ತರೀಕೆರೆ: ತಾಲ್ಲೂಕಿನ ನಂದಿಬಟ್ಟಲು ಗ್ರಾಮದ ಉಮ್ಲಾನಾಯ್ಕ ಎಂಬುವರ ಜಮೀನಿಗೆ ದಾಳಿ ನಡೆಸಿದ ಕಾಡಾನೆಗಳ ಹಿಂಡು ಫಸಲು ಕೊಡುತ್ತಿದ್ದ 50 ಅಡಿಕೆ ಮರ, ತೆಂಗು ಮತ್ತು ನೀರಾವರಿಗೆ ಅಳವಡಿಸಲಾಗಿದ್ದ ಪೈಪ್ಗಳನ್ನು ತುಳಿದು ಧ್ವಂಸಗೊಳಿಸಿವೆ.

‘ಕಾಡಾನೆ ದಾಳಿಯಿಂದ ಬೆಳೆ ಹಾನಿಯಾಗಿದ್ದು, ದಿಕ್ಕೇ ತೊಚದಂತಾಗಿದೆ. ಕಾಡಾನೆ ಹಾವಳಿ ತಡೆಗೆ ಶಾಶ್ವತ ಪರಿಹಾರ ಕೈಗೊಳ್ಳಬೇಕು’ ಎಂದು ಉಮ್ಲಾನಾಯ್ಕ ಮನವಿ ಮಾಡಿದರು.

‘4 ಎಕರೆ ಜಮೀನಿನಲ್ಲಿ 2 ಸಾವಿರ ಅಡಿಕೆ ಸಸಿಗಳನ್ನು ನೆಟ್ಟು, ಮಕ್ಕಳಂತೆ ಪೋಷಣೆ ಮಾಡಿ, ಅಡಿಕೆ ಫಸಲನ್ನೇ ನಂಬಿ ಜೀವನ ನಡೆಸುತ್ತಿದ್ದ ಉಮ್ಲಾನಾಯ್ಕರ ಕುಟುಂಬ ಬೀದಿಗೆ ಬಿದ್ದಂತಾಗಿದೆ. ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ನಂದಿಬಟ್ಟಲು ಗ್ರಾ.ಪಂ. ಮಾಜಿ ಅಧ್ಯಕ್ಷ ಎನ್.ಪಿ. ಕೃಷ್ಣೇಗೌಡ ಒತ್ತಾಯಿಸಿದ್ದಾರೆ.

ಕಾಡಾನೆ ಕೃಷಿಕರ ಜಮೀನಿಗೆ ನುಗ್ಗುವುದನ್ನು ತಡೆಯಲು ಭದ್ರಾ ಅಭಯಾರಣ್ಯದ ಅಂಚಿನಲ್ಲಿ ನಿರ್ಮಿಸಿದ್ದ ಆನೆ ತಡೆ ಕಂದಕದ ಕೆಲ ಭಾಗಗಳು ಮುಚ್ಚಿ ಹೋಗಿದ್ದು, ಅಂತಹ ಸ್ಥಳಗಳ ಮೂಲಕ ಕಾಡಾನೆ ತೋಟಕ್ಕೆ ನುಗ್ಗುತ್ತಿವೆ. ಅರಣ್ಯಾಧಿಕಾರಿಗಳು ಇತ್ತ ಗಮನಹರಿಸಿ ಆನೆ ಕಂದಕ ದುರಸ್ತಿಗೆ ಮುಂದಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.