ಶನಿವಾರ, ಅಕ್ಟೋಬರ್ 23, 2021
21 °C

ಗಾಂಜಾ ಸಾಗಣೆ: ಆರೋಪಿ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೊಳಕಾಲ್ಮುರು:  ತಾಲ್ಲೂಕಿನ ನಾಗಸಮುದ್ರದ ಬಳಿ ಅಕ್ರಮವಾಗಿ ಗಾಂಜಾ ಸಾಗಣೆ ಮಾಡುತ್ತಿದ್ದ ಆರೋಪಿಯನ್ನು ಭಾನುವಾರ ಅಬಕಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಗುನ್ನಯ್ಯ ಎಂದು ಗುರುತಿಸಲಾಗಿದೆ. ಹುಚ್ಚಂಗಿದುರ್ಗ ರಸ್ತೆಯ ನಾಗಸಮುದ್ರ ಕ್ರಾಸ್ ಬಳಿ ವಶಕ್ಕೆ ಪಡೆಯಲಾಗಿದೆ. ಹೊಸಪೇಟೆಯ ಅಬಕಾರಿ ಜಂಟಿ ಆಯುಕ್ತರು, ಜಿಲ್ಲಾ ಜಂಟಿ ಆಯುಕ್ತರು ಮತ್ತು ಹಿರಿಯೂರಿನ ಜಂಟಿ ಅಬಕಾರಿ ಆಯುಕ್ತರ ನಿರ್ದೇಶನದಂತೆ ದಾಳಿ ನಡೆಸಲಾಯಿತು. 1.35 ಕೆ.ಜಿಯಷ್ಟು ಒಣ ಗಾಂಜಾ ವಶಕ್ಕೆ ಪಡೆಯಲಾಗಿದೆ. 

ದಾಳಿಯಲ್ಲಿ ಅಬಕಾರಿ ವಲಯ ನಿರೀಕ್ಷಕ ಮೊಹಮದ್ ಸಾದತ್, ಸಿಬ್ಬಂದಿ ವೀರೇಶ್, ಮಲ್ಲಿಕಾರ್ಜುನ, ಪರಶುರಾಂ ಭಾಗವಹಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು