‘ಸ್ಥಳಾಂತರದ ಒತ್ತಡವೂ ಇತ್ತು’
ಮೊಳಕಾಲ್ಮುರು ಪಟ್ಟಣಕ್ಕೆ ನೀಡಿರುವ 200 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ಕೆಲವರ ಒತ್ತಡದಿಂದ ಬೇರೆ ತಾಲ್ಲೂಕಿಗೆ ಸ್ಥಳಾಂತರಿಸುವ ಹುನ್ನಾರವೂ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಾಕಷ್ಟು ಮನವರಿಕೆ ಮಾಡಿ ಇಲ್ಲಿಯೇ ಉಳಿಸಿಕೊಳ್ಳಲಾಗಿದೆ’ ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ತಿಳಿಸಿದರು. ‘ಸ್ಥಳ ಸೇರಿ ಬೇರೆ ಯಾವುದೇ ಗೊಂದಲ ಎದುರಾದರೆ ಆಸ್ಪತ್ರೆ ಸ್ಥಳಾಂತರ ಸಾಧ್ಯತೆ ಇದೆ. ಅಧಿವೇಶನ ಮುಗಿಸಿಕೊಂಡು ಸ್ಥಳ ಪರಿಶೀಲನೆ ಮಾಡಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಲಿದ್ದಾರೆ. ನಂತರ ಸ್ಥಳ ಅಂತಿಮಗೊಳ್ಳಲಿದೆ’ ಎಂದರು.