ಹಿರಿಯೂರು: ‘ಈ ಹೋಟೆಲ್ನ ಅಡುಗೆ ಮನೆಯಲ್ಲಿ ಮನುಷ್ಯರು ಕಾಲಿಡುವಂತಿಲ್ಲ. ಇಲಿ, ಹೆಗ್ಗಣಗಳು ವಾಸಿಸಲಷ್ಟೇ ಯೋಗ್ಯವಾಗಿದೆ. ಇಲ್ಲಿ ತಯಾರಿಸಿದ ಪದಾರ್ಥಗಳನ್ನು ನೀವು ಎಂದಾದರೂ ತಿಂದಿದ್ದೀರಾ? ಕಡಿಮೆ ದರ ಎಂಬ ಕಾರಣಕ್ಕೆ ಹಸಿದು ಬರುವವರಿಗೆ ಇಂತಹ ಗಲೀಜು ಸ್ಥಳದಲ್ಲಿ ತಯಾರಿಸಿದ ಆಹಾರ ಪದಾರ್ಥಗಳನ್ನು ಕೊಡಲು ಹೇಗಾದರೂ ಮನಸ್ಸು ಬರುತ್ತದೆ?’

ನಗರದ ಪ್ರಧಾನ ರಸ್ತೆ ಹಾಗೂ ಹುಳಿಯಾರು ರಸ್ತೆ ಬದಿಗಳಲ್ಲಿ ರಾತ್ರಿ ವೇಳೆ ತೆರೆಯುವ ಹೋಟೆಲ್ಗಳ ಮೇಲೆ ಸೋಮವಾರ ರಾತ್ರಿ ದಾಳಿ ನಡೆಸಿದ ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕರಾದ ಸುನಿಲ್ ಕುಮಾರ್, ಸಂಧ್ಯಾ, ನಿರೀಕ್ಷಕರಾದ ಅಶೋಕ್, ಮಹಲಿಂಗರಾಜು, ರಫೀಕ್ ನೇತೃತ್ವದ ತಂಡ, ಹೋಟೆಲ್ ಸಿಬ್ಬಂದಿಯನ್ನು ಪ್ರಶ್ನಿಸಿತು.

‘ಬೀದಿ ಬದಿ ವಡೆ ಕರಿಯುತ್ತೀರಿ. ಎಣ್ಣೆಗೆ ದೂಳು ಸೇರಿ ವಡೆ ಯಾವ ಬಣ್ಣಕ್ಕೆ ತಿರುಗಿದೆ ಎಂದು ಯೋಚಿಸಿದ್ದೀರಾ? ಬಯಲಿನಲ್ಲಿ ಹೆಂಚು ಇಟ್ಟು ದೋಸೆ, ಆಮ್ಲೆಟ್ ಹಾಕುತ್ತಿದ್ದೀರಿ. ಅವುಗಳಿಗೆ ಎಷ್ಟು ಪ್ರಮಾಣದ ದೂಳು ಸೇರಿದೆ ಎಂಬುದು ಗೊತ್ತೇ? ಹಣ ಮಾಡುವುದು ಮುಖ್ಯವಲ್ಲ, ಸಾರ್ವಜನಿಕರ ಆರೋಗ್ಯದ ಬಗೆಗೂ ಯೋಚಿಸಬೇಕು’ ಎಂದು ವರ್ತಕರನ್ನು ಸುನಿಲ್ ಹಾಗೂ ಸಂಧ್ಯಾ ತರಾಟೆಗೆ ತೆಗೆದುಕೊಂಡರು.

‘ಪ್ಲಾಸ್ಟಿಕ್ ಬಳಸದಂತೆ ಎಚ್ಚರಿಕೆ ನೀಡಿದ್ದರೂ ನಿಷೇಧಿತ ಚೀಲಗಳ ಬಳಕೆ ನಿಂತಿಲ್ಲ. ಅಂಗಡಿ ಬಂದ್ ಮಾಡಿಸಿದರೆ ಬಡವರ ಹೊಟ್ಟೆಯ ಮೇಲೆ ಹೊಡೆಯಬೇಡಿ ಎಂದು ನಗರಸಭೆಗೆ ಬರುತ್ತೀರಿ. ಶುಚಿ ಮತ್ತು ರುಚಿಗೆ ಆದ್ಯತೆ ಕೊಡಿ’ ಎಂದು ಅಧಿಕಾರಿಗಳು ತಾಕೀತು ಮಾಡಿದರು.

ಬಯಲಿನಲ್ಲಿ ತಯಾರಿಸಿದ ಆಹಾರ ಪದಾರ್ಥ ಮಾರಾಟ ಮಾಡಬಾರದು. ತ್ಯಾಜ್ಯವನ್ನು ರಸ್ತೆಗೆ ಸುರಿಯಬಾರದು. ನಿಯಮಗಳನ್ನು ಪಾಲಿಸದಿದ್ದರೆ ವಹಿವಾಟು ಸ್ಥಗಿತಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.