ಎನ್‌ಎಂಎಂಎಸ್ ಪರೀಕ್ಷೆ; 436 ವಿದ್ಯಾರ್ಥಿಗಳಿಗೆ ₹ 2 ಕೋಟಿ ವಿದ್ಯಾರ್ಥಿ ವೇತನ
ಎಂ.ಎನ್.ಯೋಗೇಶ್
Published : 5 ಸೆಪ್ಟೆಂಬರ್ 2025, 6:25 IST
Last Updated : 5 ಸೆಪ್ಟೆಂಬರ್ 2025, 6:25 IST
ಫಾಲೋ ಮಾಡಿ
Comments
ಶಿವಶಂಕರ್
ಹೊಸದುರ್ಗದ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲೆ ವಿಭಾಗದ ನೋಟ
ಶಾಲೆ ಆರಂಭಕ್ಕೆ ಮುನ್ನ ಶಾಲೆ ಮುಗಿದ ನಂತರ ಹಾಗೂ ಭಾನುವಾರ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತೇನೆ. ಸರ್ಕಾರ ಕೊಟ್ಟಿರುವ ಸೌಲಭ್ಯವು ಹೆಚ್ಚೆಚ್ಚು ಬಡಮಕ್ಕಳಿಗೆ ಸಿಗಬೇಕು ಎಂಬುದೇ ನನ್ನ ಗುರಿ
ಆರ್.ಶಿವಶಂಕರ್. ಪ್ರಶಸ್ತಿ ಪುರಸ್ಕೃತ ಶಿಕ್ಷಕ
ಶಾಲೆಗೆ ಎಚ್.ಜಿ.ಗೋವಿಂದಗೌಡ ಪ್ರಶಸ್ತಿ
ಆರ್.ಶಿವಶಂಕರ್ ಅವರಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಸಂದಿದ್ದರೆ ಅವರು ಕೆಲಸ ಮಾಡುವ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಪೌಢಶಾಲಾ ವಿಭಾಗಕ್ಕೆ ರಾಜ್ಯ ಮಟ್ಟದ ಎಚ್.ಜಿ.ಗೋವಿಂದಗೌಡ ಪ್ರಶಸ್ತಿ ಬಂದಿದೆ. ಪ್ರಶಸ್ತಿಯು ಸರ್ಕಾರದಿಂದ ₹ 2.50 ಲಕ್ಷ ಗೋವಿಂದಗೌಡರ ಠೇವಣಿ ನಿಧಿಯಿಂದ ₹ 25000 ನಗದು ಬಹುಮಾನ ಹೊಂದಿದೆ. ಶಾಲೆಯು ಅತ್ಯುನ್ನತ ಪ್ರಶಸ್ತಿ ಪಡೆದಿರುವುದಕ್ಕೆ ಮುಖ್ಯಶಿಕ್ಷಕ ಎಚ್.ನಾಗೇಂದ್ರಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ. ಪ್ರಶಸ್ತಿ ಪಡೆದಿರುವ ಶಾಲೆ ಹಾಗೂ ಸಿಬ್ಬಂದಿಯನ್ನು ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಆಕಾಶ್ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಂ.ಆರ್.ಮಂಜುನಾಥ್ ಅಭಿನಂಬಿಸಿದ್ದಾರೆ.
ಎನ್‌ಎಂಎಂಎಸ್ ಪರೀಕ್ಷೆ ಹೀಗಿದೆ...
ರಾಜ್ಯ ಶೈಕ್ಷಣಿಕ ಮತ್ತು ಸಂಶೋಧನಾ ತರಬೇತಿ ಸಂಸ್ಥೆ ವತಿಯಿಂದ ರಾಷ್ಟ್ರೀಯ ಪ್ರತಿಭಾ ವಿದ್ಯಾರ್ಥಿ ವೇತನ (ಎನ್‌ಎಂಎಂಎಸ್) ಪರೀಕ್ಷೆ ನಡೆಸಲಾಗುತ್ತದೆ. ಪ್ರತಿ ವರ್ಷ ಆಗಸ್ಟ್ ಸೆಪ್ಟೆಂಬರ್ ತಿಂಗಳಲ್ಲಿ ಆನ್‌ಲೈನ್ ಮೂಲಕ ಆಹ್ವಾನಿಸಲಾಗುತ್ತದೆ. 8ನೇ ತರಗತಿ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಅರ್ಜಿ ಹಾಕಲು ಅರ್ಹರು. ಬೌದ್ಧಿಕ ಸಾಮರ್ಥ್ಯ 90 ಅಂಕ 8ನೇ ತರಗತಿಯ ಸಮಾಜ 35 ಅಂಕ ವಿಜ್ಞಾನ 35 ಅಂಕ ಗಣಿತ 20 ಅಂಕ ಸೇರಿ ಒಟ್ಟು 180 ಅಂಕಗಳಿಗೆ ಪರೀಕ್ಷೆ ನಡೆಯುತ್ತದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ತಿಂಗಳಿಗೆ ₹ 1000ದಂತೆ ನಾಲ್ಕ ವರ್ಷಗಳ ಕಾಲ ಒಟ್ಟು ₹ 48000 ವಿದ್ಯಾರ್ಥಿವೇತನ ಮಕ್ಕಳ ಖಾತೆಗೆ ಜಮಾ ಆಗಲಿದೆ.