ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವ ಜಯಂತಿ: ದುಬೈಗೆ ತೆರಳಿದ ತರಳಬಾಳು ಶ್ರೀ

Published 11 ಮೇ 2024, 15:23 IST
Last Updated 11 ಮೇ 2024, 15:23 IST
ಅಕ್ಷರ ಗಾತ್ರ

ಸಿರಿಗೆರೆ: ದುಬೈನಲ್ಲಿ ನಡೆಯಲಿರುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ತರಳಬಾಳು ಬೃಹನ್ಮಠದ  ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಶನಿವಾರ ಪ್ರಯಾಣ ಬೆಳೆಸಿದರು.

ದುಬೈನ ಯುಎಇ ಬಸವ ಸಮಿತಿಯ ಆಶ್ರಯದಲ್ಲಿ ಮೇ 19ರಂದು ಜೆ.ಎಸ್.‌ಎಸ್.ಪ್ರೈವೇಟ್‌ ಸ್ಕೂಲ್‌ ಸಭಾಂಗಣದಲ್ಲಿ‌ 17ನೇ ವರ್ಷದ ಬಸವ ಜಯಂತಿ ಕಾರ್ಯಕ್ರಮ ನಡೆಯಲಿದೆ.

ನಂತರ ಮಸ್ಕತ್‌ನಲ್ಲಿ ನಡೆಯುವ ಬಸವ ಜಯಂತಿ ಕಾರ್ಯಕ್ರಮದಲ್ಲೂ ಶ್ರೀಗಳು ಪಾಲ್ಗೊಳ್ಳುವರು.

ಪ್ರಯಾಣಕ್ಕೂ ಮುನ್ನ ಶ್ರೀಗಳು ಮಠದ ಆವರಣದಲ್ಲಿರುವ ಐಕ್ಯಮಂಟಪಕ್ಕೆ ಭೇಟಿ ನೀಡಿ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಹಾಗೂ ಗುರುಶಾಂತ ಸ್ವಾಮೀಜಿ ಪ್ರತಿಮೆಗಳಿಗೆ ಪುಷ್ಪ ನಮನ ಸಲ್ಲಿಸಿದರು.

ವಕೀಲ ಜಿ.ಜಿ. ಸೋಮಶೇಖರಪ್ಪ, ಚಿತ್ರದುರ್ಗ ವಿಶ್ವಬಂಧು ಬ್ಯಾಂಕ್‌ ಅಧ್ಯಕ್ಷ ಜಿ.ಬಿ. ತೀರ್ಥಪ್ಪ, ಸಿರಿಗೆರೆ ವ್ಯವಸಾಯ ಸಂಘದ ಅಧ್ಯಕ್ಷ ಕೆ.ಎಂ. ಮಂಜುನಾಥ್‌, ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್.‌ ಮರುಳಸಿದ್ಧಯ್ಯ ಇದ್ದರು.

ನ್ಯಾಯಪೀಠಕ್ಕೆ ರಜೆ: ಶ್ರೀಗಳು ದುಬೈ ಮತ್ತು ಮಸ್ಕತ್‌ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದರಿಂದ ಮೇ 13 ಮತ್ತು ಮೇ 20ರಂದು ಸದ್ಧರ್ಮ ನ್ಯಾಯಪೀಠದ ಕಲಾಪಗಳು ನಡೆಯುವುದಿಲ್ಲ ಎಂದು ಮಠದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT