ಚಿಕ್ಕಮಗಳೂರು: ಜಿಲ್ಲೆಯ ಬಹುದಿನಗಳ ಬೇಡಿಕೆ ಯಾಗಿದ್ದ ಪ್ರತ್ಯೇಕ ಹಾಲು ಉತ್ಪಾದಕರ ಘಟಕ ರಚನೆಗೆ ರಾಜ್ಯ ಸಚಿವ ಸಂಪುಟದಲ್ಲಿ ಇತ್ತೀಚೆಗೆ ಒಪ್ಪಿಗೆ ಸಿಕ್ಕಿ, ಬಜೆಟ್ಗೂ ಸೇರ್ಪಡೆಯಾಗಿರುವ ಬೆನ್ನಲ್ಲೇ ರೈತರಲ್ಲೂ ಆರ್ಥಿಕ ಸದೃಢತೆ ಕಾಣುವ ಆಶಾಭಾವನೆ ಮೂಡಿದೆ.

ಪ್ರತ್ಯೇಕ ಹಾಲು ಘಟಕವೊಂದು ಯಶಸ್ವಿ ಯಾಗಿ ನಡೆಯಲು ಕನಿಷ್ಠ 45 ಸಾವಿರ ಲೀಟರ್ ಹಾಗೂ ಗರಿಷ್ಠ 1 ಲಕ್ಷ ಲೀಟರ್ ಹಾಲು ಉತ್ಪಾ ದನೆ ಇದ್ದರೆ ಸಾಕು ಎನ್ನುತ್ತದೆ ತಜ್ಞರ ವರದಿ. ಆದರೆ, ಜಿಲ್ಲೆಯಲ್ಲಿ ಸುಮಾರು 7.50 ಲಕ್ಷ ಲೀಟರ್ ಹಾಲು ಉತ್ಪಾದನೆ ಸಾಧ್ಯತೆಯನ್ನು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ ನೇತೃತ್ವದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಕಂಡುಕೊಳ್ಳಲಾಗಿದೆ. ಹೀಗಿದ್ದರೂ ಜಿಲ್ಲೆಯಲ್ಲಿ ಇಲ್ಲಿವರೆಗೂ ಪ್ರತ್ಯೇಕ ಹಾಲು ಉತ್ಪಾದಕರ ಘಟಕ ಆರಂಭವಾಗಿರಲಿಲ್ಲ.

ಹಾಸನ ಹಾಲು ಒಕ್ಕೂಟದಲ್ಲಿ ಚಿಕ್ಕಮಗ ಳೂರು ಜಿಲ್ಲೆಯನ್ನು ಪ್ರತಿನಿಧಿಸಿದವರು ವಿದೇಶ ಪ್ರವಾಸಕ್ಕೆ ತೃಪ್ತಿಪಟ್ಟಿದ್ದರಿಂದ ಜಿಲ್ಲೆಗೆ ಪ್ರತ್ಯೇಕ ಹಾಲು ಉತ್ಪಾದಕರ ಘಟಕ ಮರೀಚಿಕೆ ಯಾಗಿಯೇ ಉಳಿದಿತ್ತು. ಹೀಗಾಗಿ ಜಿಲ್ಲೆಯ ರೈತರು ಪ್ರತ್ಯೇಕ ಒಕ್ಕೂಟಕ್ಕೆ ದನಿ ಎತ್ತಿದರೂ ಪ್ರಯೋಜನವಾಗಲಿಲ್ಲ.

ಹಾಸನ ಹಾಲು ಉತ್ಪಾದಕರ ಒಕ್ಕೂಟ (ಹಾಸನ, ಚಿಕ್ಕಮ ಗಳೂರು, ಕೊಡಗು)ವು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಮೀಕ್ಷೆ ನಡೆಸಿ, ಜಿಲ್ಲೆಯಲ್ಲಿ ಪ್ರತ್ಯೇಕ ಹಾಲು ಉತ್ಪಾದಕರ ಒಕ್ಕೂಟ ರಚನೆಗೆ ಪೂರಕ ಅವಕಾಶವಿಲ್ಲವೆಂಬ ನಕರಾತ್ಮಕ ವರದಿಯನ್ನು ಕರ್ನಾಟಕ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಿಗೆ ಎರಡು ವರ್ಷಗಳ ಹಿಂದೆಯೇ ಸಲ್ಲಿಸಿತು.

ಈ ವರದಿ ಪರಿಣಾಮ ಜಿಲ್ಲೆಯ ಜನರು ಹೋರಾಟಕ್ಕೆ ಇಳಿಯುವಂತೆ ಮಾಡಿತು. ಡಿ.ವಿ.ಸದಾನಂದಗೌಡರು ಸಂಸದರಾಗಿದ್ದಾಗಲೇ ಜಿಲ್ಲೆಗೆ ಹಾಲು ಒಕ್ಕೂಟದ ಅಗತ್ಯ ಮನಗಂಡಿದ್ದರು. ಹಾಲು ಒಕ್ಕೂಟಕ್ಕಾಗಿ ಜಿಲ್ಲೆಯ ಐವರು ಶಾಸಕರು ನಡೆಸುತ್ತಿದ್ದ ರಾಜಕೀಯ ಪ್ರಯತ್ನಗಳಿಗೆ ಮುಖ್ಯಮಂತ್ರಿಯಾದ ಮೇಲೆ ಅವರು ಇನ್ನಷ್ಟು ಶಕ್ತಿ ತುಂಬಿದರು. ಇಂದಲ್ಲ; ನಾಳೆಯಾದರೂ ಪ್ರತ್ಯೇಕ ಘಟಕ ಆರಂಭವಾ ಗುವುದು ಖಚಿತ ಎನ್ನುತ್ತಾರೆ ಬಿಜೆಪಿ ಮುಖಂಡರು.

10 ತಿಂಗಳ ಹಿಂದೆ ಜಿಲ್ಲಾ ಪಂಚಾಯಿತಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಮತ್ತೊಮ್ಮೆ ಜಿಲ್ಲೆಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ರಚನೆಗೆ ಇರುವ ಅವಕಾಶಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿ ವೃದ್ಧಿ ಯೋಜನೆ ಸಂಸ್ಥೆಗೆ ವಹಿಸಲಾಗಿತ್ತು.

ಸಂಸ್ಥೆ ಕ್ಷೇತ್ರಾಧ್ಯಯನ ನಡೆಸಿ ಸಲ್ಲಿಸಿರುವ ವರದಿ ಆಧಾರದ ಮೇಲೆ ಜಿಲ್ಲೆಗೆ ಪ್ರತ್ಯೇಕ ಹಾಲು ಉತ್ಪಾದಕರ ಒಕ್ಕೂಟ ರಚನೆ ಬೇಡಿಕೆಗೆ ಧ್ವನಿ ಬಂದಿದೆ. ಇದು ಈ ಬಾರಿಯ ಬಜೆಟ್ನಲ್ಲಿ ಅಧಿ ಕೃತ ಘೋಷಣೆ ಆಗದಿದ್ದರೂ ನಂತರದಲ್ಲಿ ಪೂರಕ ಬಜೆಟ್ಗೆ ಸೇರುವಂತೆ ಮಾಡುವಷ್ಟರ ಮಟ್ಟಿಗೆ ಜಿಲ್ಲೆಯ ಬಿಜೆಪಿ ಶಾಸಕರು ಯಶಸ್ವಿಯಾಗಿದ್ದಾರೆ.

ಜಿಒ ಆಗಬೇಕು: ಜಿಲ್ಲೆಗೆ ಪ್ರತ್ಯೇಕ ಹಾಲು ಉತ್ಪಾ ದಕರ ಒಕ್ಕೂಟ ರಚನೆಗೆ ಸಂಪುಟದಲ್ಲಿ ಒಪ್ಪಿಗೆ ಸಿಕ್ಕಿದ್ದು, ಯೋಜನೆ ಪ್ರಾರಂಭಿಕ ಹಂತದಲ್ಲಿದೆ. ಇನ್ನೂ ಜಿಒ (ಸರ್ಕಾರಿ ಆದೇಶ) ಆಗಿಲ್ಲ. ಆದಷ್ಟು ಬೇಗ ಹಣಕಾಸು ಇಲಾಖೆ, ಕರ್ನಾಟಕ ಹಾಲು ಒಕ್ಕೂಟ ಹಾಗೂ ಕಂದಾಯ ಇಲಾಖೆಯೊಂದಿಗೆ ಜಂಟಿ ಸಭೆ ನಡೆಸಿ, ಸರ್ಕಾರಿ ಆದೇಶ ಹೊರ ಬೀಳುವಂತೆ ನೋಡಿಕೊಳ್ಳಬೇಕು. ಹಾಸನ ಹಾಲು ಉತ್ಪಾದಕರ ಒಕ್ಕೂಟ ಯಾವುದೇ ಅಡ್ಡಿ ಪಡಿಸದೆ, ಸಾಮಾನ್ಯ ಸಭೆಯಲ್ಲಿ ನಿರ್ಣಯ ಅಂಗೀಕರಿಸಿದರೆ ಆದಷ್ಟು ಬೇಗ ಜಿಲ್ಲೆಯ ರೈತರು ಮತ್ತು ಹೈನುಗಾರಿಕೆಯನ್ನು ಉಪಕಸುಬಾಗಿ ನಂಬಿಕೊಂಡು ಜೀವನ ಮಾಡುತ್ತಿರುವವರ ಕನಸು ನನಸಾಗಲಿದೆ ಎನ್ನುತ್ತಾರೆ ಶಾಸಕ ಸಿ.ಟಿ.ರವಿ.

ಹಾಲು ಒಕ್ಕೂಟದ ಅಧ್ಯಕ್ಷ ಹಾಗೂ ಶಾಸಕ ಎಚ್.ಡಿ.ರೇವಣ್ಣ ಅವರೊಂದಿಗೆ ಮುಖಾಮುಖಿ ಚರ್ಚಿಸಿದಾಗ `ನಮ್ದೇನಿಲ್ಲ; ನೀವ್ ಬೇಕಾದರೆ ಇವತ್ತೇ ಪ್ರತ್ಯೇಕ ಹಾಲು ಒಕ್ಕೂಟ ಮಾಡ್ಕೊ ಬಹುದು~ ಎನ್ನುವ ಭರವಸೆ ನೀಡಿದ್ದಾರೆ. ಹಾಸನ ಹಾಲು ಒಕ್ಕೂಟ ನಿರ್ದೇಶಕರು ಏನಾದರೂ ತಕ ರಾರು ತೆಗೆದು, ತೊಡಕುಂಟು ಮಾಡಿದರೆ, ಇದನ್ನು ರಾಜಕೀಯ ಹೋರಾಟ ವಾಗಿ ಸ್ವೀಕರಿಸುತ್ತೇವೆ ಎಂದು ಮಂಗಳವಾರ `ಪ್ರಜಾವಾಣಿ~ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.