ಚಳ್ಳಕೆರೆ: ಮದ್ಯ ಅಕ್ರಮ ಮಾರಾಟ ನಿಷೇಧಕ್ಕೆ ಆಗ್ರಹಿಸಿ ತಾಲ್ಲೂಕಿನ ಪರಶುರಾಂಪುರ ಸಮೀಪದ ಟಿ.ಎನ್.ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಮರಿಕಪಿಲೆ ಹಾಗೂ ಹೊನ್ನಯ್ಯನ ರೊಪ್ಪ ಗ್ರಾಮದ ಮಹಿಳೆಯರು ತಾಲ್ಲೂಕು ಕಚೇರಿಗೆ ಮನವಿ ಸಲ್ಲಿಸಿದರು.

ಗೂಡಂಗಡಿಗಳಲ್ಲಿ ನಿರಂತರವಾಗಿ ಮದ್ಯ ಮಾರಾಟವಾಗುತ್ತಿದ್ದು, ಗ್ರಾಮದ ಯುವಕರು ವ್ಯಸನಿಗಳಾಗುತ್ತಿದ್ದಾರೆ. ಹಲವು ಕುಟುಂಬಗಳು ಬೀದಿಪಾಲಾಗಿವೆ. ಕುಡಿದ ಅಮಲಿನಲ್ಲಿ ಮಹಿಳೆ, ಮಕ್ಕಳಿಗೆ ಮನಬಂದಂತೆ ನಿಂದಿಸುತ್ತಾರೆ ಎಂದು ಭದ್ರಮ್ಮ ಎಂಬವರು ಆರೋಪಿಸಿದರು.

ಮದ್ಯ ಅಕ್ರಮ ಮಾರಾಟ ಮಾಡುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದರ ಜತೆಗೆ ಅಂಗಡಿಯನ್ನು ಬಂದ್ ಮಾಡಬೇಕು ಎಂದು ಗ್ರಾಮದ ಮಹಿಳೆ ಅನಸೂಯಮ್ಮ ಒತ್ತಾಯಿಸಿದರು.

ಅಕ್ರಮ ಅಂಗಡಿ ಮಾಲೀಕರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ತಹಶೀಲ್ದಾರ್ ರೆಹಾನ್ ಪಾಷ ಎಚ್ಚರಿಕೆ ನೀಡಿದರು. ಅಕ್ರಮ ಮದ್ಯದಂಗಡಿಗಳನ್ನು ಬಂದ್ ಮಾಡುವಂತೆ ಪಿಡಿಒಗೆ ಸೂಚಿಸಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ಶಶಿಧರ್ ಭರವಸೆ ನೀಡಿದರು.

ಸಿರಾದ ಕಪಿಲೆ ಗ್ರಾಮದ ಭಾರ್ಗವಿ, ತಿಮ್ಮರಾಯ, ಸುನೀತ, ಪುಷ್ಪಾ, ಯಶೋಧ, ವಿನೋದ, ಗೋವಿಂದರಾಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.