ಚಿಕ್ಕಜಾಜೂರು: ಬನದ ಹುಣ್ಣಿಮೆ ಹಬ್ಬವನ್ನು ಗ್ರಾಮದ ದೇವಾಂಗ ಸಮಾಜದವರು ಶನಿವಾರ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ಇಲ್ಲಿನ ಬನಶಂಕರಿ ಅಮ್ಮನವರ ದೇವಸ್ಥಾನ ಸಮಿತಿ ಹಾಗೂ ದೇವಾಂಗ ಸಮಾಜದ ವತಿಯಿಂದ ದೇವಸ್ಥಾನವನ್ನು ಬಗೆ–ಬಗೆಯ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು.

ಮಧ್ಯಾಹ್ನ 1 ಗಂಟೆಗೆ ದೇವಸ್ಥಾನದಲ್ಲಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ, ದೇವಸ್ಥಾನದ ಆವರಣದಲ್ಲಿ ಗೊರಯ್ಯಗಳಾದ ಗೋಪಾಲ್ ಹಾಗೂ ಮೋಹನ್ ಅವರು ಪ್ರಧಾನ ಅರ್ಚಕ ಶ್ರೀನಿವಾಸ ಶಾಸ್ತ್ರಿ ಅವರ ನಿರ್ದೇಶನದಂತೆ ಊಳಿಗೆ ಪೂಜೆ ನಡೆಸಿ, ಸರಪಳಿ ಹಾಗೂ ಚಾವಟಿಗಳಿಂದ ತಲಾ ಮೂರು ಬಾರಿ ಹೊಡೆದುಕೊಂಡರು. ಈ ಧಾರ್ಮಿಕ ದೃಶ್ಯವನ್ನು ನೂರಾರು ಭಕ್ತರು ವೀಕ್ಷಿಸಿ ಭಕ್ತಿ ಸಮರ್ಪಿಸಿದರು.

ಅದ್ದೂರಿ ಮೆರವಣಿಗೆ: ಊಳಿಗೆ ಪೂಜೆಯ ನಂತರ ಅಮ್ಮನವರ ಉತ್ಸವ ಮೂರ್ತಿಯನ್ನು ಅಲಂಕೃತ ಪಂಟಪದಲ್ಲಿ ಕೂರಿಸಿ ಟ್ರ್ಯಾಕ್ಟರ್ನಲ್ಲಿ ಇಟ್ಟು, ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು.

ಡೊಳ್ಳು ಕುಣಿತದವರು ಬಡಿದ ಶಬ್ದದ ತಾಳಕ್ಕೆ ತಕ್ಕಂತೆ ಯುವಕರು ಹಾಗೂ ಮಕ್ಕಳು ಹೆಜ್ಜೆ ಹಾಕಿದರು. ಸಮೀಪದ ಕಡೂರಿನ ವೀರಭದ್ರೇಶ್ವರ ವೀರಗಾಸೆ ಕಲಾ ತಂಡ ಹಾಗೂ ಬೊಂಬೆಗಳ ಮುಖವಾಡ ಹಾಕಿದ ಸದಸ್ಯರು ನಡೆಸಿಕೊಟ್ಟ ನೃತ್ಯ ರೂಪಕಗಳು ಗ್ರಾಮಸ್ಥರ ಗಮನ ಸೆಳೆದವು. ಯುವಕರು ಸಿಡಿ ಮದ್ದು ಸಿಡಿಸಿ ಸಂಭ್ರಮಿಸಿದರು. ಗ್ರಾಮದ ದೇವಾಂಗ ಬಳಗದ ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಪ್ರಸಾದ ವಿತರಣೆ: ಸಂಜೆ ಮೆರವಣಿಗೆಯಿಂದ ಉತ್ಸವ ಮೂರ್ತಿ ದೇವಸ್ಥಾನಕ್ಕೆ ಮರಳಿದ ನಂತರ, ಗರ್ಭಗುಡಿಯಲ್ಲಿನ ಅಮ್ಮನವರಿಗೆ ಮಹಾ ಮಂಗಳಾರತಿ ನಡೆಸಲಾಯಿತು. ನಂತರ, ಭಕ್ತರಿಗೆ ಪ್ರಸಾದ ವಿತರಣೆಯನ್ನು ದೇವಸ್ಥಾನ ಸಮಿತಿಯಿಂದ ನಡೆಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.