ಚಿತ್ರದುರ್ಗ: ‘ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವೇಳೆ ಧರ್ಮದ ಕಾಲಂನಲ್ಲಿ ಬೌದ್ಧ, ಜಾತಿ ಕಾಲಂನಲ್ಲಿ ಛಲವಾದಿ ಎಂದು ಬರೆಸಬೇಕು. ಇದು ನಿಖರ ಮಾಹಿತಿಯಾಗಿದ್ದು, ಸಮುದಾಯದವರು ಗೊಂದಲಕ್ಕೆ ಒಳಗಾಗುವ ಅವಶ್ಯಕತೆಯಿಲ್ಲ’ ಎಂದು ಛಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮೀಜಿ ತಿಳಿಸಿದರು.

‘ನಾಗಮೋಹನ್ ದಾಸ್ ಆಯೋಗದ ವರದಿಯಂತೆ ಒಳ ಮೀಸಲಾತಿಯಲ್ಲೂ ಸಮುದಾಯಕ್ಕೆ ಅನ್ಯಾಯವಾಗಿದೆ. ಪ್ರಸ್ತುತ ನಡೆಯುತ್ತಿರುವ ಸಮೀಕ್ಷೆಯಲ್ಲಾದರೂ ನ್ಯಾಯ ದೊರಕಬೇಕು’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

‘ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎನ್ನುವ ಪದ ಜಾತಿಗಳಿಲಿಲ್ಲ. 8 ನೇ ಕಾಲಂನಲ್ಲಿ ಭೌದ್ದ ಧರ್ಮ ಎಂದದು ಬರೆಸುವಂತೆ ಬಲಗೈ ಜಾತಿಗಳ ಒಕ್ಕೂಟ ಬೆಂಗಳೂರಿನಲ್ಲಿ ನಡೆಸಿದ ಸಭೆಯಲ್ಲಿ ತೀರ್ಮಾನಿಸಿದೆ. ಅದರಂತೆ ಛಲವಾದಿಗಳು ಸಮೀಕ್ಷೆಯಲ್ಲಿ ನಿಖರವಾದ ಮಾಹಿತಿ ನೀಡಬೇಕು’ ಎಂದರು.

‘ಹಿಂದಿನ ಸಮೀಕ್ಷೆಯಲ್ಲಿ ತಪ್ಪಾಗಿರುವುದರಿಂದ ಛಲವಾದಿಗಳಲ್ಲಿ ಕೆಲವರನ್ನು ಬೇರೆ ಜಾತಿಗಳಿಗೆ ಸೇರಿಸಲಾಗಿದೆ. ನಾವುಗಳು ಮತ್ತೊಬ್ಬರ ಊಟ ಕಸಿಯುವವರಲ್ಲ. ತುಳಿತಕ್ಕೊಳಪಟ್ಟು ಈಗಲೂ ಅಸ್ಪೃಶ್ಯರಾಗಿಯೇ ಉಳಿದಿದ್ದೇವೆ. ಎಲ್ಲಾ ಜನಾಂಗದಲ್ಲಿಯೂ ಬಡವರಿದ್ದಾರೆ. ಜಾತಿಗಳನ್ನು ಒಡೆಯುವುದು ಕಾಂಗ್ರೆಸ್ ಉದ್ದೇಶವಲ್ಲ. ಸಂವಿಧಾನಶಿಲ್ಪಿ ಅಂಬೇಡ್ಕರ್ ಕನಸು ನನಸಾಗಬೇಕೆಂಬ ಆಶಯ ನಮ್ಮದಾಗಿದೆ’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ತಿಳಿಸಿದರು.

‘ಸಮೀಕ್ಷೆಗೆ ತೆಲಂಗಾಣ 90 ದಿನ ತೆಗೆದುಕೊಂಡಿದೆ. ಅದೇ ನಮ್ಮ ರಾಜ್ಯ ಸರ್ಕಾರ 15 ದಿನಗಳನ್ನು ನಿಗಧಿಪಡಿಸಿರುವುದರಿಂದ ಸಮೀಕ್ಷೆ ಯಶಸ್ವಿಯಾಗುವುದಿಲ್ಲ. ಹಾಗಾಗಿ ಇನ್ನು ಕೆಲವು ದಿನಗಳ ವಿಸ್ತರಣೆ ಮಾಡಬೇಕು’ ಎಂದು ದಾವಣಗೆರೆ ಜಿಲ್ಲಾ ಛಲವಾದಿ ಮಹಾಸಭಾ ಅಧ್ಯಕ್ಷ ರುದ್ರಮುನಿ ಮನವಿ ಮಾಡಿದರು.

ಮುಖಂಡರಾದ ಎಚ್.ಅಣ್ಣಪ್ಪಸ್ವಾಮಿ, ವೈ.ತಿಪ್ಪೇಸ್ವಾಮಿ, ಹಾಲೇಶಪ್ಪ, ನರಸಿಂಹಮೂರ್ತಿ, ತಿಪ್ಪೇಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.