ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಸಂಭ್ರಮದಿಂದ ಶುರುವಾದ ವರ್ಷಕ್ಕೆ ನೋವಿನ ವಿದಾಯ

Published 31 ಡಿಸೆಂಬರ್ 2023, 7:28 IST
Last Updated 31 ಡಿಸೆಂಬರ್ 2023, 7:28 IST
ಅಕ್ಷರ ಗಾತ್ರ

ಚಿತ್ರದುರ್ಗ: ಸಮೃದ್ಧ ಮಳೆ–ಬೆಳೆಯೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಿದ್ದ ಜಿಲ್ಲೆ, ಬರದ ನೋವಿನೊಂದಿಗೆ 2023ಕ್ಕೆ ವಿದಾಯ ಹೇಳುತ್ತಿದೆ. 2022ರಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಮಳೆಯಾಗಿತ್ತು. ವಾಣಿ ವಿಲಾಸ ಸಾಗರ ಸೇರಿದಂತೆ ಕೆರೆ, ಕಟ್ಟೆಗಳು ಮೈದುಂಬಿದ್ದವು. ಈ ಬಾರಿ ಮಳೆ ಕೊರತೆಯು ಅನ್ನದಾತನನ್ನು ಇನ್ನಿಲ್ಲದಂತೆ ಕಾಡಿತು. 

ಈ ವರ್ಷ ಹಲವು ಕನಸುಗಳು ಸಾಕಾರಗೊಂಡವು. ಚಿತ್ರದುರ್ಗ ಸರ್ಕಾರಿ ವೈದ್ಯಕೀಯ ಸಂಶೋಧನಾ ಕೇಂದ್ರ ಶುರುವಾಗಿದ್ದು, ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯು ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿ ದಾಖಲೆ ಬರೆದಿದ್ದು ಅವಿಸ್ಮರಣೀಯ. 

ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸದಿರುವುದು ಬೇಸರ ಮೂಡಿಸಿತು. ಆ.1ರಂದು ನಡೆದ ಕವಾಡಿಗರಹಟ್ಟಿಯ ಕಲುಷಿತ ನೀರು ಸೇವನೆ ದುರ್ಘಟನೆ ಹಾಗೂ ವರ್ಷಾಂತ್ಯದಲ್ಲಿ (ಡಿ.28) ನಗರದ ಕಾರಾಗೃಹ ರಸ್ತೆಯ ಪಾಳುಮನೆಯಲ್ಲಿ ಐವರ ಅಸ್ಥಿಪಂಜರ ಪತ್ತೆ ಘಟನೆಗಳು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದವು.  

ಪ್ರತೀ ಐದು ವರ್ಷಕ್ಕೊಮ್ಮೆ ನಡೆಯುವ ಮಿಂಚೇರಿ ಯಾತ್ರೆ (ಡಿ.23–28) ಈ ಬಾರಿ ವೈಭವ ಸೃಷ್ಟಿಸಿತ್ತು. ವಿಧಾನಸಭೆ ಚುನಾವಣೆ ಕಾವು ಘಟಾನುಘಟಿ ನಾಯಕರ ಬೆವರಿಳಿಸಿತು.‌ ರಾಜಕೀಯ ಸ್ಥಿತ್ಯಂತರ, ನಾನಾ ಸಮಾವೇಶ, ರ‍್ಯಾಲಿಗಳಿಗೆ ಜಿಲ್ಲೆಯ ಜನತೆ ಸಾಕ್ಷಿಯಾದರು.

ವಿಧಾನಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಿ ಮೋದಿ ಮಾತಲ್ಲಿ ಕನ್ನಡ ಮೊಳಗಿತು. ಕಾಂಗ್ರೆಸ್ ಆಯೋಜಿಸಿದ್ದ ರಾಜ್ಯಮಟ್ಟದ ಎಸ್ಸಿ, ಎಸ್ಟಿ ಏಕತಾ ಸಮಾವೇಶದಲ್ಲಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಗಿಯಾಗಿದ್ದು, ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಆಮ್‌ ಆದ್ಮಿ ಪಾರ್ಟಿಯ (ಎಎಪಿ) ಚುನಾವಣಾ ಪ್ರಚಾರ ಸಭೆಯಲ್ಲಿ ಪಂಜಾಬ್‌ನ ಮುಖ್ಯಮಂತ್ರಿ ಭಗವಂತ ಸಿಂಗ್‌ ಮಾನ್‌ ಪಾಲ್ಗೊಂಡಿದ್ದು, ಸಮಾಜವಾದಿ ಪಕ್ಷದ ಪರ ಪ್ರಚಾರ ಸಭೆಯಲ್ಲಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಅ.6ರಂದು ಕವಾಡಿಗರಹಟ್ಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಮೃತರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ನೆರವಿನ ಭರವಸೆ ನೀಡಿದರು.

ಅ.10 ರಂದು ಕೇಂದ್ರ ಜಲಶಕ್ತಿ ಆಯೋಗದ ನಿರ್ದೇಶಕ ವಿ.ಅಶೋಕ್ ಕುಮಾರ್ ನೇತೃತ್ವದ ಬರ ಅಧ್ಯಯನ ತಂಡ ರೈತರ ಸಂಕಟ ಆಲಿಸಿತ್ತು.

ಪ್ರತಿ ವರ್ಷದಂತೆ ಈ ಬಾರಿಯೂ ಮುರುಘಾ ಮಠದಲ್ಲಿ ಶರಣ ಸಂಸ್ಕೃತಿ ಉತ್ಸವ ನಡೆಯಿತು. ಪೊಲೀಸ್‌ ಭದ್ರತೆಯಲ್ಲಿ ಶೂನ್ಯ ಪೀಠಾರೋಹಣ ನೆರವೇರಿತು. ಇನ್ನುಳಿದ ಮಠಗಳಲ್ಲಿ ಸಹ ಸಂಪ್ರದಾಯದಂತೆ ಉತ್ಸವಗಳು ಸಾಗಿದವು. ‌ವಿಎಚ್‌ಪಿ, ಬಜರಂಗದಳದಿಂದ ಶೌರ್ಯ ಯಾತ್ರೆ, ಮದಕರಿ ನಾಯಕ ಉತ್ಸವಗಳು ವೈಭವಕ್ಕೆ ಸಾಕ್ಷಿಯಾದವು. ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರಿಂದ ಭರಮಸಾಗರ ಏತ ನೀರಾವರಿ ಯೋಜನೆಯ ವಿವಿಧ ಕೆರೆಗಳ ವೀಕ್ಷಣೆ, ಬರಗಾಲದ ಕಾರಣಕ್ಕೆ ಸಿರಿಗೆರೆಯಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ಸರಳ ಆಚರಣೆಗೆ ನಿರ್ಧರಿಸಲಾಯಿತು.

ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ 44 ವಚನಗಳನ್ನಾಧರಿಸಿದ ‘ನೀನಲ್ಲದೆ ಮತ್ತಾರೂ ಇಲ್ಲವಯ್ಯಾ’ ವಚನ ನೃತ್ಯರೂಪಕ ದೇಶದ ವಿವಿಧೆಡೆ ಯಶಸ್ವಿ ಪ್ರದರ್ಶನ ಕಂಡಿತು. ಪ್ರಧಾನಿ ಮೋದಿ, ವಚನ ಸಂಸ್ಕೃತಿ ಅಭಿಯಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಸ್ವಾಮೀಜಿಗೆ ಪತ್ರ ಬರೆದಿದ್ದರು.  

ಗೆದ್ದು ಬೀಗಿದ ಕಾಂಗ್ರೆಸ್; ದಂಪತಿಯಿಂದ ಪಕ್ಷ ಬದಲಾವಣೆ

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪುನಃ ಚಿತ್ರದುರ್ಗ ಜಿಲ್ಲೆಯನ್ನು ವಶಕ್ಕೆ ಪಡೆಯಿತು. 2018ರಲ್ಲಿ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಪಕ್ಷ 2023ರಲ್ಲಿ ಐದು ಕ್ಷೇತ್ರಗಳಲ್ಲಿ ಗೆದ್ದು ಬೀಗಿತು. ಒಂದು ಸ್ಥಾನಕ್ಕೆ ಬಿಜೆಪಿ ತೃಪ್ತಿ ಪಟ್ಟುಕೊಳ್ಳುವಂತಾಯಿತು. ಬಿಜೆಪಿಯಿಂದ ಸ್ಪರ್ಧಿಸಿ ಚುನಾವಣೆಯಲ್ಲಿ ಸೋತಿದ್ದ ಹಿರಿಯೂರಿನ ಮಾಜಿ ಶಾಸಕಿ ಕೆ.ಪೂರ್ಣಿಮಾ ಪತಿ ಡಿ.ಟಿ.ಶ್ರೀನಿವಾಸ್‌ ಕಾಂಗ್ರೆಸ್‌ ಸೇರ್ಪಡೆಗೊಂಡರು. ಆರು ಚುನಾವಣೆಗಳ ಪೈಕಿ ಐದು ಬಾರಿ ಗೆಲುವು ಸಾಧಿಸಿದ್ದ ಜಿ.ಎಚ್‌.ತಿಪ್ಪಾರೆಡ್ಡಿ ಕಾಂಗ್ರೆಸ್‌ ಅಭ್ಯರ್ಥಿ ಕೆ.ಸಿ.ವೀರೇಂದ್ರ ವಿರುದ್ಧ ಹೀನಾಯ ಸೋಲು ಅನುಭವಿಸಿದರು. 

ಮುರುಘಾ ಶರಣರ ಬಿಡುಗಡೆ ಪೋಕ್ಸೊ

ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಶರಣರು ನ.16 ರಂದು ಷರತ್ತುಬದ್ಧ ಜಾಮೀನಿನ ಮೇಲೆ ಜಿಲ್ಲಾ ಕಾರಾಗೃಹದಿಂದ ಬಿಡುಗಡೆಯಾದರು. ಬಳಿಕ ಎರಡನೇ ಪ್ರಕರಣದಲ್ಲಿ ನ.20 ರಂದು ಮತ್ತೆ ಬಂಧಿತರಾಗಿದ್ದ ಅವರು ಹೈಕೋರ್ಟ್‌ ಆದೇಶದ ಮೇರೆಗೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಮೂರು ಗಂಟೆಯಲ್ಲಿ ಕಾರಾಗೃಹದಿಂದ ಹೊರಬಂದರು. ನ್ಯಾಯಾಂಗ ಬಂಧನದಲ್ಲಿದ್ದ ಪ್ರಕರಣದ ಮೂರನೇ ಆರೋಪಿ ಎ.ಜೆ.ಪರಮಶಿವಯ್ಯ ಅ.17 ಹಾಗೂ ಎರಡನೇ ಆರೋಪಿ ಎಸ್‌.ರಶ್ಮಿ ಡಿ.27ರಂದು ಕಾರಾಗೃಹದಿಂದ ಬಿಡುಗಡೆಯಾದರು. ಮುರುಘಾ ಮಠದ ತಾತ್ಕಾಲಿಕ ಆಡಳಿತಾಧಿಕಾರಿಯಾಗಿದ್ದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶೆ ಕೆ.ಬಿ.ಗೀತಾ ಅವರು ಪೀಠಾಧಿಪತಿ ಶಿವಮೂರ್ತಿ ಶರಣರಿಗೆ ಅಧಿಕಾರ ಹಸ್ತಾಂತರಿಸಿದರು.

ವನ್ಯಜೀವಿ ಬೇಟೆಗಾರರ ಸೆರೆ

ಹಿರಿಯೂರು ತಾಲ್ಲೂಕಿನ ಹುಳಿಯಾರು ಮಾರ್ಗದ ಸೋಮೆನಹಳ್ಳಿಯ ಫಾರ್ಮ್‌ಹೌಸ್‌ ಸಮೀಪ ವನ್ಯಜೀವಿ ಬೇಟೆಗೆ ಹೊಂಚು ಹಾಕಿದ್ದ ತಂಡದ ಮೇಲೆ ದಾಳಿ ನಡೆಸಿದ ಅರಣ್ಯ ಅಧಿಕಾರಿಗಳು ಐವರು ಆರೋಪಿಗಳನ್ನು ಬಂಧಿಸಿ ₹20 ಲಕ್ಷಕ್ಕೂ ಹೆಚ್ಚು ಮೌಲ್ಯದ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದರು. ಹೊಸದುರ್ಗ ತಾಲ್ಲೂಕಿನ ತೊಣಚೇನಹಳ್ಳಿ ಸಮೀಪದ ಅರಣ್ಯ ಪ್ರದೇಶದಲ್ಲಿ ಕಾಡುಪ್ರಾಣಿ ಬೇಟೆಯಾಡುತ್ತಿದ್ದ 5 ಮಂದಿಯನ್ನು ಬಂಧಿಸಲಾಗಿತ್ತು. 

ಸದ್ದು ಮಾಡಿದ ಗಡಿ ತಾಲ್ಲೂಕು ಮೊಳಕಾಲ್ಮುರು

ತಾಲ್ಲೂಕಿನಲ್ಲಿ ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಪಟ್ಟಣದ ಮುಖ್ಯರಸ್ತೆ ಅಗಲೀಕರಣಕ್ಕೆ ಚಾಲನೆ ದೊರೆಯುವ ಮೂಲಕ ವರ್ಷದ ಕಾರ್ಯಗಳು ಪ್ರಾರಂಭವಾದವು.  ಮಾಜಿ ಶಾಸಕ ನೇರ್ಲಗುಂಟೆ ತಿಪ್ಪೇಸ್ವಾಮಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ಬೆನ್ನಲ್ಲೇ  ಎನ್.ವೈ. ಗೋಪಾಲಕೃಷ್ಣ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಮೊಳಕಾಲ್ಮುರಿನಿಂದ ಸ್ಪರ್ಧಿಸಿ ಗೆದ್ದರು.  ಶಾಸಕರಾಗಿ 7ನೇ ಬಾರಿ ಎನ್.ವೈ. ಗೋಪಾಲಕೃಷ್ಣ ಆಯ್ಕೆ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯಲ್ಲಿ 2ನೇ ಸ್ಥಾನ ನಾಗಸಮುದ್ರದಲ್ಲಿ ಕಲುಷಿತ ನೀರು ಸೇವನೆ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಮೊಳಕಾಲ್ಮುರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸದಸ್ಯರು ಸೇರಿ ಹಲವರ ಮೇಲೆ ಪ್ರಕರಣ ದಾಖಲು ಬಂಧನ ನಿವೃತ್ತ ನ್ಯಾಯಧೀಶ ಎನ್.ವೈ. ಹನುಮಂತಪ್ಪ ಅವರಿಗೆ ವಾಲ್ಮೀಕಿ ಪ್ರಶಸ್ತಿ ಘೋಷಣೆ – ಈ ವರ್ಷದ ಪ್ರಮುಖ ವಿದ್ಯಮಾನಗಳು.

ವರ್ಷದ ವಿದ್ಯಮಾನಗಳು

ಜ.2: ನಾಯಕನಹಟ್ಟಿಯಲ್ಲಿ ಸಂಚಲನ ಸೃಷ್ಟಿಸಿದ್ದ ‘ಹೊರಗಿನ ಅಭ್ಯರ್ಥಿಗಳಿಗೆ ವಲಸಿಗ ಅಭ್ಯರ್ಥಿಗಳಿಗೆ ಕ್ಷೇತ್ರಕ್ಕೆ ಪ್ರವೇಶವಿಲ್ಲ ಸ್ಥಳೀಯ ಅಭ್ಯರ್ಥಿಗಳೇ ನಮ್ಮ ಮುಂದಿನ ಶಾಸಕರು’ ಎಂಬ ಫ್ಲೆಕ್ಸ್.

ಜ.5: ವಾಣಿ ವಿಲಾಸ ಜಲಾಶಯಕ್ಕೆ ಮೈಸೂರಿನ ರಾಜವಂಶಸ್ಥ ಯದುವೀರ ಒಡೆಯರ್ ಗಂಗಾಪೂಜೆ.

ಜ.21-22: ನಾಯಕನಹಟ್ಟಿ ಪಟ್ಟಣದಲ್ಲಿ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ.

ಫೆ.7: ಹೊಳಲ್ಕೆರೆ ತಾಲ್ಲೂಕಿನ ಹೊರಕೆರೆ ದೇವರಪುರದಲ್ಲಿ 17 ವರ್ಷಗಳ ನಂತರ ಲಕ್ಷ್ಮೀ ನರಸಿಂಹ ಸ್ವಾಮಿಯ ಭವ್ಯ ಗುಂಡಿನ ಸೇವೆ. ಫೆ.8: ಹಿರಿಯೂರನಲ್ಲಿ ಡ್ರೋನ್ ಮೂಲಕ ಜಮೀನು ಸಮೀಕ್ಷೆಗೆ ಚಾಲನೆ.

ಮಾ.10: ನಾಯಕನಹಟ್ಟಿ ಗುರುತಿಪ್ಪೇರುದ್ರಸ್ವಾಮಿ ವಾರ್ಷಿಕ ಮಹಾಜಾತ್ರೆ.

ಮಾ.31: ಡಿ.ಟಿ. ಶ್ರೀನಿವಾಸ್ ಅಮಾನತು ರದ್ದುಮಾಡಿದ ಬಿಜೆಪಿ.

ಏ.2: ಕುದಾಪುರದ ಡಿಆರ್‌ಡಿಒ ಏರೊನಾಟಿಕಲ್ ಟೆಸ್ಟ್ ರೇಂಜ್ ರನ್‌ವೇನಲ್ಲಿ ಮರುಬಳಕೆ ಮಾಡಬಹುದಾದ ಉಡಾವಣಾ ರಾಕೆಟ್‌ ಪರೀಕ್ಷಾರ್ಥ ಪ್ರಯೋಗ

ಮೇ 27: ಡಿ.ಸುಧಾಕರ್‌ಗೆ ಮತ್ತೊಮ್ಮೆ ಒಲಿದ ಸಚಿವ ಸ್ಥಾನ. ಮೇ 31: ಕುದಾಪುರದ ಭಾರತೀಯ ವಿಜ್ಞಾನ ಸಂಸ್ಥೆಗೆ ಆಟೋ ಕ್ಲೇವ್ ಎಂಬ ಪ್ರಯೋಗಾಲಯ ಉಪಕರಣ ಹಸ್ತಾಂತರ.

ಜೂ.17: ರಾಗಿ ಕೇಂದ್ರದಲ್ಲಿ ಅವ್ಯವಹಾರ ಪ್ರಕರಣದಲ್ಲಿ ಅಧಿಕಾರಿಗಳ ವಿರುದ್ಧ ಎಫ್ಐಆರ್.

ಜೂ.22: ಮೃತ ಸನ್ಯಾಸಿಯೊಬ್ಬರ ಮನೆಯಲ್ಲಿ ಬರೋಬ್ಬರಿ ₹30 ಲಕ್ಷ ನಗದು ಪತ್ತೆ. ಜೂ.28: ಕುದಾಪುರದ ಡಿಆರ್‌ಡಿಒ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ ಯುಎವಿ ತಪಸ್ 200ನೇ ಹಾರಾಟ ಯಶಸ್ವಿ.

ಆ.2: ಹಿರಿಯೂರು ತಾಲ್ಲೂಕಿನ ವದ್ದೀಗೆರೆ ಸಮೀಪ ಮಾನವ ರಹಿತ ವಿಮಾನ ಪತನ.

ಸೆ.12: ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಪರಿಣಾಮ ಶಾಲೆಗೆ ಮರಳಿದ ಚಳ್ಳಕೆರೆ ತಾಲ್ಲೂಕಿನ ಬಸಾಪುರ ಗ್ರಾಮದ ಬಾಲಕ ಯೋಗೇಶ್‌.

ಸೆ.27: ಅನ್ಯ ಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಮಾತು ಮತ್ತು ಶ್ರವಣದೋಷವುಳ್ಳ ದಂಪತಿಗೆ ಎನ್‌.ದೇವರಹಳ್ಳಿ ಗ್ರಾಮದಿಂದ ಬಹಿಷ್ಕಾರ; ನಂತರ ಜಿಲ್ಲಾಡಳಿತದ ಮಧ್ಯಪ್ರವೇಶದಿಂದ ಪ್ರಕರಣ ಸುಖಾಂತ್ಯ. 

ಅ.6: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಬಬ್ಬೂರು ಫಾರಂ ಕೃಷಿ ವಿಜ್ಞಾನ ಕೇಂದ್ರದ ಶತಮಾನೋತ್ಸವ ಸಮಾರಂಭದ ಉದ್ಘಾಟನೆ.

ಅ.17: ಹೊಸದುರ್ಗ ಸಾರ್ವಜನಿಕ ಆಸ್ಪತ್ರೆಗೆ ರಾಜ್ಯಮಟ್ಟದ ಕಾಯಕಲ್ಪ ರನ್ನರ್‌ ಅಪ್ ಪ್ರಶಸ್ತಿ

ಅ.18: ನಾಡಹಬ್ಬ ಮೈಸೂರು ದಸರಾ ವಸ್ತು ಪ್ರದರ್ಶನ‌ ಮೆರವಣಿಗೆಗೆ ನಾಯಕನಹಟ್ಟಿ ಗುರುತಿಪ್ಪೇರುದ್ರಸ್ವಾಮಿ ದೇವಾಲಯದ ಮಾದರಿ ಸ್ತಬ್ಧಚಿತ್ರ ಆಯ್ಕೆ.

ಅ.30: ಕಾಟಪ್ಪನಹಟ್ಟಿ ಕಲಾವಿದ ಪಿ.ತಿಪ್ಪೇಸ್ವಾಮಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ.

ಅ.30: ಹಿರಿಯೂರಿನಲ್ಲಿ ಸಮಾಜ ಕಲ್ಯಾಣಾಧಿಕಾರಿ ಕೃಷ್ಣಮೂರ್ತಿ ಅರಣ್ಯಾಧಿಕಾರಿ ನಾಗೇಂದ್ರನಾಯ್ಕ ಅವರ ಮನೆಗಳಲ್ಲಿ ಲೋಕಾಯುಕ್ತ ಶೋಧ.

ನ.7: ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದ ಬಿಜೆಪಿ ತಂಡದಿಂದ ಬರ ಅಧ್ಯಯನ.

ನ.26: ಬುಡ್ನಹಟ್ಟಿ ಗ್ರಾಮಕ್ಕೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್‌ ಭೇಟಿ.

ಡಿ.26: ನಿಧಿ ಶೋಧನೆಗಾಗಿ ಕಾರೇಹಳ್ಳಿ ಹರಿಹರೇಶ್ವರ ದೇವಾಲಯದ ಬಾಗಿಲಿಗೆ ಬೆಂಕಿ. 

ಹಿರಿಯೂರು ತಾಲ್ಲೂಕಿನ ವದ್ದಿಕೆರೆ ಗ್ರಾಮವೊಂದರಲ್ಲಿ ಪತನಗೊಂಡ ಚಾಲಕ ರಹಿತ ವಿಮಾನ ‘ತಪಸ್‌’
ಹಿರಿಯೂರು ತಾಲ್ಲೂಕಿನ ವದ್ದಿಕೆರೆ ಗ್ರಾಮವೊಂದರಲ್ಲಿ ಪತನಗೊಂಡ ಚಾಲಕ ರಹಿತ ವಿಮಾನ ‘ತಪಸ್‌’
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶೇಂಗಾ ಕಾಯಿಯ ಹಾರ ಹಾಕಿ ಕ್ರಿಯೇಟಿವ್‌ ವೀರೇಶ್‌ ಪೆನ್ಸಿಲ್‌ನಲ್ಲಿ ರಚಿಸಿದ ಚಿತ್ರವನ್ನು ಉಡುಗೊರೆಯಾಗಿ ನೀಡಿದ ಬಿಜೆಪಿ ಜಿಲ್ಲಾ ಘಟಕ
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶೇಂಗಾ ಕಾಯಿಯ ಹಾರ ಹಾಕಿ ಕ್ರಿಯೇಟಿವ್‌ ವೀರೇಶ್‌ ಪೆನ್ಸಿಲ್‌ನಲ್ಲಿ ರಚಿಸಿದ ಚಿತ್ರವನ್ನು ಉಡುಗೊರೆಯಾಗಿ ನೀಡಿದ ಬಿಜೆಪಿ ಜಿಲ್ಲಾ ಘಟಕ
ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿಯ ಗುರುತಿಪ್ಪೇರುದ್ರಸ್ವಾಮಿ ಮಹಾರಥೋತ್ಸವ
ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿಯ ಗುರುತಿಪ್ಪೇರುದ್ರಸ್ವಾಮಿ ಮಹಾರಥೋತ್ಸವ

Cut-off box - ಗೆದ್ದು ಬೀಗಿದ ಕಾಂಗ್ರೆಸ್; ದಂಪತಿಯಿಂದ ಪಕ್ಷ ಬದಲಾವಣೆ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪುನಃ ಚಿತ್ರದುರ್ಗ ಜಿಲ್ಲೆಯನ್ನು ವಶಕ್ಕೆ ಪಡೆಯಿತು. 2018ರಲ್ಲಿ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಪಕ್ಷ 2023ರಲ್ಲಿ ಐದು ಕ್ಷೇತ್ರಗಳಲ್ಲಿ ಗೆದ್ದು ಬೀಗಿತು. ಒಂದು ಸ್ಥಾನಕ್ಕೆ ಬಿಜೆಪಿ ತೃಪ್ತಿ ಪಟ್ಟುಕೊಳ್ಳುವಂತಾಯಿತು. ಬಿಜೆಪಿಯಿಂದ ಸ್ಪರ್ಧಿಸಿ ಚುನಾವಣೆಯಲ್ಲಿ ಸೋತಿದ್ದ ಹಿರಿಯೂರಿನ ಮಾಜಿ ಶಾಸಕಿ ಕೆ.ಪೂರ್ಣಿಮಾ ಪತಿ ಡಿ.ಟಿ.ಶ್ರೀನಿವಾಸ್‌ ಕಾಂಗ್ರೆಸ್‌ ಸೇರ್ಪಡೆಗೊಂಡರು. ಆರು ಚುನಾವಣೆಗಳ ಪೈಕಿ ಐದು ಬಾರಿ ಗೆಲುವು ಸಾಧಿಸಿದ್ದ ಜಿ.ಎಚ್‌.ತಿಪ್ಪಾರೆಡ್ಡಿ ಕಾಂಗ್ರೆಸ್‌ ಅಭ್ಯರ್ಥಿ ಕೆ.ಸಿ.ವೀರೇಂದ್ರ ವಿರುದ್ಧ ಹೀನಾಯ ಸೋಲು ಅನುಭವಿಸಿದರು. 

Cut-off box - ಮುರುಘಾ ಶರಣರ ಬಿಡುಗಡೆ ಪೋಕ್ಸೊ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಶರಣರು ನ.16 ರಂದು ಷರತ್ತುಬದ್ಧ ಜಾಮೀನಿನ ಮೇಲೆ ಜಿಲ್ಲಾ ಕಾರಾಗೃಹದಿಂದ ಬಿಡುಗಡೆಯಾದರು. ಬಳಿಕ ಎರಡನೇ ಪ್ರಕರಣದಲ್ಲಿ ನ.20 ರಂದು ಮತ್ತೆ ಬಂಧಿತರಾಗಿದ್ದ ಅವರು ಹೈಕೋರ್ಟ್‌ ಆದೇಶದ ಮೇರೆಗೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಮೂರು ಗಂಟೆಯಲ್ಲಿ ಕಾರಾಗೃಹದಿಂದ ಹೊರಬಂದರು. ನ್ಯಾಯಾಂಗ ಬಂಧನದಲ್ಲಿದ್ದ ಪ್ರಕರಣದ ಮೂರನೇ ಆರೋಪಿ ಎ.ಜೆ.ಪರಮಶಿವಯ್ಯ ಅ.17 ಹಾಗೂ ಎರಡನೇ ಆರೋಪಿ ಎಸ್‌.ರಶ್ಮಿ ಡಿ.27ರಂದು ಕಾರಾಗೃಹದಿಂದ ಬಿಡುಗಡೆಯಾದರು. ಮುರುಘಾ ಮಠದ ತಾತ್ಕಾಲಿಕ ಆಡಳಿತಾಧಿಕಾರಿಯಾಗಿದ್ದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶೆ ಕೆ.ಬಿ.ಗೀತಾ ಅವರು ಪೀಠಾಧಿಪತಿ ಶಿವಮೂರ್ತಿ ಶರಣರಿಗೆ ಅಧಿಕಾರ ಹಸ್ತಾಂತರಿಸಿದರು.

Cut-off box - ವನ್ಯಜೀವಿ ಬೇಟೆಗಾರರ ಸೆರೆ ಹಿರಿಯೂರು ತಾಲ್ಲೂಕಿನ ಹುಳಿಯಾರು ಮಾರ್ಗದ ಸೋಮೆನಹಳ್ಳಿಯ ಫಾರ್ಮ್‌ಹೌಸ್‌ ಸಮೀಪ ವನ್ಯಜೀವಿ ಬೇಟೆಗೆ ಹೊಂಚು ಹಾಕಿದ್ದ ತಂಡದ ಮೇಲೆ ದಾಳಿ ನಡೆಸಿದ ಅರಣ್ಯ ಅಧಿಕಾರಿಗಳು ಐವರು ಆರೋಪಿಗಳನ್ನು ಬಂಧಿಸಿ ₹20 ಲಕ್ಷಕ್ಕೂ ಹೆಚ್ಚು ಮೌಲ್ಯದ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದರು. ಹೊಸದುರ್ಗ ತಾಲ್ಲೂಕಿನ ತೊಣಚೇನಹಳ್ಳಿ ಸಮೀಪದ ಅರಣ್ಯ ಪ್ರದೇಶದಲ್ಲಿ ಕಾಡುಪ್ರಾಣಿ ಬೇಟೆಯಾಡುತ್ತಿದ್ದ 5 ಮಂದಿಯನ್ನು ಬಂಧಿಸಲಾಗಿತ್ತು. 

Cut-off box - ಸದ್ದು ಮಾಡಿದ ಗಡಿ ತಾಲ್ಲೂಕು ಮೊಳಕಾಲ್ಮುರು ತಾಲ್ಲೂಕಿನಲ್ಲಿ ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಪಟ್ಟಣದ ಮುಖ್ಯರಸ್ತೆ ಅಗಲೀಕರಣಕ್ಕೆ ಚಾಲನೆ ದೊರೆಯುವ ಮೂಲಕ ವರ್ಷದ ಕಾರ್ಯಗಳು ಪ್ರಾರಂಭವಾದವು.  ಮಾಜಿ ಶಾಸಕ ನೇರ್ಲಗುಂಟೆ ತಿಪ್ಪೇಸ್ವಾಮಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ಬೆನ್ನಲ್ಲೇ  ಎನ್.ವೈ. ಗೋಪಾಲಕೃಷ್ಣ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಮೊಳಕಾಲ್ಮುರಿನಿಂದ ಸ್ಪರ್ಧಿಸಿ ಗೆದ್ದರು.  ಶಾಸಕರಾಗಿ 7ನೇ ಬಾರಿ ಎನ್.ವೈ. ಗೋಪಾಲಕೃಷ್ಣ ಆಯ್ಕೆ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯಲ್ಲಿ 2ನೇ ಸ್ಥಾನ ನಾಗಸಮುದ್ರದಲ್ಲಿ ಕಲುಷಿತ ನೀರು ಸೇವನೆ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಮೊಳಕಾಲ್ಮುರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸದಸ್ಯರು ಸೇರಿ ಹಲವರ ಮೇಲೆ ಪ್ರಕರಣ ದಾಖಲು ಬಂಧನ ನಿವೃತ್ತ ನ್ಯಾಯಧೀಶ ಎನ್.ವೈ. ಹನುಮಂತಪ್ಪ ಅವರಿಗೆ ವಾಲ್ಮೀಕಿ ಪ್ರಶಸ್ತಿ ಘೋಷಣೆ – ಈ ವರ್ಷದ ಪ್ರಮುಖ ವಿದ್ಯಮಾನಗಳು.

Cut-off box - ವರ್ಷದ ವಿದ್ಯಮಾನಗಳು ಜ.2: ನಾಯಕನಹಟ್ಟಿಯಲ್ಲಿ ಸಂಚಲನ ಸೃಷ್ಟಿಸಿದ್ದ ‘ಹೊರಗಿನ ಅಭ್ಯರ್ಥಿಗಳಿಗೆ ವಲಸಿಗ ಅಭ್ಯರ್ಥಿಗಳಿಗೆ ಕ್ಷೇತ್ರಕ್ಕೆ ಪ್ರವೇಶವಿಲ್ಲ ಸ್ಥಳೀಯ ಅಭ್ಯರ್ಥಿಗಳೇ ನಮ್ಮ ಮುಂದಿನ ಶಾಸಕರು’ ಎಂಬ ಫ್ಲೆಕ್ಸ್. ಜ.5: ವಾಣಿ ವಿಲಾಸ ಜಲಾಶಯಕ್ಕೆ ಮೈಸೂರಿನ ರಾಜವಂಶಸ್ಥ ಯದುವೀರ ಒಡೆಯರ್ ಗಂಗಾಪೂಜೆ. ಜ.21-22: ನಾಯಕನಹಟ್ಟಿ ಪಟ್ಟಣದಲ್ಲಿ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ. ಫೆ.7: ಹೊಳಲ್ಕೆರೆ ತಾಲ್ಲೂಕಿನ ಹೊರಕೆರೆ ದೇವರಪುರದಲ್ಲಿ 17 ವರ್ಷಗಳ ನಂತರ ಲಕ್ಷ್ಮೀ ನರಸಿಂಹ ಸ್ವಾಮಿಯ ಭವ್ಯ ಗುಂಡಿನ ಸೇವೆ. ಫೆ.8: ಹಿರಿಯೂರನಲ್ಲಿ ಡ್ರೋನ್ ಮೂಲಕ ಜಮೀನು ಸಮೀಕ್ಷೆಗೆ ಚಾಲನೆ. ಮಾ.10: ನಾಯಕನಹಟ್ಟಿ ಗುರುತಿಪ್ಪೇರುದ್ರಸ್ವಾಮಿ ವಾರ್ಷಿಕ ಮಹಾಜಾತ್ರೆ. ಮಾ.31: ಡಿ.ಟಿ. ಶ್ರೀನಿವಾಸ್ ಅಮಾನತು ರದ್ದುಮಾಡಿದ ಬಿಜೆಪಿ. ಏ.2: ಕುದಾಪುರದ ಡಿಆರ್‌ಡಿಒ ಏರೊನಾಟಿಕಲ್ ಟೆಸ್ಟ್ ರೇಂಜ್ ರನ್‌ವೇನಲ್ಲಿ ಮರುಬಳಕೆ ಮಾಡಬಹುದಾದ ಉಡಾವಣಾ ರಾಕೆಟ್‌ ಪರೀಕ್ಷಾರ್ಥ ಪ್ರಯೋಗ ಮೇ 27: ಡಿ.ಸುಧಾಕರ್‌ಗೆ ಮತ್ತೊಮ್ಮೆ ಒಲಿದ ಸಚಿವ ಸ್ಥಾನ. ಮೇ 31: ಕುದಾಪುರದ ಭಾರತೀಯ ವಿಜ್ಞಾನ ಸಂಸ್ಥೆಗೆ ಆಟೋ ಕ್ಲೇವ್ ಎಂಬ ಪ್ರಯೋಗಾಲಯ ಉಪಕರಣ ಹಸ್ತಾಂತರ. ಜೂ.17: ರಾಗಿ ಕೇಂದ್ರದಲ್ಲಿ ಅವ್ಯವಹಾರ ಪ್ರಕರಣದಲ್ಲಿ ಅಧಿಕಾರಿಗಳ ವಿರುದ್ಧ ಎಫ್ಐಆರ್. ಜೂ.22: ಮೃತ ಸನ್ಯಾಸಿಯೊಬ್ಬರ ಮನೆಯಲ್ಲಿ ಬರೋಬ್ಬರಿ ₹30 ಲಕ್ಷ ನಗದು ಪತ್ತೆ. ಜೂ.28: ಕುದಾಪುರದ ಡಿಆರ್‌ಡಿಒ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ ಯುಎವಿ ತಪಸ್ 200ನೇ ಹಾರಾಟ ಯಶಸ್ವಿ. ಆ.2: ಹಿರಿಯೂರು ತಾಲ್ಲೂಕಿನ ವದ್ದೀಗೆರೆ ಸಮೀಪ ಮಾನವ ರಹಿತ ವಿಮಾನ ಪತನ. ಸೆ.12: ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಪರಿಣಾಮ ಶಾಲೆಗೆ ಮರಳಿದ ಚಳ್ಳಕೆರೆ ತಾಲ್ಲೂಕಿನ ಬಸಾಪುರ ಗ್ರಾಮದ ಬಾಲಕ ಯೋಗೇಶ್‌. ಸೆ.27: ಅನ್ಯ ಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಮಾತು ಮತ್ತು ಶ್ರವಣದೋಷವುಳ್ಳ ದಂಪತಿಗೆ ಎನ್‌.ದೇವರಹಳ್ಳಿ ಗ್ರಾಮದಿಂದ ಬಹಿಷ್ಕಾರ; ನಂತರ ಜಿಲ್ಲಾಡಳಿತದ ಮಧ್ಯಪ್ರವೇಶದಿಂದ ಪ್ರಕರಣ ಸುಖಾಂತ್ಯ.  ಅ.6: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಬಬ್ಬೂರು ಫಾರಂ ಕೃಷಿ ವಿಜ್ಞಾನ ಕೇಂದ್ರದ ಶತಮಾನೋತ್ಸವ ಸಮಾರಂಭದ ಉದ್ಘಾಟನೆ. ಅ.17: ಹೊಸದುರ್ಗ ಸಾರ್ವಜನಿಕ ಆಸ್ಪತ್ರೆಗೆ ರಾಜ್ಯಮಟ್ಟದ ಕಾಯಕಲ್ಪ ರನ್ನರ್‌ ಅಪ್ ಪ್ರಶಸ್ತಿ ಅ.18: ನಾಡಹಬ್ಬ ಮೈಸೂರು ದಸರಾ ವಸ್ತು ಪ್ರದರ್ಶನ‌ ಮೆರವಣಿಗೆಗೆ ನಾಯಕನಹಟ್ಟಿ ಗುರುತಿಪ್ಪೇರುದ್ರಸ್ವಾಮಿ ದೇವಾಲಯದ ಮಾದರಿ ಸ್ತಬ್ಧಚಿತ್ರ ಆಯ್ಕೆ. ಅ.30: ಕಾಟಪ್ಪನಹಟ್ಟಿ ಕಲಾವಿದ ಪಿ.ತಿಪ್ಪೇಸ್ವಾಮಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ. ಅ.30: ಹಿರಿಯೂರಿನಲ್ಲಿ ಸಮಾಜ ಕಲ್ಯಾಣಾಧಿಕಾರಿ ಕೃಷ್ಣಮೂರ್ತಿ ಅರಣ್ಯಾಧಿಕಾರಿ ನಾಗೇಂದ್ರನಾಯ್ಕ ಅವರ ಮನೆಗಳಲ್ಲಿ ಲೋಕಾಯುಕ್ತ ಶೋಧ. ನ.7: ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದ ಬಿಜೆಪಿ ತಂಡದಿಂದ ಬರ ಅಧ್ಯಯನ. ನ.26: ಬುಡ್ನಹಟ್ಟಿ ಗ್ರಾಮಕ್ಕೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್‌ ಭೇಟಿ. ಡಿ.26: ನಿಧಿ ಶೋಧನೆಗಾಗಿ ಕಾರೇಹಳ್ಳಿ ಹರಿಹರೇಶ್ವರ ದೇವಾಲಯದ ಬಾಗಿಲಿಗೆ ಬೆಂಕಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT