ಚಿತ್ರದುರ್ಗ: ‘17ನೇ ಶತಮಾನದಿಂದ ನಡೆದುಬಂದ ಮುರುಘಾ ಪರಂಪರೆಯ ಸಾಧನೆ ಬಗ್ಗೆ ಮಾತನಾಡುವುದು ಧನ್ಯದ ಕೆಲಸ. ಈ ಪರಂಪರೆಯನ್ನು ಗೌರವಿಸುತ್ತ, ಆರಾಧಿಸುತ್ತ ಮೌಲ್ಯಗಳನ್ನು ಎತ್ತಿ ಹಿಡಿಯುವುದು ವಿಶಿಷ್ಟ ಕಾರ್ಯವಾಗಿದೆ’ ಎಂದು ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಸ್ವಾಮೀಜಿ ತಿಳಿಸಿದರು.

ನಗರದ ಮುರುಘಾ ಮಠದಲ್ಲಿ ಶ್ರಾವಣಮಾಸದ ಅಂಗವಾಗಿ ಗುರುವಾರ ಆಯೋಜಿಸಿದ್ದ ನಾಯಕನಹಟ್ಟಿಯ (ದೊಡ್ಡ) ಗುರುಪಾದ ಮುರುಘರಾಜೇಂದ್ರ ಸ್ವಾಮೀಜಿಯ ವ್ಯಕ್ತಿತ್ವದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಗುರುಪಾದ ಸ್ವಾಮೀಜಿ ಹೆಸರು ಅತ್ಯಂತ ಮಹತ್ವದ ಪವಾಡ ಸದೃಶ್ಯವಾಗಿದೆ. ಅವರು ಮಹಾನ್ ಪವಾಡ ಪುರುಷರು. ಮುರುಘಾ ಪರಂಪರೆಯ 5ನೇ ಪೂಜ್ಯರಾಗಿದ್ದರು’ ಎಂದು ಹೇಳಿದರು.

‘ಪೂಜ್ಯರ ಐಕ್ಯಸ್ಥಳ ಗುರುಮಠಕಲ್ನಲ್ಲಿದ್ದು, ಇದು ಮುರುಘಾ ಮಠವನ್ನೇ ಹೋಲುತ್ತದೆ. ಇಂತಹ ಮಹನೀಯರನ್ನು ಸ್ಮರಿಸುವುದು ಪುಣ್ಯದ ಕೆಲಸ. ಈ ಕಾರ್ಯವನ್ನು ಮುಂದುವರಿಸಿಕೊಂಡು ಹೋಗಬೇಕು’ ಎಂದು ತಿಳಿಸಿದರು.

‘ಚಿತ್ರದುರ್ಗದ ಮುರುಘಾ ಪರಂಪರೆಯ ಸ್ವಾಮೀಜಿಗಳು ಇಲ್ಲಿ ಪೀಠಾಧ್ಯಕ್ಷರಾದರೂ ಸಂಚಾರ ಸಂದರ್ಭದಲ್ಲಿ ತಾವು ಬಯಲಾಗುವ ಕುರುಹು ಗೊತ್ತಾಗುತ್ತಿದ್ದಂತೆ ತಾವಿರುತ್ತಿದ್ದ ಮುಕ್ಕಾಂ ಪ್ರದೇಶಗಳಲ್ಲಿಯೇ ಲಿಂಗೈಕ್ಯರಾಗುವ ನಿರ್ಣಯ ಕೈಗೊಳ್ಳುತ್ತಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯದ ನಾನಾಕಡೆಗಳಲ್ಲಿ ಬಯಲಾದ ಉದಾಹರಣೆಗಳುಂಟು’ ಎಂದು ಹೇಳಿದರು.

‘ಅಸಾಧ್ಯವಾದುದನ್ನು ಸಾಧಿಸಿ ಹೋಗಿರುವವರ ಗುಣಗಾನದ ಜತೆಗೆ ಅನುಷ್ಠಾನ ಮುಖ್ಯ. ಆ ನಿಟ್ಟಿನಲ್ಲಿ ಈಗಿನ ಪೀಳಿಗೆಗೆ ಅವರು ನಡೆದ ದಾರಿಯ ಒಂದು ಸಣ್ಣತುಣುಕು ಮಾತ್ರ ಇಲ್ಲಿ ಸಿಗುತ್ತದೆ. ಇದು ಅವರ ಸಮಗ್ರ ಬದುಕಿನ ಚಿತ್ರಣ ಸಿಗುವಂತಾಗಬೇಕು. ಅದಕ್ಕೆ ಅಧ್ಯಯನ ಅಗತ್ಯ. ಶ್ರವಣದ ಜತೆಗೆ ಚರಿತ್ರೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಓದುವ ಪ್ರಯತ್ನ ಮಾಡಬೇಕಿದೆ’ ಎಂದು ಕರೆ ನೀಡಿದರು.

‘ಗುರುಪಾದ ಸ್ವಾಮಿಗಳು ಎಂದಿಗೂ ಯಾರನ್ನು ಕೈಚಾಚಿ ಬೇಡಿದವರಲ್ಲ. ಕೊಟ್ಟವರು ನಮ್ಮವರೇ, ಕೊಡದೇ ಇದ್ದವರೂ ನಮ್ಮವರೇ, ತೆಗಳಿದವರನ್ನು, ಹೊಗಳಿದವರನ್ನು, ಹೀಗೆ ಸರ್ವರನ್ನೂ ತಮ್ಮವರೆಂದು ಕಂಡರು. ಸಕಲರೂ ಸಮಾನರು ಮತ್ತು ಸ್ವಾಭಿಮಾನಪೂರ್ಣ ಬದುಕನ್ನು ಸಾಗಿಸಬೇಕೆಂಬ ಆಶಯದಿಂದ ಜೀತಪದ್ಧತಿಯನ್ನು ಶಮನ ಮಾಡಲು ಪ್ರಯತ್ನಿಸಿದ್ದರು’ ಎಂದು ಶ್ರೀಮಠದ ಸಾಧಕರಾದ ಬಸವ ಮುರುಘೇಂದ್ರ ಸ್ವಾಮೀಜಿ ಸ್ಮರಿಸಿದರು.

‘ಸಾಹಿತ್ಯ, ವಚನ ಬರೆದ ಕಟ್ಟುಗಳನ್ನು ನೂರಿನ್ನೂರು ವರ್ಷ ಮಾತ್ರ ಉಳಿಸಿಕೊಳ್ಳಲು ಸಾಧ್ಯ. ಅವರು ವಚನಗಳ ಕಟ್ಟುಗಳನ್ನು ಸಂರಕ್ಷಿಸುವ ಕೆಲಸ ಮಾಡಿದರು. ದಕ್ಷಿಣ ಭಾರತ ಸಂಚಾರ ಮಾಡಿದ ನಂತರ ಈಗಿನ ಯಾದಗಿರಿ ಜಿಲ್ಲೆಯ ಗುರುಮಠಕಲ್ ಊರಿನಲ್ಲಿ ಲಿಂಗೈಕ್ಯರಾದರು. ಚಿತ್ರದುರ್ಗದ ಬೃಹನ್ಮಠದಷ್ಟಲ್ಲದಿದ್ದರೂ ಇದೇ ತರಹದ ಕಲ್ಲಿನ ಮತ್ತು ಆಕರ್ಷಕ ಮಠ ಅಲ್ಲಿ ಸ್ಥಾಪನೆಯಾಗಿದೆ’ ಎಂದು ಹೇಳಿದರು.

‘ಅಂದು ಗ್ರಾಮಗಳಲ್ಲಿ ಅನಾಗರಿಕ ವರ್ತನೆಯವರನ್ನು ಸರಿದಾರಿಗೆ ತರಲು, ಅವರಲ್ಲಿ ಸದಾಚಾರ, ಸದ್ವರ್ತನೆ ರೂಪಿಸಲು ಸ್ವಾಮೀಜಿ ಶ್ರಮಿಸಿದರು. ತತ್ವವಿಚಾರಗಳನ್ನು ಜನಮಾನಸದಲ್ಲಿ ಬಿತ್ತುತ್ತ ಸಾಗಿದರು’ ಎಂದು ಉಪನ್ಯಾಸಕ ನವೀನ್ ಹೇಳಿದರು.

ಹೂವಿನಮಡುವಿನ ಎಚ್.ಎಸ್.ಹಾಲಸ್ವಾಮಿ ಹಿರೇಮಠ, ಬಸವರಾಜಕಟ್ಟಿ, ಎಸ್ಜೆಐಟಿ ಪ್ರಾಂಶುಪಾಲ ಭರತ್, ಕಲಾವಿದರಾದ ಉಮೇಶ್ ಪತ್ತಾರ್, ಎಂ.ಪಲ್ಲವಿ ಇದ್ದರು.

Highlights - ಗುರುಪಾದ ಸ್ವಾಮೀಜಿಗಳ ತತ್ವ ಪಾಲಿಸಲು ಸಲಹೆ ಜೀತಪದ್ಧತಿ ನಾಶಮಾಡಲು ಪ್ರಯತ್ನಿಸಿದ್ದ ಶ್ರೀಗಳು ಸ್ವಾಭಿಮಾನದ ಬದುಕು ನಡೆಸಲು ಶ್ರೀಗಳು ಪ್ರೇರಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.