ಪಟ್ನಾ: ಬುಧವಾರದಿಂದ ಆರಂಭವಾಗಲಿರುವ ರಣಜಿ ಋತುವಿಗಾಗಿ 15 ಸದಸ್ಯರ ಬಿಹಾರ ತಂಡವನ್ನು ಘೋಷಣೆ ಮಾಡಲಾಗಿದೆ. ಈ ತಂಡದಲ್ಲಿ 14 ವರ್ಷದ ವೈಭವ್ ಸೂರ್ಯವಂಶಿ ಉಪನಾಯಕನನ್ನಾಗಿ ನೇಮಿಸಲಾಗಿದೆ. ಸಕಿಬುಲ್ ಗನಿ ಬಿಹಾರ ತಂಡವನ್ನು ಮುನ್ನಡೆಸಲಿದ್ದಾರೆ.

ಅಕ್ಟೋಬರ್ 15 ರಿಂದ ಪಟ್ನಾದ ಮೊಯಿನ್-ಉಲ್-ಹಕ್ ಕ್ರೀಡಾಂಗಣದಲ್ಲಿ ನಡೆಯಲಿರುವ ರಣಜಿ ಸೀಸನ್ನ ಮೊದಲ ಪಂದ್ಯದಲ್ಲಿ ಬಿಹಾರ ತಂಡವು ಅರುಣಾಚಲ ಪ್ರದೇಶವನ್ನು ಎದುರಿಸಲಿದೆ. ಸದ್ಯ, ಬಿಹಾರ ಕ್ರಿಕೆಟ್ ಅಸೋಸಿಯೇಷನ್ ಘೋಷಿಸಿರುವ ತಂಡದಲ್ಲಿ ವೈಭವ್ ಸೂರ್ಯವಂಶಿ ಉಪನಾಯಕನಾಗಿ ನೇಮಿಸಲಾಗಿದೆ.

ಕಳೆದ ರಣಜಿ ಋತುವಿನಲ್ಲಿ ಬಿಹಾರ ತಂಡ ಒಂದೇ ಒಂದು ಜಯ ಸಾಧಿಸಿರಲಿಲ್ಲ. ವೈಭವ್ ಸೂರ್ಯವಂಶಿ ತನ್ನ 12ನೇ ವಯಸ್ಸಿನಲ್ಲಿ 2023–24ರಲ್ಲಿ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ್ದರು.

ಇದಾದ ಬಳಿಕ ತನ್ನ 13ನೇ ವಯಸ್ಸಿನಲ್ಲಿ ರಾಜಸ್ಥಾನ ರಾಯಲ್ಸ್ ಪರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪದಾರ್ಪಣೆ ಮಾಡುವ ಮೂಲಕ ಐಪಿಎಲ್ನಲ್ಲಿ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಮಾತ್ರವಲ್ಲ, ಇತ್ತೀಚೆಗೆ ಆಸ್ಟ್ರೇಲಿಯಾ ಅಂಡರ್–19 ವಿರುದ್ಧ ನಡೆದ ಟಿ20, ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ಅಂಡರ್–19 ತಂಡದಲ್ಲಿ ಸ್ಥಾನ ಪಡೆದು, ಗಮನಾರ್ಹ ಪ್ರದರ್ಶನ ತೋರಿದ್ದರು.

ಮುಂದಿನ ವರ್ಷದ ಆರಂಭದಲ್ಲಿ ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿರುವ ಅಂಡರ್ -19 ವಿಶ್ವಕಪ್ನಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇರುವುದರಿಂದ ಸೂರ್ಯವಂಶಿ ಬಿಹಾರ ಪರ ಪೂರ್ಣ ಋತುವಿನಲ್ಲಿ ಆಡುವ ಸಾಧ್ಯತೆ ಕಡಿಮೆ.

ಬಿಹಾರ ತಂಡ:

ಪಿಯೂಷ್ ಕುಮಾರ್ ಸಿಂಗ್, ಭಾಷ್ಕರ್ ದುಬೆ, ಸಕಿಬುಲ್ ಗನಿ (ನಾಯಕ), ವೈಭವ್ ಸೂರ್ಯವಂಶಿ (ಉಪನಾಯಕ), ಅರ್ನವ್ ಕಿಶೋರ್, ಆಯುಷ್ ಲೋಹರುಕ, ಬಿಪಿನ್ ಸೌರಭ್, ಅಮೋದ್ ಯಾದವ್, ನವಾಜ್ ಖಾನ್, ಸಾಕಿಬ್ ಹುಸೇನ್, ರಾಘವೇಂದ್ರ ಪ್ರತಾಪ್ ಸಿಂಗ್, ಸಚಿನ್ ಕುಮಾರ್ ಸಿಂಗ್, ಹಿಮಾಂಶು ಸಿಂಗ್, ಖಾಲಿದ್ ಆಲಂ, ಸಚಿನ್ ಕುಮಾರ್ ಸ್ಥಾನ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.