಿ 6339 ಅರ್ಜಿಗಳು ಸ್ವೀಕೃತವಾಗಿದ್ದವು. ಇದರಲ್ಲಿ 5046 ಅರ್ಜಿಗಳು ತಿರಸ್ಕೃತವಾಗಿದ್ದು 1293 ಜನರಿಗೆ ಹಕ್ಕು ಪತ್ರ ವಿತರಿಸಲಾಗಿದೆ. ನಮೂನೆ 53ರಲ್ಲಿ 4629 ಅರ್ಜಿಗಳು ಸ್ವೀಕೃತವಾಗಿದ್ದು 3199 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 1421 ಕಡತಗಳು ಬಾಕಿಯಿದೆ. ನಮೂನೆ  57ರಲ್ಲಿ 9596 ಅರ್ಜಿಗಳು ಸ್ವೀಕೃತವಾಗಿವೆ. 8593 ಅರ್ಜಿಗಳು ಕಡತ ರಚನೆ ಮಾಡಲು ಬಾಕಿ ಉಳಿದಿದೆ. 94ಸಿಸಿ(ನಗರ) ಅಡಿಯಲ್ಲಿ 443 ಅರ್ಜಿಗಳು ಸ್ವೀಕೃತಿಯಾಗಿವೆ. ಇದರಲ್ಲಿ 390 ಅರ್ಜಿ ತಿರಸ್ಕೃತಗೊಂಡಿವೆ. 53 ಅರ್ಜಿಗಳು ಬಾಕಿ ಉಳಿದಿವೆ. 94ಸಿ( ಗ್ರಾಮೀಣ) ಅಡಿ 11432 ಅರ್ಜಿಗಳು ಸ್ವೀಕೃತಿಯಾಗಿದ್ದು 1367 ಮಂಜೂರಾಗಿದ್ದಯ 8465 ಅರ್ಜಿಗಳು ತಿರಸ್ಕೃತಗೊಂಡಿವೆ. 1600 ಅರ್ಜಿಗಳು ಬಾಕಿ ಉಳಿದಿವೆ. ತಾಲ್ಲೂಕು ಕಚೇರಿಯಲ್ಲಿ ಮಂಜೂರಾಗಿರುವ 52 ಹುದ್ದೆಗಳ ಪೈಕಿ 15 ಹುದ್ದೆಗಳು ಖಾಲಿ ಇದ್ದು ಕಡತ ವಿಲೇವಾರಿಗೆ ಇದು ಕೂಡ ಕಾರಣವಾಗುತ್ತಿದೆ.
ವಿಲೇವಾರಿಗೆ ಕಾದಿವೆ 14 ಸಾವಿರ ಅರ್ಜಿ
ತರೀಕೆರೆ: ತಾಲ್ಲೂಕು ಕಚೇರಿಯಲ್ಲಿರುವ 75 ಹುದ್ದೆಗಳ ಪೈಕಿ 58 ಹುದ್ದೆಗಳು ಭರ್ತಿಯಾಗಿದ್ದು 17 ಹುದ್ದೆಗಳು ಖಾಲಿ ಇವೆ. ತಾಲ್ಲೂಕಿನಲ್ಲಿ ಬಗರ್ ಹುಕ್ಕಂ ಅರ್ಜಿಗಳು ನಮೂನೆ 53ರಲ್ಲಿ 139 ಅರ್ಜಿಗಳು ಉಳಿದಿವೆ. 57ರಲ್ಲಿ 17170 ಅರ್ಜಿ ಸಲ್ಲಿಕೆಯಾಗಿದ್ದು ಇನ್ನೂ 14 ಸಾವಿರ ಅರ್ಜಿ ಪರಿಶೀಲನೆ ಬಾಕಿ ಇದೆ. ಋಷಿಪುರ ತ್ಯಾಗದಬಾಗಿ ಸುಣ್ಣದಹಳ್ಳಿ ನಂದಿ ಮಸ್ಕಲ್ ಮರಡಿ ಸಿದ್ದರಹಳ್ಳಿ ಕೆಂಚಾಪುರ ಸಂತವೇರಿ ಭಾಗಗಳಲ್ಲಿ ಬಗರ್ ಹುಕ್ಕಂ ಸಾಗುವಳಿದಾರರು ಅರಣ್ಯದಂಚಿನಲ್ಲಿ ಸಾಗುವಳಿ ಮಾಡುತ್ತಿದ್ದು ಕಂದಾಯ ಇಲಾಖೆ ರೈತರ ಜಮೀನು ಗುರುತಿಸಲು ಸಾದ್ಯವಾಗುತ್ತಿಲ್ಲ.
ಖಾಲಿ ಹುದ್ದೆಗಳ ವಿವರ
ಹುದ್ದೆ; ಮಂಜೂರಾತಿ; ಭರ್ತಿ; ಖಾಲಿ ತಹಶೀಲ್ದಾರ್ ಗ್ರೂಪ್ ಬಿ; 10; 5; 5 ಪ್ರಥಮ ದರ್ಜೆ ಸಹಾಯಕರು; 76; 62; 14 ಕಂದಾಯ ನಿರೀಕ್ಷಕ; 37; 32; 5 ದ್ವಿತೀಯ ದರ್ಜೆ ಸಹಾಯಕರು; 105; 65; 40 ಗ್ರಾಮ ಆಡಳಿತಾಧಿಕಾರಿ; 291; 205; 41 ‌ಡಿ ದರ್ಜೆ ನೌಕರರು; 64; 24; 40 ಒಟ್ಟು; 751; 540; 211 ––– ತಾಲ್ಲೂಕು; ಮಂಜೂರಾದ ಹುದ್ದೆ; ಭರ್ತಿ; ಖಾಲಿ ಚಿಕ್ಕಮಗಳೂರು; 112; 98; 24 ಮೂಡಿಗೆರೆ; 88; 58; 30 ಶೃಂಗೇರಿ; 46; 33; 13 ಕೊಪ್ಪ; 76; 42; 34 ತರೀಕೆರೆ; 75; 58; 17 ಕಡೂರು; 137; 110; 27 ಎನ್.ಆರ್.ಪುರ; 52; 37; 15 ಅಜ್ಜಂಪುರ; 48; 38; 10 ಕಳಸ; 18; 9; 9

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT