ಹಿರಿಯೂರು: ‘ನಗರಸಭೆಯಲ್ಲಿ 47 ಪೌರ ಕಾರ್ಮಿಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡು ಕೆಲಸ ಮಾಡಿಸಿಕೊಳ್ಳಲಾಗುತ್ತಿದ್ದು, ಇದೀಗ ಅವರಲ್ಲಿ ಕೆಲವರನ್ನು ಹೊರಹಾಕಲಾಗುತ್ತಿದೆ ಎಂಬ ಮಾಹಿತಿ ಇದೆ. ಅಂತಹ ತಾರತಮ್ಯ ಮಾಡಬಾರದು’ ಎಂದು ನಗರಸಭೆ ಸದಸ್ಯ ಮಹೇಶ್ ಪಲ್ಲವ ಆಗ್ರಹಿಸಿದರು.

ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ನಗರಸಭೆ ಅಧ್ಯಕ್ಷ ಬಾಲಕೃಷ್ಣ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

‘ಕೆಲವರು ಪೌರ ಕಾರ್ಮಿಕರಾಗಿದ್ದುಕೊಂಡು ಸೂಪರ್ ವೈಸರ್ ಎಂದು ಹೇಳಿ ಕಚೇರಿಯಲ್ಲಿಯೇ ಕಾಲ ಕಳೆತ್ತಿದ್ದಾರೆ. ಅಂತಹವರಿಂದ ಮೊದಲು ಕೆಲಸ ಮಾಡಿಸಿ. ಯಾವುದೇ ಪ್ರಭಾವಕ್ಕೆ ಒಳಗಾಗಬೇಡಿ’ ಎಂದು ಸಲಹೆ ನೀಡಿದರು.

‘ನಗರಸಭೆಗೆ ಎಷ್ಟು ಪೌರಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲು ಅನುಮತಿ ಇದೆ, ಈಗ ಎಷ್ಟು ಜನ ಕೆಲಸಕ್ಕೆ ತೆಗೆದುಕೊಂಡಿದ್ದೀರಿ? ಆರೇಳು ತಿಂಗಳಿಂದ ಕರ್ತವ್ಯ ನಿರ್ವಹಿಸಿರುವವರನ್ನು ಕೆಲಸದಿಂದ ಹೊರಹಾಕಬೇಡಿ’ ಎಂದು ಸದಸ್ಯ ಈ. ಮಂಜುನಾಥ್ ಸಲಹೆ ನೀಡಿದರು.

‘2011ರಲ್ಲಿ ನಗರದ ಜನಸಂಖ್ಯೆ 56,416 ಇತ್ತು. ಪ್ರಸ್ತುತ 75,000 ದಾಟಿದೆ. ಅಂದಾಜು 500 ಜನಕ್ಕೆ ಒಬ್ಬರಂತೆ 75 ಪೌರ ಕಾರ್ಮಿಕರನ್ನು ತೆಗೆದುಕೊಳ್ಳಲು ಜಿಲ್ಲಾಧಿಕಾರಿ ಅವಕಾಶ ನೀಡಿದ್ದರು. ಇದೀಗ ಅವರಲ್ಲಿ ಯಾರನ್ನೂ ಕೆಲಸದಿಂದ ತೆಗೆಯುವುದು ಬೇಡ’ ಎಂದು ನಿಕಟಪೂರ್ವ ಅಧ್ಯಕ್ಷ ಅಜಯ್ ಕುಮಾರ್ ಸೂಚಿಸಿದರು.

‘ಪೌರ ಕಾರ್ಮಿಕರನ್ನು ಬೀದಿ ಪಾಲು ಮಾಡುವಹಾಗಿಲ್ಲ. ಹೆಚ್ಚಿಗೆ ಇರುವ ಆರೇಳು ಕಾರ್ಮಿಕರನ್ನು ತೆಗೆದುಕೊಳ್ಳಲು ಸಚಿವರ ಮೂಲಕ ಜಿಲ್ಲಾಧಿಕಾರಿಗೆ ಪತ್ರ ಬರೆಸೋಣ. ಜನಸಂಖ್ಯೆ ಆಧಾರದ ಮೇಲೆ ಉಳಿದವರಿಗೂ ಅನುಮತಿ ಕೊಡಿಸಿ ವೇತನ ಪಡೆಯುವಂತೆ ಮಾಡೋಣ’ ಎಂದು ಬಿ.ಎನ್. ಪ್ರಕಾಶ್ ಸಲಹೆ ನೀಡಿದರು.

‘ಸೋಮೇರಹಳ್ಳಿ ತಾಂಡಾ ನಗರಸಭೆಗೆ ಸೇರಿದೆ. ಹೀಗಾಗಿ ಜನಸಂಖ್ಯೆ ಹೆಚ್ಚಳ ಆಗಿರುವುದನ್ನು ತೋರಿಸಿ ಎಲ್ಲರನ್ನೂ ಕೆಲಸದಲ್ಲೇ ಮುಂದುವರಿಸಿಕೊಂಡು ಹೋಗುವ ಪ್ರಯತ್ನ ಮಾಡಲಾಗುವುದು’ ಎಂದು ಪೌರಾಯುಕ್ತ ಎ. ವಾಸಿಂ ಸದಸ್ಯರಿಗೆ ಉತ್ತರಿಸಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಮಂಜುಳಾ, ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ವಿಠ್ಠಲ ಪಾಂಡುರಂಗ, ಮಮತಾ, ಎಂ.ಡಿ. ಸಣ್ಣಪ್ಪ, ರತ್ನಮ್ಮ, ನಗರಸಭೆ ಸದಸ್ಯರಾದ ಶಿವರಂಜನಿ ಯಾದವ್, ಗುಂಡೇಶ್ ಕುಮಾರ್, ಚಿತ್ರಜಿತ್ ಯಾದವ್, ಜಿ.ಎಸ್. ತಿಪ್ಪೇಸ್ವಾಮಿ, ಅನಿಲ್ ಕುಮಾರ್, ಈರಲಿಂಗೇಗೌಡ, ಸಮೀವುಲ್ಲಾ, ಜಗದೀಶ್ ಉಪಸ್ಥಿತರಿದ್ದರು.

ವಾಗ್ವಾದ: ‘ಇಂದೋರ್ ಮಾದರಿ ಕಸ ಸಂಗ್ರಹ ವ್ಯವಸ್ಥೆ ಜಾರಿಗೊಳಿಸಲು ವರ್ತಕರೊಂದಿಗೆ ನಡೆಸಿದ ಸಭೆಗೆ ನಮ್ಮನ್ನು ಆಹ್ವಾನಿಸಿಲ್ಲ’ ಎಂದು ಸದಸ್ಯೆ ಶಿವರಂಜನಿ ಬೇಸರ ವ್ಯಕ್ತಪಡಿಸಿದರೆ, ‘ಪೌರಕಾರ್ಮಿಕರನ್ನು ನೇಮಿಸಿಕೊಳ್ಳುವಾಗ ನಮ್ಮ ಸಲಹೆಯನ್ನೂ ಪರಿಗಣಿಸಬೇಕು’ ಎಂದು ನಾಮನಿರ್ದೇಶಿತ ಸದಸ್ಯರು ಒತ್ತಾಯಿಸಿದರು. ಆಗ ಕೆಲಕಾಲ ವಾಗ್ವಾದ ಉಂಟಾಗಿ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.