ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಳೆಹೊನ್ನೂರು: ಹಾಸ್ಟೆಲ್ ಕಟ್ಟಡದಿಂದ ಬಿದ್ದು ಮಹಿಳೆ ಸಾವು

Published 9 ಜುಲೈ 2024, 15:22 IST
Last Updated 9 ಜುಲೈ 2024, 15:22 IST
ಅಕ್ಷರ ಗಾತ್ರ

ಬಾಳೆಹೊನ್ನೂರು (ಚಿಕ್ಕಮಗಳೂರು): ವಸತಿ ನಿಲಯದಲ್ಲಿದ್ದ ಪುತ್ರಿಯನ್ನು ನೋಡಲು ಬಂದಿದ್ದ ಚಿಕ್ಕಬಳ್ಳಾಪುರದ ಮಹಿಳೆಯೊಬ್ಬರು ಕಟ್ಟಡದಿಂದ ಬಿದ್ದು ಮೃತಪಟ್ಟಿದ್ದಾರೆ.

ಚಿಕ್ಕಬಳ್ಳಾಪುರ ಸಮೀಪದ ಬೊಮ್ಮನಹಳ್ಳಿಯ ಚೈತ್ರಾ ಗಜೇಂದ್ರ (33) ಮೃತ ಮಹಿಳೆ. ಕೊಪ್ಪ ರಸ್ತೆಯ ಮಳಿಗೆಯ ಸತ್ಯಸಾಯಿ ಶ್ರೀನಿಕೇತನಂ ವಿದ್ಯಾ ಸಂಸ್ಥೆಯಲ್ಲಿ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪುತ್ರಿಯನ್ನು ನೋಡಲು ಚೈತ್ರಾ ಭಾನುವಾರ ಬಂದಿದ್ದರು. ಅನಾರೋಗ್ಯದ ಕಾರಣ ಹೇಳಿ ಅವರು ವಸತಿ ನಿಲಯದಲ್ಲೇ ಉಳಿದಿದ್ದರು. ರಾತ್ರಿ ಮೂರನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನೆ ಕುರಿತು ಮೃತರ ತಾಯಿ ವೆಂಕಟಲಕ್ಷ್ಮಮ್ಮ ಠಾಣೆಗೆ ದೂರು ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪಿಎಸ್‌ಐ ಅಂಬರೀಶ್ ತನಿಖೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT