ಹೊಳಲ್ಕೆರೆ: ತಾಲ್ಲೂಕಿನ ಎಂ.ಜಿ.ಕಟ್ಟೆಯಲ್ಲಿ ಮಳೆಯಿಂದ ಭರ್ತಿಯಾಗಿರುವ ನೂತನ ಬ್ಯಾರೇಜ್ಗೆ ಭಾನುವಾರ ಶಾಸಕ ಎಂ.ಚಂದ್ರಪ್ಪ ಬಾಗಿನ ಅರ್ಪಿಸಿದರು.

‘ಆರು ತಿಂಗಳ ಹಿಂದೆ ₹ 2 ಕೋಟಿ ವೆಚ್ಚದಲ್ಲಿ ಎಂ.ಜಿ.ಕಟ್ಟೆ ಸಮೀಪದ ಹಳ್ಳಕ್ಕೆ ನೂತನ ಬ್ಯಾರೇಜ್ ನಿರ್ಮಿಸಲಾಗಿತ್ತು. ಮೊನ್ನೆ ಸುರಿದ ಮಳೆಯಿಂದ ಬ್ಯಾರೇಜ್ ಭರ್ತಿಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ತಾಲ್ಲೂಕಿನ ರೈತರು ಅಡಿಕೆಯನ್ನೇ ನಂಬಿ ಬದುಕುತ್ತಿದ್ದು, ನೀರು ಮತ್ತು ವಿದ್ಯುತ್ ಆಶ್ರಯಿಸಿದ್ದಾರೆ. ಇದೇ ಉದ್ದೇಶದಿಂದ ಕ್ಷೇತ್ರದ ಎಲ್ಲಾ ಕಡೆ ಚೆಕ್ ಡ್ಯಾಂ, ಬ್ಯಾರೇಜ್, ಹೊಸಕೆರೆ ಕಟ್ಟಿಸಿದ್ದೇನೆ. ದೇವರ ಕೃಪೆಯಿಂದ ಉತ್ತಮ ಮಳೆ ಬಂದಿದ್ದು, ಬಹುತೇಕ ಎಲ್ಲಾ ಚೆಕ್ ಡ್ಯಾಂಗಳು ಭರ್ತಿಯಾಗಿವೆ. ಇದರಿಂದ ಒಂದು ವರ್ಷ ರೈತರು ನಿರಾತಂಕವಾಗಿ ಬದುಕುವಂತಾಗಿದೆ’ ಎಂದು ಚಂದ್ರಪ್ಪ ತಿಳಿಸಿದರು.

‘₹3 ಕೋಟಿ ವೆಚ್ಚದಲ್ಲಿ ನಂದನ ಹೊಸೂರು ಕೆರೆ ದುರಸ್ತಿ ಮಾಡಿಸಿದ್ದೇನೆ. ಕೆರೆಯಾಗಳಹಳ್ಳಿ ಕೆರೆ ಅಭಿವೃದ್ಧಿಗೆ ₹ 1 ಕೋಟಿ ಅನುದಾನ ನೀಡಿದ್ದು, ಈಗ ಮತ್ತೆ ₹ 1 ಕೋಟಿ ಕೊಟ್ಟಿದ್ದೇನೆ. ಹೊರಕೆರೆ ದೇವರಪುರ, ಉಪ್ಪರಿಗೇನಹಳ್ಳಿ, ಕೊಳಾಳು ಭಾಗ ಪ್ರತಿವರ್ಷ ಬರಗಾಲಕ್ಕೆ ತುತ್ತಾಗುತ್ತಿರುವುದನ್ನು ಮನಗಂಡು ಈ ಭಾಗದ ಪ್ರಮುಖವಾಗಿರುವ ಗುಂಡಿಹಳ್ಳಕ್ಕೆ ಸರಣಿ ಚೆಕ್ ಡ್ಯಾಂ ನಿರ್ಮಿಸಿದ್ದೇನೆ. ಈಗ ಎಲ್ಲಾ ಚೆಕ್ ಡ್ಯಾಂಗಳು ತುಂಬಿದ್ದು, ಅಂತರ್ಜಲ ಹೆಚ್ಚಾಗಿದೆ’ ಎಂದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರವೀಣ್, ಸದಸ್ಯರಾದ ಸತೀಶ್, ಮಂಜಣ್ಣ, ಬಿಜೆಪಿ ಮುಖಂಡರಾದ ಚಂದ್ರಪ್ಪ, ಸಿದ್ದಪ್ಪ, ರಂಗಸ್ವಾಮಿ, ತಿಮ್ಮಣ್ಣ, ಶ್ರೀನಿವಾಸ್, ಎಲೆ ರಾಜಪ್ಪ, ದಿನೇಶ್, ವೀರೇಶ್ ಹಾಗೂ ಸುತ್ತಲಿನ ಗ್ರಾಮಗಳ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.

ದುಡ್ಡು ಕೊಟ್ಟರೆ ಬಂಗಾರ ಕೂಡ ಸಿಗುತ್ತದೆ. ಆದರೆ ನೀರು ಅತ್ಯಮೂಲ್ಯವಾಗಿದ್ದು ವ್ಯರ್ಥವಾಗದಂತೆ ತಡೆದು ನಿಲ್ಲಿಸಬೇಕು.
ಎಂ.ಚಂದ್ರಪ್ಪ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.