ಶನಿವಾರ, ನವೆಂಬರ್ 26, 2022
23 °C

ಚಿಕ್ಕಜಾಜೂರು: ಹದ ಮಳೆಗೆ ತುಂಬಿದ ಚೆಕ್‌ಡ್ಯಾಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಜಾಜೂರು: ಹೋಬಳಿಯಾದ್ಯಂತ ಶುಕ್ರವಾರ ಸಂಜೆಯಿಂದ ಶನಿವಾರದವರೆಗೂ ಹದ ಮಳೆಯಾಗಿದೆ.  ಮಳೆಯಿಂದ ಹೊಲ, ತೋಟಗಳಲ್ಲಿ ನೀರು ನಿಂತಿತ್ತು. ಹಳ್ಳಗಳು ತುಂಬಿ ಹರಿದವು. ಚೆಕ್‌ಡ್ಯಾಂಗಳ ಮೇಲೆ  ಅರ್ಧ ಅಡಿಗೂ ಹೆಚ್ಚು ನೀರು ಹರಿಯುತ್ತಿತ್ತು. ಚಿಕ್ಕಎಮ್ಮಿಗನೂರು ಕೆರೆ ಈ ವರ್ಷದಲ್ಲಿ ಎರಡನೇ ಬಾರಿಗೆ ತುಂಬಿ ಹರಿದಿದೆ.

ಕೆರೆಯಲ್ಲಿ ಜನರು ಮೀನುಗಳನ್ನು ಹಿಡಿಯುತ್ತಿದ್ದುದು ‌‌ಕಂಡುಬಂತು. 

ಗಂಜಿಗಟ್ಟೆ ಲಂಬಾಣಿಹಟ್ಟಿ ಬಳಿಯ ಬೆಟ್ಟದಿಂದ ಹರಿದ ಮಳೆ ನೀರು ದೇವರ ಗಂಜಿಗಟ್ಟೆ ಗ್ರಾಮದ ಮುಖ್ಯ ರಸ್ತೆಯಲ್ಲಿ  ಹರಿಯಿತು. ಗ್ರಾಮದ ಗಾದ್ರಿ ಪಾಲನಾಯಕ ದೇವಸ್ಥಾನದ ಆವರಣದಲ್ಲಿ ನೀರು ನುಗ್ಗಿ, ದೇವಸ್ಥಾನದ ಕಾಂಪೌಂಡಿನ ಒಂದು ಭಾಗ ಕುಸಿದು ಬಿದ್ದಿದೆ. ಮಳೆಯಿಂದ ವಿದ್ಯುತ್ ಇಲ್ಲದೆ ಗ್ರಾಮಸ್ಥರು ಪರದಾಡುವಂತಾಗಿದೆ.

ಸಾಸಲು ಗ್ರಾಮದ ಭೂತಪ್ಪಸ್ವಾಮಿ ದೇವಸ್ಥಾನಕ್ಕೆ ನೀರು ನುಗ್ಗಿದೆ. ಇಲ್ಲಿನ ರೈಲ್ವೆ ನಿಲ್ದಾಣದ ಸುತ್ತಲಿನ ಮನೆಗಳಿಗೆ
ನೀರು ನುಗ್ಗಿದೆ. ಚಿಕ್ಕಜಾಜೂರಿನಲ್ಲಿ 19.5 ಮಿ.ಮೀ., ಬಿ. ದುರ್ಗದಲ್ಲಿ 33 ಮಿ.ಮೀ. ಮಳೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು