ಚಿತ್ರದುರ್ಗ: ‘ಬಯಲಾಟ ಜಾನಪದ ಕಲೆಯ ಅವಿಭಾಜ್ಯ ಅಂಗವಾಗಿದೆ. ಅಳಿವಿನಂಚಿನಲ್ಲಿರುವ ಕಲೆಗಳನ್ನು ಇಂದಿನ ಯುವಪೀಳಿಗೆ ಉಳಿಸಿ, ಬೆಳೆಸಬೇಕು. ಜಾನಪದ ಕಲೆಗಳನ್ನು ಶೂದ್ರ ಸಮುದಾಯದವರೇ ಕಟ್ಟಿ ಬೆಳೆಸಿರುವುದನ್ನು ಮರೆಯುವಂತಿಲ್ಲ’ ಎಂದು ಮೈಸೂರು ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಹೇಳಿದರು.

ಕರ್ನಾಟಕ ಬಯಲಾಟ ಅಕಾಡೆಮಿ ವತಿಯಿಂದ ಸರ್ಕಾರಿ ಕಲಾ ಕಾಲೇಜು ಸಭಾಂಗಣದಲ್ಲಿ ನಡೆದ ‘ಚಿತ್ರದುರ್ಗ ಪರಿಸರದ ಬಯಲಾಟಗಳು’ ವಿಚಾರ ಸಂಕಿರಣ, ಬಯಲಾಟ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಜಾನಪದ ಕಲೆಗಳಿಗೆ, ಕಲಾವಿದರಿಗೆ ಆರ್ಥಿಕವಾಗಿ ಶಕ್ತಿ ತುಂಬಬೇಕಾದ ಅನಿವಾರ್ಯತೆ ಇದೆ. ಆರ್ಥಿಕ ಲಾಭಕ್ಕಾಗಿ ಕಲೆಗಳನ್ನು ಮೇಲ್ವರ್ಗದವರು ಹೈಜಾಕ್ ಮಾಡುತ್ತಿರುವುದರ ವಿರುದ್ದ ಕಲಾವಿದರು ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದರೆ ಸಾಂಸ್ಕೃತಿಕ ನುಸುಳುಕೋರರಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ’ ಎಂದರು.

‘ರಂಗಕಲೆಗಳು ಯೂರೋಪಿಯನ್ ಮಾದರಿಗಳಿಂದ ದ್ರವಿಡಿಯನ್ ಶಾಲೆಗಳನ್ನಾಗಿ ಮಾರ್ಪಡಿಸಬೇಕಿದೆ . ಒಂದು ವರ್ಷದ ರಂಗಕಲೆ ಡಿಪ್ಲೊಮಾವನ್ನು 2 ವರ್ಷಗಳಿಗೆ ವಿಸ್ತರಿಸಿ ದಕ್ಷಿಣ ಭಾರತಕ್ಕೆ ವ್ಯಾಪಿಸಬೇಕು. ರಾಜ್ಯದ ವಿವಿಧೆಡೆ ಬಯಲಾಟ ಕಾರ್ಯಾಗಾರವಾಗಬೇಕು. ಶಾಲಾ, ಕಾಲೇಜು ಯುವಪೀಳಿಗೆ ಬಯಲಾಟ ಕಲೆಯನ್ನು ತಮ್ಮ ಕಲಿಕೆಯಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.

ರಂಗ ಸಮಾಜ ಸದಸ್ಯ ರಾಜಪ್ಪ ದಳವಾಯಿ ಮಾತನಾಡಿ ‘ಬಯಲಾಟದಲ್ಲಿ ಮಾನವೀಯ ಮೌಲ್ಯಗಳಿವೆ. ಆದರೆ ಇಂದು ಬಯಲಾಟ ಅಳಿವಿನ ಅಂಚಿನಲ್ಲಿದ್ದು ಅದನ್ನು ಮುನ್ನೆಲೆಗೆ ತರಬೇಕಾಗಿದೆ. ಬಯಲಾಟ ದೊಡ್ಡ ಕಲಾ ಮಾಧ್ಯಮ. ಸ್ಥಳಿಯ ರಂಗಕಲೆ ಹಾಗೂ ಹಳ್ಳಿಗಳಲ್ಲಿ ವಿಭಿನ್ನ ಬದಲಾವಣೆಯಾಗಿರುವುದರಿಂದ ಬಯಲಾಟವನ್ನು ಉಳಿಸಬೇಕಿದೆ’ ಎಂದರು.

ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಕೆ.ಆರ್.ದುರ್ಗಾದಾಸ್ ಮಾತನಾಡಿ ‘ಅನಕ್ಷರಸ್ಥರು, ರೈತರು, ಕೂಲಿಕಾರರು ರಂಗಭೂಮಿ, ಜಾನಪದ ಕಲೆಗಳನ್ನು ಕಟ್ಟಿ ಉಳಿಸಿದ್ದಾರೆ. ಪುರಾಣಗಳಲ್ಲಿ ವಾದ್ಯಗಳನ್ನು ನುಡಿಸುವುದು ಗೊತ್ತು. ಕಲಾವಿದರ ಪ್ರದರ್ಶನಕ್ಕೆ ಆರ್ಥಿಕ ಸಂಪನ್ಮೂಲ ಗಟ್ಟಿಯಾಗಬೇಕು. ಶ್ರಮಿಕ ವರ್ಗದಿಂದ ಮಾತ್ರ ಇನ್ನು ಬಯಲಾಟ ಕಲೆ ಉಳಿದಿದೆ’ ಎಂದರು.

ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಎಂ.ಮೈತ್ರಿ ಮಾತನಾಡಿ ‘ಬಹಳಷ್ಟು ಹಳ್ಳಿಗಳಲ್ಲಿ ಬಯಲಾಟ ಕಲಾವಿದರಿದ್ದಾರೆ. ವೇಷಭೂಷಣ ಆಕರ್ಷಣೀಯವಾಗಿರುವುದರಿಂದ ಸಮುದಾಯದ ಮೇಲೆ ಪ್ರಭಾವ ಬೀರಲಿದೆ. ಹಬ್ಬಗಳು ಕಲೆಗಳ ಹಿಂದೆ ಜ್ಞಾನ ವಿಜ್ಞಾನವಿದೆ. ಕಲೆಗಳ ಉಳಿವಿಗೆ ಸರ್ಕಾರ ಗಮನ ಕೊಡಬೇಕು’ ಎಂದರು.

ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ ಕರಿಯಪ್ಪ ಮಾಳಿಗೆ, ಎನ್ಸಿಸಿ ಅಧಿಕಾರಿ ಮಂಜುನಾಥ, ವಿ.ಪ್ರಸಾದ, ಬಿ.ಕೆ.ಬಸವರಾಜು, ಮೇಘನಾ, ಜಮುನಾರಾಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.