ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರದುರ್ಗ | ಗಣಪತಿ ಮೂರ್ತಿ ವಿಸರ್ಜನೆ: ಬಿಗಿ ಬಂದೋಬಸ್ತ್‌ ನಡುವೆ ಶೋಭಾಯಾತ್ರೆ

Published : 28 ಸೆಪ್ಟೆಂಬರ್ 2024, 8:28 IST
Last Updated : 28 ಸೆಪ್ಟೆಂಬರ್ 2024, 8:28 IST
ಫಾಲೋ ಮಾಡಿ
Comments

ಚಿತ್ರದುರ್ಗ: ವಿಶ್ವ ಹಿಂದೂ ಪರಿಷತ್‌, ಭಜರಂಗ ದಳದ ವತಿಯಿಂದ ಕೂರಿಸಲಾಗಿದ್ದ ಗಣಪತಿ ಮೂರ್ತಿ ವಿಸರ್ಜನೆ ಅಂಗವಾಗಿ ಶನಿವಾರ ಬಿಗಿ ಪೊಲೀಸ್‌ ಬಂದೋಬಸ್ತ್‌ ನಡುವೆ ಶೋಭಾಯಾತ್ರೆ ಆರಂಭಗೊಂಡಿತು.

ಗಣೇಶ ಹಬ್ಬದ ಅಂಗವಾಗಿ ಸೆ.7ರಂದು ಮೂರ್ತಿ ಕೂರಿಸಲಾಗಿತ್ತು. ಶನಿವಾರ ರಾತ್ರಿ ಚಂದ್ರವಳ್ಳಿ ಕೆರೆಯಲ್ಲಿ ಮೂರ್ತಿ ವಿಸರ್ಜನೆ ನಡೆಯಲಿದ್ದು ನಗರ ವ್ಯಾಪ್ತಿಯಲ್ಲಿ 4 ಕಿ.ಮೀ ಮೆರವಣಿಗೆ ನಡೆಯಲಿದೆ. ಮೂರ್ತಿ ಕೂರಿಸಿದ್ದ ಜೈನಧಾಮ ಮೈದಾನದಿಂದ ಶೋಭಾ ಯಾತ್ರೆ ಆರಂಭಗೊಂಡಿದ್ದು ಹೆಜ್ಜೆಹೆಜ್ಜೆಗೂ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ.

ರಾಜ್ಯದ ವಿವಿಧೆಡೆಯಿಂದ 3,500ಕ್ಕೂ ಹೆಚ್ಚು ಪೊಲೀಸ್‌, ಗೃಹ ರಕ್ಷಕ ದಳದ ಸಿಬ್ಬಂದಿ ನಗರಕ್ಕೆ ಬಂದಿದ್ದಾರೆ. ಮೆರವಣಿಗೆಯು ಬಿ.ಡಿ ರಸ್ತೆ, ಹೊಳಲ್ಕೆರೆ ರಸ್ತೆಯಲ್ಲಿ ಸಾಗಿ ಚಂದ್ರವಳ್ಳಿ ತಲುಪಲಿದೆ. ಶೋಭಾಯಾತ್ರೆ ಸಾಗುವ ಅಂಬೇಡ್ಕರ್‌ ವೃತ್ತ, ಮದಕರಿ ವೃತ್ತ, ಗಾಂಧಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಕನಕ ವೃತ್ತಕ್ಕೆ ವಿಶೇಷ ಅಲಂಕಾರ ಮಾಡಲಾಗಿದೆ. ಲಕ್ಷಾಂತರ ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಡಿ.ಜೆ ಸದ್ದಿಗೆ ಕುಣಿದು ಕುಪ್ಪಳಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT