ದೇವರಾಜ ಅರಸು ಶಿಕ್ಷಣ ಸಂಸ್ಥೆಯ ಸ್ಥಾಪಕ ಎಂ.ಚಂದ್ರಪ್ಪ ಅವರು ನಡೆದು ಬಂದ ಹಾದಿಯ ಬಗ್ಗೆ ನೃತ್ಯ ಸಂಯೋಜನೆಯ ಮೂಲಕ ಸಾಕ್ಷ್ಯಚಿತ್ರ ಪ್ರದರ್ಶನ ಮಾಡಲಾಯಿತು. ಕಡು ಬಡತನದಿಂದ ಪರಿಶ್ರಮದ ಹಾದಿಯಲ್ಲಿ ಮೂಡಿದ ಹೆಜ್ಜೆ ಗುರುತುಗಳು ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬಿತು. ಕನಸು ಪರಿಶ್ರಮ ಹಾಗೂ ಯಶಸ್ಸಿನ ಸೂತ್ರವನ್ನು ಸಾಕ್ಷ್ಯಚಿತ್ರದ ಮೂಲಕ ಕಟ್ಟಿಕೊಡಲಾಯಿತು. ಅಧ್ಯಾತ್ಮದ ಹಾದಿ ಪರಿಶ್ರಮದ ಬದುಕು ಬಡವರಿಗೆ ನೀಡುವ ಸಹಾಯಹಸ್ತ 1983ರಿಂದ ವಿವಿಧ ವಿದ್ಯಾಸಂಸ್ಥೆಗಳ ಸ್ಥಾಪನೆ ಶಾಸಕರಾಗಿ ಆಯ್ಕೆಯಾಗಿ ಜನಸೇವೆ ಮುಂತಾದ ವಿಚಾರಗಳನ್ನು ನೃತ್ಯದ ಮೂಲಕ ಅನಾವರಣಗೊಳಿಸಲಾಯಿತು.