ಮಂಗಳವಾರ, ನವೆಂಬರ್ 24, 2020
19 °C

ಚಿತ್ರದುರ್ಗ: ಹಿರಿಯೂರು ಸಮೀಪ ಸರಣಿ ಅಪಘಾತ: ಸ್ಥಳದಲ್ಲೇ ಇಬ್ಬರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯೂರು: ತಾಲ್ಲೂಕಿನ ಪಟ್ರೇಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಸಂಭವಿಸಿದ ಸರಣಿ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹಾವೇರಿಯ ಲತಾ (28) ಮತ್ತು ಬೆಂಗಳೂರಿನ ಅತ್ತಿಬೆಲೆ ನಿವಾಸಿ ಟಾಟಾ ಏಸ್ ಚಾಲಕ ಶಶಿಕುಮಾರ್ (26) ಸ್ಥಳದಲ್ಲಿಯೇ  ಸಾವನ್ನಪ್ಪಿದ್ದಾರೆ. 

ಶ್ರುತಿ (03), ಜ್ಯೋತಿ (25), ಜಾಗೃತಿ (04), ದ್ಯಾಮಣ್ಣ (24) ವರ್ಷ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ.  ಚಿಕಿತ್ಸೆಗಾಗಿ ಇವರನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ  ದಾಖಲಿಸಲಾಗಿದೆ.

ಹೆದ್ದಾರಿಯ ಗ್ರೀನ್ ಲ್ಯಾಂಡ್ ಹೋಟೆಲ್ ಸಮೀಪದಲ್ಲಿ   ಶುಕ್ರವಾರ ರಾತ್ರಿ ಈ ಅಪಘಾತ ಸಂಭವಿಸಿದೆ.    ಖಾಸಗಿ ಬಸ್, ಇಂಡಿಕಾ ಕಾರು, ಮಾರುತಿ ಆಮ್ನಿ, ಕ್ಯಾಂಟರ್ ಹಾಗೂ ಟಾಟಾ ಏಸ್ ನಡುವೆ ಸರಣಿ ಅಪಘಾತ ಸಂಭವಿಸಿದೆ. ಓಮಿನಿ ಕಾರು ಹಾಗೂ ಟಾಟಾ ಏಸ್ ವಾಹನದಲ್ಲಿ ಇದ್ದವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು