ಮಂಗಳವಾರ, ಏಪ್ರಿಲ್ 20, 2021
29 °C

ತಮಿಳುನಾಡು ಚುನಾವಣೆಗೆ ಚಿತ್ರದುರ್ಗದಿಂದ 475 ಸಿಬ್ಬಂದಿ ನಿಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ತಮಿಳುನಾಡು ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ ಬಂದೋಬಸ್ತ್‌ಗೆ ಜಿಲ್ಲೆಯ 475 ಗೃಹರಕ್ಷಕದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಅಲ್ಲಿನ ಸರ್ಕಾರಿ ಬಸ್‌ಗಳಲ್ಲೇ ಶುಕ್ರವಾರ ಚಿತ್ರದುರ್ಗದಿಂದ ತೆರಳಿದರು.

‘ಜಿಲ್ಲೆಯ ಗೃಹರಕ್ಷಕದಳದ ಸಿಬ್ಬಂದಿ ಈ ಹಿಂದೆಯೂ ಹಲವು ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಇದೇ ಕಾರಣಕ್ಕಾಗಿ ಚುನಾವಣಾ ಆಯೋಗ ಹಾಗೂ ತಮಿಳುನಾಡು ಗೃಹ ಇಲಾಖೆ ಆದೇಶದ ಮೇರೆಗೆ ಬಂದೋಬಸ್ತ್‌ಗೆ ಕಳುಹಿಸಲಾಗಿದೆ’ ಎಂದು ಜಿಲ್ಲಾ ಗೃಹರಕ್ಷಕದಳದ ಕಮಾಂಡೆಂಟ್ ಸಿ.ಕೆ. ಸಂಧ್ಯಾ ತಿಳಿಸಿದ್ದಾರೆ.

ಗೃಹರಕ್ಷಕದಳದ ತಿಪ್ಪೇಸ್ವಾಮಿ, ಸುಧಾ, ವಸಂತ್, ಶಿವಣ್ಣ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು