ಹೊಳಲ್ಕೆರೆ: ಅಕ್ರಮವಾಗಿ ಸಾಗಿಸುತ್ತಿದ್ದ 26 ಕರುಗಳನ್ನು ಬಜರಂಗದಳದ ಸದಸ್ಯರು ರಕ್ಷಿಸಿದ್ದಾರೆ.

ತಾಲ್ಲೂಕಿನ ಮಲ್ಲಾಡಿಹಳ್ಳಿಯಲ್ಲಿ ಪ್ರತಿ ಶುಕ್ರವಾರ ಜಾನುವಾರು ಸಂತೆ ನಡೆಯುತ್ತದೆ. ಇಲ್ಲಿಂದ ದನಗಳನ್ನು ಖರೀದಿಸಿ ಬೆಂಗಳೂರು, ಮಂಗಳೂರು ಮತ್ತಿತರ ಕಡೆಗೆ ಸಾಗಿಸಲಾಗುತ್ತದೆ. ತೌಸಿಫ್ ಹಾಗೂ ಇಮ್ರಾನ್ ಅವರು ಒಂದೇ ಟೆಂಪೊದಲ್ಲಿ 26 ಕರುಗಳನ್ನು ತುಂಬಿಕೊಂಡು ಭದ್ರಾವತಿಗೆ ಸಾಗಿಸಲು ಮುಂದಾಗಿದ್ದರು. ಇದನ್ನು ಗಮನಿಸಿದ ಬಜರಂಗದಳ ತಾಲ್ಲೂಕು ಘಟಕದ ಸಹ ಸಂಚಾಲಕ ಜಯರಾಜ್, ಸಂಚಾಲಕ ಮಂಜುನಾಥ್, ಗೋರಕ್ಷಕ ಪ್ರಮುಖ ರಮೇಶ್, ಸಿದ್ದರಾಮಣ್ಣ ಟೆಂಪೊವನ್ನು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.

‘ಕರುಗಳನ್ನು ಗೋಶಾಲೆಗೆ ಕಳುಹಿಸಲಾಗಿದೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದು ಪಿಎಸ್‌ಐ ಸುರೇಶ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.