ಯಡಿಯೂರಪ್ಪ ಅವರೇ ಧೈರ್ಯವಾಗಿರಿ: ಶಿವಮೂರ್ತಿ ಮುರುಘಾ ಶರಣರ ಅಭಯ

ಚಿತ್ರದುರ್ಗ: ಬಿ.ಎಸ್.ಯಡಿಯೂರಪ್ಪ ಅವರೇ ನಿಮಗೇನೂ ಆಗದು, ಧೈರ್ಯದಿಂದ ಇರಿ ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಅಭಯ ನೀಡಿದರು.
ಮುರುಘಾ ಮಠದ ಮುರುಘಾಶ್ರೀ ಮ್ಯೂಸಿಯಂ ಉದ್ಘಾಟನಾ ಸಮಾರಂಭದಲ್ಲಿ ಶರಣರು ಮಾತನಾಡಿದರು.
ಲಿಂಗಾಯತ ವೀರಶೈವರಲ್ಲಿ ಬಡವರು, ಶೋಷಿತರು ಇದ್ದಾರೆ. ಇಂತಹ ಸಮುದಾಯವನ್ನು ಕೇಂದ್ರದ ಹಿಂದುಳಿದ ಜಾತಿ ಪಟ್ಟಿಗೆ ಸೇರಿಸುವ ಶಿಫಾರಸ್ಸು ಮಾಡುವುದಾಗಿ ಹೇಳಿದ್ದು ಸಮುದಾಯದಲ್ಲಿ ಸಂಚಲನ ಉಂಟು ಮಾಡಿದೆ. ಇದೊಂದು ನಿರ್ಧಾರ ಕೇಳಿ ಸಂತಸ ಉಂಟಾಗಿದೆ. ಆ ಕಾರ್ಯವನ್ನು ಯಡಿಯೂರಪ್ಪ ಅವರೇ ಪೂರ್ಣಗೊಳಿಸಬೇಕು. ಬೇರೆ ಯಾರೂ ಈ ಕೆಲಸ ಮಾಡಲು ಸಾಧ್ಯವಿಲ್ಲ. ಇದಕ್ಕಾಗಿ ಮುಖ್ಯಮಂತ್ರಿ ಹುದ್ದೆಯಲ್ಲಿ ಯಡಿಯೂರಪ್ಪ ಮುಂದುವರೆಯಬೇಕಿದೆ ಎಂದರು.
ಇದನ್ನೂ ಓದಿ: ಸಂಪುಟ ವಿಸ್ತರಣೆ ಕುರಿತು ವರಿಷ್ಠರೊಂದಿಗೆ ಇಂದು ಚರ್ಚೆ: ಬಿ.ಎಸ್.ಯಡಿಯೂರಪ್ಪ
ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡಲು ನೀವು ಧೈರ್ಯದಿಂದ ದೆಹಲಿಗೆ ಹೋಗಿ. ನೀವು ಯಾವಾಗಲೂ ಹೀಗೆ ಇರುತ್ತೀರಿ ಎಂದ ಶರಣರು, ಹೌದಲ್ಲವೇ ಎಂದು ವೇದಿಕೆ ಮೇಲಿದ್ದ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹಾಗೂ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರನ್ನು ಕೇಳಿದರು. ಶರಣರ ಅಭಿಪ್ರಾಯಕ್ಕೆ ಇಬ್ಬರು ಸ್ವಾಮೀಜಿಗಳು ಒಪ್ಪಿಗೆ ಸೂಚಿಸಿದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.