ಬುಧವಾರ, ನವೆಂಬರ್ 25, 2020
19 °C
ಎತ್ತಿನಗಾಡಿಗೆ ಪೊಲೀಸರ ಸ್ವಂತ ಖರ್ಚಿನಲ್ಲಿ ರೇಡಿಯಂ ಸ್ಟಿಕ್ಕರ್

ಅಪಘಾತ ತಡೆಗೆ ವಿನೂತನ ಮಾರ್ಗ

ತಿಮ್ಮಯ್ಯ ಜೆ. ಪರಶುರಾಂಪರ Updated:

ಅಕ್ಷರ ಗಾತ್ರ : | |

Prajavani

ಪರಶುರಾಂಪುರ: ಚಳ್ಳಕೆರೆ ತಾಲ್ಲೂಕಿನಲ್ಲಿ ಬಹುತೇಕ ಹಳ್ಳಿಗಳಲ್ಲಿ ಶೇಂಗಾ ಕಟಾವು ಮಾಡಿದ್ದು, ಅದನ್ನು ಮನಗೆ ತರಲು ಎತ್ತಿನ ಗಾಡಿಯನ್ನು ಬಳಸುತ್ತಾರೆ. ರಾತ್ರಿ ವೇಳೆ ಎತ್ತಿನಗಾಡಿಗೆ ಬೆಳಕು ಇಲ್ಲದ ಕಾರಣ ಅಪಘಾತಗಳು ನಡೆಯುತ್ತವೆ. ಅವುಗಳನ್ನು ತಪ್ಪಿಸಲು ಪರಶುರಾಂಪುರ ಪೊಲೀಸ್ ಇಲಾಖೆ ವಿನೂತನ ಕಾರ್ಯಕ್ರಮ ಕೈಗೊಂಡಿದೆ.

ಕೃಷಿ ಚಟುವಟಿಕೆ ಮುಗಿಸಿ ರಾತ್ರಿ ಹೊತ್ತು ಹೋಗುವ ಎತ್ತಿನಗಾಡಿಗಳು ಮುಂದೆ ಹಾಗೂ ಹಿಂಬದಿಯಿಂದ ಬರುವ ವಾಹನಗಳಿಗೆ ಸುಲಭವಾಗಿ ಕಾಣುವಂತೆ ಕೆಂಪು ಬಣ್ಣದ ರೇಡಿಯಂ ಸ್ಟಿಕ್ಕರ್ ಅನ್ನು ಪೊಲೀಸರು ತಮ್ಮ ಸ್ವಂತ ಹಣದಲ್ಲಿ ಹಾಕುತ್ತಿದ್ದಾರೆ. ಪೊಲೀಸರ ಈ ಕ್ರಮ ರೈತರ ಮೆಚ್ಚುಗೆಗೆ ಪಾತ್ರವಾಗಿದೆ.

‌ರಾಜ್ಯದ ಗಡಿಯನ್ನು ಹೊಂದಿಕೊಂಡಿರುವ ಈ ಹೋಬಳಿಯು ಚಿತ್ರದುರ್ಗ, ತುಮಕೂರು, ಬಳ್ಳಾರಿ, ಅಂಧ್ರಪ್ರದೇಶದ ಅನಂತಪುರ, ಹಿಂದೂಪುರಕ್ಕೆ ಹೋಗುವ ವಾಹನಗಳು ಇಲ್ಲಿಂದಲೇ ಹೋಗಬೇಕು. ಹಾಗಾಗಿ ವಾಹನ ದಟ್ಟಣೆ ಹೆಚ್ಚು. ರೈತರು ಎಚ್ಚರಿಕೆಯಿಂದ ಇರಬೇಕು. ರೇಡಿಯಂ ಸ್ಟಿಕ್ಕರ್ ಹಾಕುವುದರಿಂದ ಎದುರಿನ ವಾಹನಗಳಿಗೆ ಎತ್ತಿನಗಾಡಿ ಇರುವುದು ತಿಳಿಯುತ್ತದೆ ಎನ್ನುತ್ತಾರೆ ಪಿಎಸ್ಐ ಚಂದ್ರಶೇಖರ್.

ಈಚೆಗೆ ಎತ್ತಿನಗಾಡಿ ಮತ್ತು ಲಾರಿ ಮಧ್ಯೆ ಗೌರಿಪುರದ ಬಳಿ ಅಪಘಾತವಾಗಿತ್ತು. ಇದರಿಂದ ಎಚ್ಚೆತ್ತ ಪೊಲೀಸ್‌ ಇಲಾಖೆ ರೈತರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಮೂಕ
ಪ್ರಾಣಿಗಳ ಜೀವ ಉಳಿಸಲು ಮುಂದಾಗಿದೆ. ಇದರಿಂದ ಎಲ್ಲರಿಗೂ ಅನುಕೂಲ ಎನ್ನುತ್ತಾರೆ ಪೊಲೀಸ್ ಸಿಬ್ಬಂದಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.