ಜಯಪುರ(ಬಾಳೆಹೊನ್ನೂರು): ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರ ಸಹಕಾರದಲ್ಲಿ ವಸ್ತಾರೆ-ಶೃಂಗೇರಿ ರಸ್ತೆ ಅಭಿವೃದ್ದಿಗೆ ₹90 ಕೋಟಿ ಬಿಡುಗಡೆಯಾಗಿದ್ದು ಮಳೆಗಾಲ ಮುಗಿದ ಮೇಲೆ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಜಯಪುರದಲ್ಲಿ ನೂತನವಾಗಿ ನಿರ್ಮಾಣಗೊಂಡ ಸಮುದಾಯ ಆರೋಗ್ಯ ಕೇಂದ್ರ ಉದ್ಘಾಟನಾ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಹೋಬಳಿ ಕೇಂದ್ರದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಗೊಂಡಿದ್ದು, ಆ.6ರಂದು ಉದ್ಘಾಟನೆಗೊಳ್ಳಲಿದೆ. ಅಂದೇ ಶೃಂಗೇರಿಯಲ್ಲಿ 100 ಹಾಸಿಗೆಗಳ ಆಸ್ಪತ್ರೆಗೆ ಶಂಕುಸ್ಥಾಪನೆ, ಕೊಪ್ಪದಲ್ಲಿ ನಿರ್ಮಾಣಗೊಂಡ ಆಸ್ಪತ್ರೆ ಉದ್ಘಾಟನೆ ಕೂಡ ನಡೆಯಲಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಭಾಗವಹಿಸಲಿದ್ದಾರೆ. ಚುನಾವಣೆ ಸಂದರ್ಭದಲ್ಲಿ ರಾಜಕಾರಣ ಮಾಡೋಣ, ಆದರೆ ಅಭಿವೃದ್ಧಿ ವಿಷಯದಲ್ಲಿ ಬೇಡ. ಹೊಸ ಆಸ್ಪತ್ರೆಗೆ ಸಿಬ್ಬಂದಿಯನ್ನು ತಕ್ಷಣ ನೇಮಕ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದರು.

ಜಯಪುರದ ಶೃಂಗೇರಿ ವೃತ್ತದಿಂದ ಗಣಪತಿ ದೇವಸ್ಥಾನದವರೆಗಿನ ರಸ್ತೆ ವಿಸ್ತರಣೆಗೆ ₹ 5 ಕೋಟಿ, ಕೊಪ್ಪ ಸರ್ಕಾರಿ ಆಸ್ಪತ್ರೆ ಚಾವಣಿ ನಿರ್ಮಾಣಕ್ಕೆ ₹ 1.36 ಕೋಟಿ ಮಂಜೂರಾಗಿದೆ. ಉಧ್ಘಾಟನಾ ಕಾರ್ಯಕ್ರಮಕ್ಕೆ ಸರ್ವಪಕ್ಷ ಮುಖಂಡರ ನೇತೃತ್ವದಲ್ಲಿ ಸ್ವಾಗತಿ ಸಮಿತಿ ರಚಿಸಲಾಗುವುದು ಎಂದರು.

ಜಿಲ್ಲಾ ಆರೋಗ್ಯ ಇಲಾಖೆಯ ಡಿಎಚ್ಒ ಆಶ್ವಥ್ ಬಾಬು ಮಾತನಾಡಿ, ಆರು ಹಾಸಿಗೆಗಳ ಆಸ್ಪತ್ರೆಯನ್ನು 30 ಹಾಸಿಗೆಗಳಿಗೆ ಮೇಲ್ದರ್ಜೇಗೇರಿಸಲಾಗಿದೆ. ತಕ್ಷಣಕ್ಕೆ ಆನಸ್ತೇಶಿಯಾ, ಹಿರಿಯ ಸ್ಟಾಪ್ನರ್ಸ್, ಎಕ್ಸರೇ, ಲ್ಯಾಬ್ ಟೆಕ್ನಿಶಿಯನ್ ಹುದ್ದೆಗಳು ಮಂಜೂರಾಗಿದೆ. ಉಳಿದ ಹುದ್ದೆಗಳನ್ನು ಸರ್ಕಾರದ ಅನುಮತಿ ಪಡೆದು ಭರ್ತಿ ಮಾಡಲಾಗುವುದು ಎಂದರು.

ಆ.6ರಂದು ಮದ್ಯಾಹ್ನ 3 ಗಂಟೆಗೆ ಜಯಪುರದ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಕ್ಕೊಡಿಗೆ ರವೀಂದ್ರ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎಂ.ಸತೀಶ್, ಜಯಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕರುಣಾಕರ,ಉಪಾಧ್ಯಕ್ಷೆ ಜಯಾ ಮುರುಗೇಶ್, ಸದಸ್ಯರಾದ ಫಣಿರಾಜ್,ಪಳನಿ, ಶ್ರೀನಿವಾಸ್, ಶಕುಂತಳಾ,ರಮ್ಯಾ, ವೆಂಕಟೇಶ್, ಕೊಪ್ಪ ತಾಲ್ಲೂಕು ಪಂಚಾಯಿತಿ ಇಒ ನವೀನ್, ಬಸರೀಕಟ್ಟೆ ಸತೀಶ್, ಆಸ್ಪತ್ರೆ ಹೋರಾಟ ಸಮಿತಿಯ ಅನಿಲ್ ಡಿಮೇಲ್ಲೋ, ಬೊಮ್ಮನಕೊಡಿಗೆ ಸುದೇವ್, ಸಾಮಾಜಿಕ ಹೋರಾಟಗಾರ ಯೂಸುಫ್ ಪಟೇಲ್, ಡಾ.ಸುದೀಂದ್ರ, ತಾಲ್ಲೂಕು ವೈದ್ಯಾಧಿಕಾರಿ ಮಹೇಂದ್ರ ಕಿರೀಟಿ, ಡಿ.ಬಿ.ರಾಜೇಂದ್ರ ಭಾಗವಹಿಸಿದ್ದರು.

ಕಾಟಾಚಾರದ ಉದ್ಘಾಟನೆ ಬೇಡ

ಸುಸಜ್ಜಿತ ಆಸ್ಪತ್ರೆ ಉದ್ಘಾಟನೆಗೂ ಮುನ್ನ ಮಂಜೂರಾದ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಿ ಕಾಟಾಚಾರಕ್ಕೆ ಉದ್ಘಾಟನೆ ಮಾಡುವುದು ಬೇಡ. 24ಗಂಟಗಳ ಕಾಲವೂ ಆಸ್ಪತ್ರೆಯಲ್ಲಿ ಜನರಿಗೆ ಸೇವೆ ಸಿಗುವಂತೆ ನೋಡಿಕೊಳ್ಳಬೇಕು. ಸೂಕ್ತ ವೈದ್ಯರ ನೇಮಕ ಮಾಡಬೇಕು ಎಂದು ಆರೇನೂರು ಸಂತೋಷ್ಮಣಿಕಂಠನ್ ಕಂದಸ್ವಾಮಿ.ಸಂತೋಷ್ ಒತ್ತಾಯಿಸಿದರು. ಪಶುವೈದ್ಯಕೀಯ ಇಲಾಖೆಯ ಕೊಪ್ಪದ ಪ್ರದೀಪ್ ಎಂಬುವವರು ತನ್ನ ಕೈಕೆಳಗಿನ ಪಶುವೈದ್ಯರಿಗೆ ಪದೇ ಪದೇ ಕಿರುಕುಳ ನೀಡುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಕೆಲಸ ಮಾಡಲು ವೈದ್ಯರು ಹಿಂದೇಟು ಹಾಕುವ ಸಂದರ್ಭದಲ್ಲಿ ಹೀಗೆ ಅಡ್ಡಿಪಡಿಸುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಅವರು ತನ್ನ ಸ್ವಭಾವ ತಿದ್ದಿಕೊಳ್ಳದಿದ್ದಲ್ಲಿ ಅವರ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. 22 ಗ್ರಾಮ ಪಂಚಾಯಿತಿಗಳಲ್ಲಿ ಕೇವಲ 7 ಜನ ಪಿಡಿಒಗಳು ಕಾರ್ಯ ನಿರ್ವಹಿಸುತ್ತಿದ್ದು ಉಳಿದ ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ ಎಂದು ಗುಡ್ಡೇತೋಟ ಗ್ರಾಮ ಪಂಚಾಯಿತಿ ಸದಸ್ಯ ಕೀರ್ತಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.