ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಿನ ಗಾಜು ಒಡೆದು ₹ 10 ಲಕ್ಷ ದೋಚಿದ ಕಳ್ಳರು

Published 22 ನವೆಂಬರ್ 2023, 15:39 IST
Last Updated 22 ನವೆಂಬರ್ 2023, 15:39 IST
ಅಕ್ಷರ ಗಾತ್ರ

ಹೊಸದುರ್ಗ: ಪಟ್ಟಣದ ವಿಜಯ ಬ್ಯಾಂಕ್ ಎದುರೇ ಬುಧವಾರ ಕಾರಿನಲ್ಲಿದ್ದ ₹ 10 ಲಕ್ಷವನ್ನು ಕಳ್ಳರು ಎಗರಿಸಿದ್ದಾರೆ.

ತಾಲ್ಲೂಕಿನ ಲಕ್ಕಿಹಳ್ಳಿ ಗ್ರಾಮದ ನಿವಾಸಿ ಮುದ್ದಪ್ಪ ಅವರು ತಮ್ಮ ಮಾವ ರುದ್ರಪ್ಪ ಅವರ ಜಮೀನಿಗೆ ಬಂದಿದ್ದ ₹ 19.97 ಲಕ್ಷದಲ್ಲಿ ₹ 10 ಲಕ್ಷವನ್ನು ಕರ್ನಾಟಕ ಬ್ಯಾಂಕಿನಿಂದ ಬಿಡಿಸಿಕೊಂಡು ಕಾರಿನಲ್ಲಿ ಇಟ್ಟು ಕಾರು ಲಾಕ್ ಮಾಡಿಕೊಂಡು ವಿಜಯ ಬ್ಯಾಂಕ್ ಒಳಗಡೆ ಹೋಗಿದ್ದರು. 15 ನಿಮಿಷದ ಬಳಿಕ ಬಂದು ನೋಡಿದಾಗ ಯಾರೋ ಕಳ್ಳರು ಕಾರಿನ ಗಾಜನ್ನು ಒಡೆದು ಅದರಲ್ಲಿದ್ದ ₹ 10 ಲಕ್ಷವನ್ನು ಬ್ಯಾಗ್ ಸಮೇತ ಕದ್ದಿರುವುದು ಗೊತ್ತಾಗಿದೆ.

ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT