ಚಿತ್ರದುರ್ಗ: ಜಿಲ್ಲೆಯ ವಿವಿಧೆಡೆ ಉತ್ತಮ ಮಳೆ ಸುರಿದಿದ್ದು, ನಾಯಕನಹಟ್ಟಿ ಪೊಲೀಸ್ ಠಾಣೆ ಜಲಾವೃತಗೊಂಡಿದೆ. ಮೂರು ಮನೆಗಳಿಗೆ ನೀರು ನುಗ್ಗಿದ್ದು, 34 ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಶುಕ್ರವಾರ ತಡರಾತ್ರಿ ಆರಂಭವಾದ ಮಳೆ ಶನಿವಾರ ನಸುಕಿನವರೆಗೆ ಸುರಿದಿದೆ. ಆಗಾಗ ಬಿಡುವು ನೀಡುತ್ತಿದ್ದ ಮಳೆ, ಗುಡುಗು, ಮಿಂಚು ಸಹಿತ ಬಿರುಸಾಗಿ ಬಂದಿದೆ. ಕೆರೆ, ಕಟ್ಟೆ, ಚೆಕ್ ಡ್ಯಾಮ್ಗಳಿಗೆ ನೀರು ಹರಿದು ಬಂದಿದೆ.

ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿಯಲ್ಲಿ 6.8 ಸೆಂ.ಮೀ, ಹೊಳಲ್ಕೆರೆಯಲ್ಲಿ 6 ಸೆಂ.ಮೀ, ನಾಯಕನಹಟ್ಟಿಯಲ್ಲಿ 6.5 ಸೆಂ.ಮೀ, ಚಳ್ಳಕೆರೆಯಲ್ಲಿ 5 ಸೆಂ.ಮೀ, ಚಿತ್ರದುರ್ಗ, ಸಿರಿಗೆರೆ, ಮೊಳಕಾಲ್ಮುರು ತಾಲ್ಲೂಕಿನ ರಾಯಪುರ, ಬಿ.ಜಿ.ಕೆರೆ, ಹಿರಿಯೂರು ತಾಲ್ಲೂಕಿನ ಸೂಗೂರು, ಬಬ್ಬೂರಿನಲ್ಲಿ 4 ಸೆಂ.ಮೀ ಮಳೆ ಸುರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.