ಸೌತಿಕೆರೆ (ನರಸಿಂಹರಾಜಪುರ): ಪಶ್ಚಿಮಘಟ್ಟದ ಪ್ರಕೃತಿಮಡಿಲಿನಲ್ಲಿ ಔಷಧಿ ಸಸ್ಯಗಳು ಹೆಚ್ಚಿನ ಪ್ರಮಾಣದಲ್ಲಿ ಇವೆ ಎಂದು ಕೊಪ್ಪ ಅರಣ್ಯ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾಜೇಂದ್ರ ಬಾಬು ಹೇಳಿದರು.

ತಾಲ್ಲೂಕಿನ ಸೌತಿಕೆರೆ ಗ್ರಾಮದಲ್ಲಿರುವ ಸುವರ್ಣವನದಲ್ಲಿ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ, ಅರಣ್ಯ ಇಲಾಖೆ ಮತ್ತು ಲ್ಯಾಂಪ್ ಸಹಕಾರ ಸಂಘ ಕೊಪ್ಪದ ಸಹಯೋಗದಲ್ಲಿ ಶುಕ್ರವಾರ ನಡೆದ ಔಷಧಿ ಸಸ್ಯಗಳ ಕೃಷಿ, ಸುಸ್ಥಿರ ಕಟಾವು, ಪ್ರಾಥಮಿಕ ಸಂಸ್ಕರಣೆ ಮತ್ತು ಮಾರುಕಟ್ಟೆ ಕುರಿತು ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಕೃತಿಯಲ್ಲಿರುವ ಔಷಧಿ ಸಸ್ಯಗಳಿಂದ ಆರೋಗ್ಯ ಕಾಪಾಡಿಕೊಳ್ಳುವ, ಔಷಧಿ ಗಿಡಗಳನ್ನು ಬೆಳೆಸುವ ಮಾಹಿತಿ ಅರಿಯಲು ಈ ಕಾರ್ಯಾಗಾರ ನೆರವಾಗಲಿದೆ ಎಂದರು.

ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರದ ಡಾ.ಕೆ.ಎನ್.ಪ್ರಭು ಮಾತನಾಡಿ, ರಾಜ್ಯವು ಅಪಾರ ಔಷಧಿ ಸಸ್ಯ ಸಂಪತ್ತನ್ನು ಹೊಂದಿದೆ. ರಾಜ್ಯದಲ್ಲಿ 6,771 ಪ್ರಭೇದಗಳನ್ನು ಗುರುತಿಸಿದ್ದು, ಅವುಗಳಲ್ಲಿ 2,247 ಸಸ್ಯ ಪ್ರಭೇದಗಳನ್ನು ವಿವಿಧ ವೈದ್ಯಪದ್ಧತಿಯಲ್ಲಿ ಬಳಸಲಾಗುತ್ತಿದೆ. ಔಷಧಿ ಸಸ್ಯಗಳು ಶೇ 50ರಷ್ಟು ಅರಣ್ಯದಿಂದ ಹಾಗೂ ಶೇ 50ರಷ್ಟು ಕೃಷಿಯಿಂದ ಲಭಿಸುತ್ತಿವೆ. ಔಷಧಿಯಾಗಿ ಬಳಸುವ ಶೇ 75ರಷ್ಟು ಪ್ರಭೇದಗಳು ಕಾಡಿನಲ್ಲೇ ದೊರೆಯುತ್ತಿವೆ ಎಂದರು.

248 ಔಷಧಿ ಪ್ರಭೇದಗಳನ್ನು ಗುರುತಿಸಲಾಗಿದ್ದು, ಅವುಗಳಿಂದ 100ಕ್ಕೂ ಅಧಿಕ ಟನ್ ಔಷಧ ಸಂಗ್ರಹವಾಗುತ್ತಿದೆ. ಅರಣ್ಯ ಉತ್ಪನ್ನಗಳಿಗೆ ಹೆಚ್ಚು ಬೇಡಿಕೆಯಿದೆ. ಲ್ಯಾಪ್ಸ್ ಸೊಸೈಟಿಯಿಂದ ಸಂಗ್ರಹಿಸಲಾಗುತ್ತಿರುವ ಮುರುಗನ ಹುಳಿ, ದೂಪ ಮತ್ತಿತರ ಅರಣ್ಯ ಉತ್ಪನ್ನಗಳಿಗೆ ವ್ಯಾಪಾರಿಗಳಿಂದ ಬೇಡಿಕೆಯಿದೆ. ಅವರನ್ನು ಸಂಪರ್ಕಿಸುವ ಕೆಲಸ ನಡೆಯಬೇಕು. ಕೊಪ್ಪ ಲ್ಯಾಂಪ್ಸ್ ಸೊಸೈಟಿ ವ್ಯಾಪ್ತಿಯಲ್ಲಿ 10 ಸ್ಥಳಗಳನ್ನು ಪ್ರಾಯೋಗಿಕ ಮಾರುಕಟ್ಟೆಗೆ ಗುರುತಿಸಲಾಗಿದೆ. ಅರಣ್ಯ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಬಲವರ್ಧನೆಗೆ ಲ್ಯಾಂಪ್ಸ್ ಸೊಸೈಟಿ ಸದಸ್ಯರಿಗೆ ಮಾಹಿತಿ ನೀಡಲು ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.

ಕೊಣಂದೂರಿನ ಡಾ.ಮುರುಳಿಧರ್ ಔಷಧಿ ಸಸ್ಯಗಳ ಸಂಗ್ರಹದ ಬಗ್ಗೆ ಮಾಹಿತಿ ನೀಡಿದರು.

ಕೊಪ್ಪ ಲ್ಯಾಂಪ್ಸ್ ಸೊಸೈಟಿಯ ಉಪಾಧ್ಯಕ್ಷ ಯೋಗಿಶ್, ನಿರ್ದೇಶಕರಾದ ಜಯರಾಮ್, ಬಿ.ಡಿ.ಈರಪ್ಪ, ಎಂ.ಮಹೇಶ್, ಕೆಂಪಣ್ಣ, ಮರಿಯಪ್ಪ, ಕೆ.ಎಸ್.ಮಹೇಶ್, ಕೆ.ವಿ.ಚಂದ್ರಶೇಖರ್, ಲ್ಯಾಂಪ್ಸ್ ಸೊಸೈಟಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್ ಭಾಗವಹಿಸಿದ್ದರು.

ಸಸ್ಯಗಳ ಪರಿಚಯ ಪ್ರಾತ್ಯಕ್ಷಿಕೆ

ಕೊಪ್ಪ ಆಯುರ್ವೇದ ಕಾಲೇಜಿನ ಡಾ.ಕೃಷ್ಣ ಕಿಶೋರ್ ಔಷಧಿ ಸಸ್ಯಗಳ ಪರಿಚಯ ಹಾಗೂ ಅವುಗಳಿಂದ ಗುಣಪಡಿಸಬಹುದಾದ ಕಾಯಿಲೆಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಪಿತ್ತರಸ ಬಾಯಿಗೆ ಕಹಿ ಹೊಟ್ಟೆಗೆ ಸಿಹಿಯಾಗಿದೆ. ನಲ್ಲಿ ಕಾಯಿ ಯಕೃತ್ ಪಿತ್ತಕೋಶ ಸಮಸ್ಯೆಗೆ ಉತ್ತಮ ಮುತ್ತುಗದ ಬೀಜ ಜಂತುಹುಳು ರೋಗಕ್ಕೆ ಉತ್ತಮ ಔಷಧಿ ಇದರ ಎಲೆಗಳನ್ನು ಊಟಕ್ಕೆ ಬಳಸಲಾಗುತ್ತದೆ. ಅಮೃತ ಬಳ್ಳಿ ಎಲೆಯನ್ನು ಪ್ರತಿನಿತ್ಯ ಸೇವಿಸುವುದರಿಂದ ಮಧುಮೇಹ ನಿಯಂತ್ರಣ ಮಾಡಬಹುದು. ಅಶೋಕ ಗಿಡದ ತೊಗಟೆ ಸ್ತ್ರೀಯರ ಆರೋಗ್ಯ ಸಮಸ್ಯೆ ನಿವಾರಣೆಗೆ ಉತ್ತಮವಾಗಿದೆ ಎಂದರು. ಸುಂಗಧಿ ಬೇರನ್ನು ತಂಪುಪಾನಿಯವಾಗಿ ಉಪಯೋಗಿಸಿದರೆ ರಕ್ತ ಶುದ್ಧೀಕರಣ ಗ್ಯಾಸ್ಟ್ರಿಕ್ ಸಮಸ್ಯೆ ಬಗೆಹರಿಸಬಹುದು. ಬೇಕಿನ ಗೆಡ್ಡೆ ಅತಿಸಾರಕ್ಕೆ ಬಳಸಲಾಗುತ್ತದೆ.

ಕೋಳಿ ಕುಟುಮನ ಗೆಡ್ಡೆಯನ್ನು ಸುಖ ಪ್ರಸವಕ್ಕೆ ಬಳಸಲಾಗುತ್ತದೆ. ನೆಗ್ಗಿಯ ಮುಳ್ಳು ಚೂರ್ಣವನ್ನು ಮೂತ್ರ ಪಿಂಡ ಮತ್ತು ಮೂತ್ರ ನಾಳದ ಸಮಸ್ಯೆ ನಿವಾರಣೆಗೆ ಬಳಸಲಾಗುತ್ತದೆ. ಗಣಿಕೆ ಸೊಪ್ಪು ಆಟಿ ಮರದ ಕಶಾಯ ಒಂದೆಲಗ ಸೊಪ್ಪು ಬೂದುಕುಂಬಳಕಾಯಿ ದಾಲ್ಚಿನಿ ಆಡುಸೋಗೆ ಶಂಖಪುಷ್ಪ ಬೆಟ್ಟದಾವರೆ ಬೈನೆಮರ ಅಳಲೆಕಾಯಿಗಳ ಔಷಧೀಯ ಗುಣಗಳನ್ನು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.